ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕನ್ನಡ ಭಾಷೆ, ನೆಲಕ್ಕೆ ಪ್ರಾಚೀನ ಪರಂಪರೆಯಿದೆ. ರಾಮಾಯಣ ಮಹಾಭಾರತ, ಬೌದ್ಧ, ಜೈನ ಕೃತಿಗಳಲ್ಲಿ ಕನ್ನಡ ನಾಡಿನ ಉಲ್ಲೇಖವಿದೆ. ತನ್ನ ಸಂಸ್ಕೃತಿಯನ್ನು ಪ್ರೀತಿಸುತ್ತಾ ಎಲ್ಲರ ವಿಚಾರಗಳನ್ನು ಗೌರವಿಸುವ ಸೌಹಾರ್ದದ ನಾಡು ಕರ್ನಾಟಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯ. ಇಂಗ್ಲಿಷ್ ಮಾಧ್ಯಮದ ಓದು ನಮಗೆ ನಮ್ಮ ನೆಲದ ಸಂಸ್ಕೃತಿಯ ಜೊತೆಗಿನ ಸಂಬಂಧವನ್ನು ದೂರಮಾಡುತ್ತದೆ. ಜಪಾನಿನಲ್ಲಿ ಅವರ ಮಾತೃಭಾಷೆಯಲ್ಲಿಯೇ ಶಿಕ್ಷಣ ವ್ಯವಹಾರಗಳು ನಡೆಯುತ್ತವೆ. ಕನ್ನಡದಲ್ಲೂ ಅದು ಸಾಧ್ಯವಾಗಬೇಕು ಎಂದರು.ಸಮಾರಂಭದಲ್ಲಿ ಆಳ್ವಾಸ್ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಡೀನ್ ಡಾ. ಪ್ರವೀಣ್ ರಾಜ್, ಸಹ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ ಎಂ., ಉಪನ್ಯಾಸಕರಾದ ಡಾ. ಶಿವಕುಮಾರ್ ಎಂ.ಕೆ, ಡಾ. ದೀಪಕ್ ಆರ್., ಡಾ. ಮಹಾಲಸಾ, ಕನ್ನಡ ವೇದಿಕೆ ಅಧ್ಯಕ್ಷ ಸಿದ್ಧಾರ್ಥ್, ಉಪಾಧ್ಯಕ್ಷೆ ನಿತ್ಯಾ ಬಿ. ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಂಪು ಕಾರ್ಯಕ್ರಮ ನಿರೂಪಿಸಿದರು. ಡೊಳ್ಳುಕುಣಿತ, ಹುಲಿವೇಷ, ಕಂಸಾಳೆ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.