ಪ್ರಯೋಗಗಳ ಮೂಲಕ ‍ಮಕ್ಕಳಿಗೆ ವಿಜ್ಞಾನ ತಿಳಿಸಿ: ಪ್ರೊ. ಸಿ.ಎಸ್. ಅರಸನಾಳ

KannadaprabhaNewsNetwork |  
Published : Nov 06, 2026, 02:45 AM IST
4ಎಂಡಿಜಿ2.ಮುಂಡರಗಿ ಜೆ.ಟಿ.ಕೋಟೆ ಪ್ರೌಢಶಾಲೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಿಜ್ಞಾನ ಶಿಕ್ಷಕ ಲಿಂ. ಎಂ.ಬಿ.ಪೂಜಾರ ಗುರುಗಳ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ವಿಜ್ಞಾನ ಅಂದು -ಇಂದು ಕಾರ್ಯಕ್ರಮವನ್ನು ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ.ಡಂಬಳಮಠ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿಜ್ಞಾನವನ್ನು ಕೇವಲ ಬೋಧಿಸುವುದಕ್ಕಿಂತ ಪ್ರಯೋಗಳ ಮೂಲಕ ಮಕ್ಕಳಿಗೆ ತಿಳಿಸಿದರೆ ಆ ವಿಷಯ ಮತ್ತಷ್ಟು ಮನನವಾಗಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮುಂಡರಗಿ

ವಿಜ್ಞಾನವನ್ನು ಕೇವಲ ಬೋಧಿಸುವುದಕ್ಕಿಂತ ಪ್ರಯೋಗಳ ಮೂಲಕ ಮಕ್ಕಳಿಗೆ ತಿಳಿಸಿದರೆ ಆ ವಿಷಯ ಮತ್ತಷ್ಟು ಮನನವಾಗಲು ಸಾಧ್ಯವಾಗುತ್ತದೆ. ಲಿಂ ಎಂ.ಬಿ. ಪೂಜಾರ ಗುರುಗಳು ಪ್ರತಿಯೊಂದು ಪ್ರಯೋಗಗಳ ಮೂಲಕ ಪಾಠ ಮಾಡುತ್ತಿದ್ದುದರಿಂದ ಅವರೊಬ್ಬ ಶ್ರೇಷ್ಠ ವಿಜ್ಞಾನ ಶಿಕ್ಷಕರಾಗಿದ್ದರು ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಸಿ.ಎಸ್.ಅರಸನಾಳ ಹೇಳಿದರು.

ಸ್ಥಳೀಯ ಜೆ.ಟಿ. ಕೋಟೆ ಪ್ರೌಢಶಾಲೆಯಲ್ಲಿ ತಾಲೂಕಾ ಕಸಾಪ ಹಮ್ಮಿಕೊಂಡಿದ್ದ ವಿಜ್ಞಾನ ಶಿಕ್ಷಕ ಲಿಂ. ಎಂ.ಬಿ.ಪೂಜಾರ ಗುರುಗಳ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ವಿಜ್ಞಾನ ಅಂದು-ಇಂದು ಕುರಿತು ಉಪನ್ಯಾಸ ನೀಡಿದರು. ನೈಸರ್ಗಿಕ ಘಟನೆಗಳು, ಭೌತಿಕ ಪ್ರಪಂಚ ಮತ್ತು ವಿಶ್ವದಲ್ಲಿಯ ಆಗು-ಹೋಗುಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಿ ಪ್ರಾಯೋಗಿಕವಾಗಿ ಮತ್ತು ತರ್ಕಬದ್ದವಾಗಿ ಸತ್ಯವನ್ನು ವಿಜ್ಞಾನ ಹೇಳುತ್ತದೆ. ಈ ವಿಜ್ಞಾನದಲ್ಲಿಯೂ ಧರ್ಮ ಇದ್ದರೆ ದೇಶದ ಪ್ರಗತಿ ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದರು.

ಭುವನೇಶ್ವರಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ. ಡಂಬಳಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಾ ಕಸಾಪ ಅಧ್ಯಕ್ಷ ಪ್ರೊ ಎಂ.ಜಿ. ಗಚ್ಚಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್.ಎಸ್. ಶೇಡದ, ಕೆ.ಪರಮೇಶ್ವರ, ಪ್ರೊ. ಆರ್.ಎಲ್. ಪೋಲೀಸಪಾಟೀಲ, ನಾಗೇಶ ಹುಬ್ಬಳ್ಳಿ, ಷಣ್ಮುಖಪ್ಪ ಹಾಳಕೇರಿ, ಆರ್.ವೈ. ಪಾಟೀಲ, ಕೃಷ್ಣಮೂರ್ತಿ ಸಾಹುಕಾರ ಸೇರಿ ಅನೇಕರಿದ್ದರು.

ಮುಖ್ಯೋಪಾಧ್ಯಾಯ ಮಂಜುನಾಥ ತೆಗ್ಗಿನಮನಿ ಸ್ವಾಗತಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀಲಮ್ಮ ಚಿಕ್ಕಣ್ಣವರ ಕಾರ್ಯಕ್ರಮ ನಿರೂಪಿಸಿದರು. ಎಂ.ಟಿ. ಮಾಳಾಪೂರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ಪರಿಹಾರ ಡಬಲ್‌: ₹2500 ದಿಂದ ₹ 5000 ರು.ಗೆ ಹೆಚ್ಚಳ । ಮೊದಲ ಕಂತು ನಿನ್ನೆ ಬಿಡುಗಡೆ
ಸ್ಥಳೀಯ ಸಂಸ್ಥೆಗಳಿಗೆ ಬ್ಯಾಲೆಟ್‌ ಮೂಲಕವೇ ಚುನಾವಣೆ: ಖಂಡ್ರೆ