ಕನ್ನಡ ಪ್ರಭ ವಾರ್ತೆ, ಮುಧೋಳ
ತಾಲೂಕಿನ ಹಲಗಲಿ ಗ್ರಾಮದ ಶ್ರೀ ಕಲ್ಮಠದಲ್ಲಿ ತಿಂಗಳ ಸಂಗಮ ಮಾಸಿಕ ಕಾರ್ಯಕ್ರಮದಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಮೊದಲು ತಂದೆ-ತಾಯಿಗಳಲ್ಲಿ ಸಂಸ್ಕಾರ ಇರಬೇಕಾಗುತ್ತದೆ ಎಂದರು.
ಶ್ರೀಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಪಾಲಕರು ಮಕ್ಕಳಿಗೆ ಕೊಟ್ಟ ಸಂಸ್ಕಾರವೇ ಅವರ ವ್ಯಕ್ತಿತ್ವವನ್ನು ಕಾಪಾಡುತ್ತದೆ, ಮನುಷ್ಯನ ನಡೆ - ನುಡಿ ಚೆನ್ನಾಗಿದ್ದರೆ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಅಧ್ಯಕ್ಷತೆವಹಿಸಿ ಮಾತನಾಡಿ ತಾಯಿ ಮಗುವಿಗೆ ಪ್ರೀತಿ ಕೊಟ್ಟರೆ, ತಂದೆ ಪ್ರೀತಿ ಜೊತೆಗೆ ಶಿಸ್ತನ್ನು ಕಲಿಸಿ ಕೊಡುವನು. ಪಾಲಕರು ಮಕ್ಕಳಿಗೆ ಶಿಸ್ತನ್ನು ಕಲಿಸುವುದರ ಜೊತೆಗೆ ಸಮಯದ ಮಹತ್ವ ಕಲಿಸಿ ಕೊಡಬೇಕು. ವಿದ್ಯೆ ಪಡದವನು ಭ್ರಷ್ಟನಾಗಬಹುದು. ಆದರೆ, ಸಂಸ್ಕಾರ ಪಡೆದವ ಎಂದೂ ಭ್ರಷ್ಟನಾಗಲಾರ. ಸಂಸ್ಕಾರದ ಕೊರತೆಯಿಂದ ಉನ್ನತ ಶಿಕ್ಷಣ ಪಡೆದುಕೊಂಡವರೇ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.