ಶಾಲಾ ಹಂತದಲ್ಲಿಯೇ ಸಂಸ್ಕಾರ ಕಲಿಸಿ: ಟಿ.ಕೆ.ರವಿಕುಮಾರ್

KannadaprabhaNewsNetwork |  
Published : Feb 05, 2025, 12:33 AM IST
ಪೋಟೋ 1 : ಟಿ.ಬೇಗೂರಿನಲ್ಲಿರುವ ಎಸ್.ಎಲ್.ಆರ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ 12ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಟಿ.ಕೆ.ರವಿಕುಮಾರ್, ಮಜಾ ಟಾಕೀಸ್ ಖ್ಯಾತಿಯ ರೇಖಾಮೋಹನ್ ಶಾಲಾ ಆಡಳಿತ ಮಂಡಳಿಯವರು ಸನ್ಮಾನಿಸಿದರು. | Kannada Prabha

ಸಾರಾಂಶ

ಇಂದಿನ ದಿನಗಳಲ್ಲಿ ಶಿಕ್ಷಣದ ಕೊರತೆಯಿಲ್ಲ. ಆದರೆ ಶಿಕ್ಷಣ ಪಡೆದ ನಂತರ ಮಕ್ಕಳು ಮೌಲ್ಯವನ್ನು ಬದಿಗೊತ್ತಿ ಕೆಟ್ಟ ಹೆಜ್ಜೆಯನ್ನಿಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಆದ್ದರಿಂದ ಶಾಲಾ ಹಂತದಲ್ಲಿಯೇ ಸಂಸ್ಕಾರ ಕಲಿಸುವ ಕೆಲಸವಾಗಬೇಕಿದೆ ಎಂದರು.

ದಾಬಸ್‍ಪೇಟೆ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯವನ್ನು ಕಲಿಸುವ ಕೆಲಸವಾಗಬೇಕಿದೆ. ಅದು ಇತ್ತೀಚಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಮುಖ್ಯಶಿಕ್ಷಕ ಟಿ.ಕೆ.ರವಿಕುಮಾರ್ ತಿಳಿಸಿದರು.

ಟಿ.ಬೇಗೂರಿನಲ್ಲಿರುವ ಎಸ್.ಎಲ್.ಆರ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ 12ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಶಿಕ್ಷಣದ ಕೊರತೆಯಿಲ್ಲ. ಆದರೆ ಶಿಕ್ಷಣ ಪಡೆದ ನಂತರ ಮಕ್ಕಳು ಮೌಲ್ಯವನ್ನು ಬದಿಗೊತ್ತಿ ಕೆಟ್ಟ ಹೆಜ್ಜೆಯನ್ನಿಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಆದ್ದರಿಂದ ಶಾಲಾ ಹಂತದಲ್ಲಿಯೇ ಸಂಸ್ಕಾರ ಕಲಿಸುವ ಕೆಲಸವಾಗಬೇಕಿದೆ ಎಂದರು.

ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ನರಸಿಂಹಯ್ಯ ಮಾತನಾಡಿ, ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶಾಲೆಯ ಜೊತೆಗೆ ಪೋಷಕರ ಪಾತ್ರವೂ ಅತೀ ಮುಖ್ಯವಾಗಿದೆ ಎಂದರು.

ಸಂಗೀತ ನಿರ್ದೇಶಕಿ ಹಾಗೂ ಮಜಾ ಟಾಕೀಸ್ ಖ್ಯಾತಿಯ ರೇಖಾಮೋಹನ್ ವಿದ್ಯಾರ್ಥಿ ಹಾಗೂ ಪೋಷಕರನ್ನು ತಮ್ಮ ಹಾಡಿನ ಮೂಲಕ ಸಂಗೀತದ ಕಡಲಲ್ಲಿ ತೇಲಿಸಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮೀರಂಗನಾಥ ಎಜುಕೇಷನಲ್ ಟ್ರಸ್ಟಿನ ಅಧ್ಯಕ್ಷೆ ಹನುಮಕ್ಕ. ನಿರ್ದೇಶಕರಾದ ಧನರಾಜ್, ರಾಜೇಶ್, ಡಾ. ರಂಗನಾಥ್, ಡಾ.ಪುಷ್ಪಲತಾ, ಗೀತಾ, ಮಾನಸ, ಮುಖ್ಯಶಿಕ್ಷಕ ಶ್ರೀನಿವಾಸ್ ಹಾಗೂ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳದಿ ಮಾರ್ಗ: 9 ಮೆಟ್ರೋ ನಿಲ್ದಾಣ ಬಳಿ ಹೊಸ ಬಿಎಂಟಿಸಿ ನಿಲ್ದಾಣ
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌