ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯಾರ್ಥಿಗಳಿಗೆ ಪೋಷಕರು ಪ್ರಾಥಮಿಕ ಹಂತದಲ್ಲೇ ದೇಶದ ಬಗ್ಗೆ ಗೌರವ, ಧರ್ಮ, ಸಂಸ್ಕಾರ, ಸಂಸ್ಕೃತಿ ಬಗ್ಗೆ ತಿಳಿಸಿ ಸಮಾಜದಲ್ಲಿ ಸತ್ಪ್ರಜೆಯಾಗಿ ಬೆಳೆಸಬೇಕು ಎಂದು ರೈತ ಮುಖಂಡ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.ವಳಗೆರೆದೊಡ್ಡಿ ಗ್ರಾಮದ ಶ್ರೀಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟಿನ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹಮ್ಮಿಕೊಂಡಿದ್ದ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುಟಾಣಿ ಮಕ್ಕಳು ಕೃಷ್ಣನ ವೇಷ ಧರಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಕೃಷ್ಣನ ವೇಷ ಧರಿಸಿದ್ದ ಪುಟಾಣಿಗಳು, ಮಡಕೆ ಹೊಡೆಯುವ ಮುಖಾಂತರ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಶ್ರೀ ಕೃಷ್ಣನ ಭಾವಚಿತ್ರವನ್ನು ತೊಟ್ಟಿಲಲ್ಲಿ ಇಟ್ಟು ತೂಗುವ ಮೂಲಕ ಕಾರ್ಯಕ್ರಮ ನಡೆಸಲಾಯಿತು. ಗಣ್ಯರಿಗೆ ನಡೆದ ಮೊಸರು ಕಡೆದು ಬೆಣ್ಣೆ ತೆಗೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿದ್ದರು. ಶ್ರೀಕೃಷ್ಣನ ವೇಷ ಧರಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಸಲಾಯಿತು.ಕಾರ್ಯಕ್ರಮದಲ್ಲಿ ಶಾಲೆ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ರಕ್ಷಿತಾ, ಮೇಲ್ವಿಚಾರಕಿ ಎಚ್.ವಿ.ಶ್ವೇತಕುಮಾರಿ ಹಾಗೂ ಅಕ್ಷತಾ ಅಶ್ವಿನ್ ಕುಮಾರ್ ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಇಂದು 5 ಸಾವಿರ ಮಹಿಳೆಯರಿಗೆ ಬಾಗಿನ ಕೊಡುವ ಕಾರ್ಯಕ್ರಮ: ಎಸ್.ಸಚ್ಚಿದಾನಂದಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗೌರಿ ಹಬ್ಬದ ಅಂಗವಾಗಿ ಆ.17ರಂದು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಸುಮಾರು 5 ಸಾವಿರ ಮಹಿಳೆಯರಿಗೆ ಬಾಗಿನ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ತಿಳಿಸಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಿದ್ದಗೊಳ್ಳುತ್ತಿರುವ ವೇದಿಕೆ ವೀಕ್ಷಣೆ ಬಳಿಕ ಮಾತನಾಡಿದ ಅವರು, ನಮ್ಮ ತಂದೆ ಹೆಸರಿನಲ್ಲಿ ಸ್ಥಾಪಿತ ಟ್ರಸ್ಟ್ ಮೂಲಕ ಪಟ್ಟಣ ವ್ಯಾಪ್ತಿಯ ತಾಯಂದಿರು, ಸಹೋದರಿಯರಿಗೆ ಗೌರಿ-ಗಣೇಶ ಹಬ್ಬದ ಅಂವಾಗಿ ಬಾಗಿನ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಹಿಳೆಯರು ಭಾಗವಹಿಸಿ ಪ್ರೀತಿಯಿಂದ ಕೊಡುವ ಬಾಗಿನವನ್ನು ಸ್ವೀಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಶ್ರೀರಾಮುಲು, ನಾರಾಯಣಗೌಡ, ಮಹೇಶ್ ಸೇರಿದಂತೆ ರೈತ ನಾಯಕ ಕೆ.ಎಸ್.ನಂಜುಂಡೇಗೌಡ, ಜಿಲ್ಲಾಧ್ಯಕ್ಷ ಇಂದ್ರೇಶ್, ಮಂಡಲ ಅಧ್ಯಕ್ಷ ಪಿಹಳ್ಳಿ ರಮೇಶ್, ಜಿಲ್ಲಾ ನಾಯಕರಾದ ಸಿದ್ದರಾಮಯ್ಯ, ಶ್ರೀಧರ್, ಲಿಂಗರಾಜಣ್ಣ ಸೇರಿದಂತೆ ಪಕ್ಷದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಕ್ಷಿಯಾಗಲಿದ್ದಾರೆ ಎಂದರು.ಈ ವೇಳೆ ಪುರಸಭೆ ಸದಸ್ಯರಾದ ಗಂಜಾಂ ಕೃಷ್ಣಪ್ಪ, ಶಿವು, ಎಸ್.ಟಿ ರಾಜು, ಸಾಮಿಯಾನ ಪುಟ್ಟರಾಜು, ಸೊಸೈಟಿ ಉಪಾಧ್ಯಕ್ಷ ಪುಟ್ಟರಾಮು, ಪ್ರಭಾಕರ್, ಚೇತನ್, ಅಭಿ, ಶೇಖರ್ ಸೇರಿದಂತೆ ಇತರರು ಇದ್ದರು.