ಕನ್ನಡಪ್ರಭ ವಾರ್ತೆ ಗೋಕಾಕ
ನಗರದ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ ಮಾಧ್ಯಮ ಕ್ರೀಡೋ ಫ್ರೀ ನರ್ಸರಿ ಶಾಲೆಯಲ್ಲಿ ಹಮ್ಮಿಕೊಂಡ ಗ್ರ್ಯಾಜುವೇಷನ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಪ್ರಕೃತಿಯ ಪರಿಚಯದೊಂದಿಗೆ ಸ್ವಾಭಾವಿಕವಾಗಿ ಕಲಿಸಿರಿ. ಪ್ರಾಯೋಗಿಕ ಕಲಿಕೆಯನ್ನು ಮಕ್ಕಳು ಆಸಕ್ತಿಯಿಂದ ಕಲಿಯುತ್ತಾರೆ. ಆಟವಾಡುತ್ತಾ ಮಕ್ಕಳು ಕಲಿಯುವುದು ಪರಿಣಾಮಕಾರಿಯಾಗಿರುತ್ತದೆ. ಚಟುವಟಿಕೆಗಳಿಂದ ಮಕ್ಕಳ ಜ್ಞಾನದ ಮಟ್ಟವನ್ನು ಹೆಚ್ಚಿಸಿ ಅವರನ್ನು ಪ್ರತಿಭಾವಂತರಾಗಿ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷೆ ಸುವರ್ಣ ಜಾರಕಿಹೊಳಿ ಉದ್ಘಾಟಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ, ಆಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ, ಮುಖ್ಯೋಪಾಧ್ಯಾಯರುಗಳಾದ ಎಚ್.ವಿ.ಪಾಗನಿಸ, ಆರ್.ಎಂ.ದೇಶಪಾಂಡೆ, ಪಿ.ವಿ.ಚಚಡಿ ಇದ್ದರು.