ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹೊಸಸಾಯಪನಹಳ್ಳಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಹಲವು ಮಹಾನೀಯರು ಹೋರಾಟ ನಡೆಸಿದ್ದಾರೆ ಎಂದರು.
ಭಾಷೆ, ಸಂಸ್ಕೃತಿ ಉಳಿದರೆ ಮಾತ್ರ ನಾವುಗಳು ಉಳಿಯಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು, ಅನ್ಯಭಾಷಿಗರಿಗೆ ಕನ್ನಡ ಭಾಷೆ, ಭಾಷಿಗರ ಬಗ್ಗೆ ಪ್ರೀತಿ ಇರಲಿ. ಆದರೆ, ಕನ್ನಡ ಭಾಷೆ ಬಗ್ಗೆ ಹೆಮ್ಮೆ, ಗೌರವ ಹೊಂದಿರಬೇಕು. ಬೆಂಗಳೂರು ಸೇರಿದಂತೆ ನಾಡಿನ ಗಡಿಭಾಗಗಳಲ್ಲಿ ಕನ್ನಡ ಭಾಷೆಗೆ ಸ್ವಲ್ಪ ಹೊಡೆತ ಬೀಳುತ್ತಿದೆ. ನಾವೆಲ್ಲರು ಭಾಷೆ ರಕ್ಷಣೆ ಬಗ್ಗೆ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.ನಾನು ಮೊದಲ ಬಾರಿಗೆ ಶಾಸಕನಾದಾಗ ತಾಲೂಕಿನ ಒಂದು ತಿಂಗಳ ಕಾಲ ಕನ್ನಡ ಹಬ್ಬವನ್ನು ಆಚರಣೆ ಮಾಡಿದ್ದೆ. ಆ ಕಾರ್ಯಕ್ರಮ ಇತಿಹಾಸಪುಟ ಸೇರಿದೆ. ಕನ್ನಡ ಭಾಷೆ ವಿಚಾರದಲ್ಲಿ ನಾವೆಂದು ನಿರ್ಲಕ್ಷ್ಯತೋರಿಸಲ್ಲ. ನಾವೆಲ್ಲರು ಭಾಷೆ ವಿಚಾರದಲ್ಲಿ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಸಿ.ಯಶ್ವಂತ್‌ಕುಮಾರ್ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಅಪ್ಪಟ್ಟ ಕನ್ನಡಾಭಿಮಾನಿಗಳು. ಕನ್ನಡ ಭಾಷೆ, ನೆಲೆ, ಸಾಹಿತ್ಯದ ವಿಚಾರದಲ್ಲಿ ಅಪಾರ ಕಾಳಜಿಗೌರವವನ್ನು ಹೊಂದಿದ್ದಾರೆ. ಅವರು ಶಾಸಕರಾಗಿದ್ದ ಅವಧಿಯಲ್ಲಿ ಪಟ್ಟಣದ ಕ್ರೀಡಾಂಗಣದಲ್ಲಿ ಒಂದು ತಿಂಗಳ ಕಾಲ ಕನ್ನಡ ಹಬ್ಬ ನಡೆಸಿದ್ದರು. ಇದು ರಾಜ್ಯದಲ್ಲಿಯೇ ಇತಿಹಾಸದ ಪುಟ ಸೇರಿದೆ ಅಂತಹ ಕಾರ್ಯಕ್ರಮವನ್ನು ಇಂದಿಗೂ ಯಾರಿಂದಲೂ ನಡೆಸಲು ಸಾಧ್ಯವಾಗಿಲ್ಲ ಎಂದರು.
ಇದೇ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂಧಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್, ಮುಖಂಡರಾದ ಕ್ಯಾತನಹಳ್ಳಿ ಚೇತನ್, ಮಲ್ಲಿಗೆರೆ ಚಂದ್ರಣ್ಣ, ರವಿಕರ, ಕಪ್ಪಡಿಗೌಡ, ಎಂ.ಎಸ್.ಜಗದೀಶ್, ನಂಜೇಗೌಡ, ಲೋಕೇಶ್, ಗಂಗಾಧರ್ ಸೇರಿದಂತೆ ಹೊಸಸಾಯಪನಹಳ್ಳಿ ಮತ್ತು ಸುಂಡಹಳ್ಳಿ ಗ್ರಾಮಸ್ಥರು, ಸಿಎಸ್‌ಪಿ ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದರು.