ಸಿಂಧನೂರು:
ಕಾರ್ಯಕ್ರಮ ಉದ್ಘಾಟಿಸಿದ ಒಕ್ಕೂಟದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಸ್ಕಿ ವಕೀಲ, ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಸರ್ಕಾರದ ಕೆಲವು ಕಡ್ಡಾಯ ನಿಯಮಗಳು ಸಮಸ್ಯೆಯಾಗಿ ಕಾಡುತ್ತಿವೆ. ಅವುಗಳನ್ನು ಸಡಿಲುಗೊಳಿಸಬೇಕು ಎಂದರು.
ಧಾರವಾಡದ ಶಿಕ್ಷಣ ತಜ್ಞ ಮುಕ್ಕುಂದ್ ಮೈಗೂರ್ ಅವರು ವಿವಿಧ ಪ್ರಾತ್ಯಕ್ಷತೆಯ ಮೂಲಕ ವಿಶೇಷ ಉಪನ್ಯಾಸ ನೀಡಿ, ಬುದ್ದಿವಂತ ವಿದ್ಯಾರ್ಥಿಗಳನ್ನು ಪ್ರವೇಶ ಪಡೆದು ಅತಿಹೆಚ್ಚು ಅಂಕ ಗಳಿಸುವುದು ದೊಡ್ಡ ಸಾಧನೆ ಅಲ್ಲ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರವೇಶ ಪಡೆದು ಸುಧಾರಿಸುವುದು ಶಿಕ್ಷಕ ಸಂಸ್ಥೆಗಳ ಜವಾಬ್ದಾರಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ವೈ.ನರೇಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಮಲ್ಲನಗೌಡ ಕಾನಿಹಾಳ, ಆರ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಕಾಲೇಜ್ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಎನ್.ಸತೀಶ, ಪ್ರಧಾನ ಕಾರ್ಯದರ್ಶಿ ವೀರೇಶ ಅಗ್ನಿ, ಎ.ವೆಂಕಟೇಶ್ವರಲು, ಸದಸ್ಯೆ ಸರಸ್ವತಿ ಪಾಟೀಲ್ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಶಾಲಾ-ಕಾಲೇಜ್‍ಗಳ ಸುಮಾರು 70ಕ್ಕೂ ಅಧಿಕ ಉತ್ತಮ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಪನ್ಯಾಸಕ ತಿಮ್ಮಣ್ಣ ರಾಮತ್ನಾಳ ನಿರೂಪಿಸಿದರು