ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಬದುಕಿನ ಪಾಠ ಕಲಿಸಲಿ

KannadaprabhaNewsNetwork |  
Published : May 15, 2025, 01:33 AM IST
ಪೊಟೋ ಪೈಲ್ : 14ಬಿಕೆಲ್1 | Kannada Prabha

ಸಾರಾಂಶ

ಶಿಕ್ಷಕರಾದವರು ಸಮುದಾಯದೊಂದಿಗೆ ಬದುಕುವುದನ್ನು ಕಲಿತಾಗ ಉತ್ತಮ ಶಿಕ್ಷಕರಾಗಲು ಸಾಧ್ಯ

ಭಟ್ಕಳ: ಶಿಕ್ಷಕರಾದವರು ಸಮುದಾಯದೊಂದಿಗೆ ಬದುಕುವುದನ್ನು ಕಲಿತಾಗ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಬೈಂದೂರು ಪಪಂ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ. ಹೇಳಿದರು.

ಅವರು ಭಟ್ಕಳದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದವರು ಬೈಂದೂರು ತಾಲೂಕಿನ ಮುಲ್ಲಿಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಮುದಾಯ ಬದುಕಿನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಬದುಕಿನ ಪಾಠ ಕಲಿಸಲು ಶಿಕ್ಷಕರಾದವರು ಸಮುದಾಯದೊಂದಿಗೆ ಬೆರೆತಾಗ ಮಾತ್ರ ಉತ್ತಮ ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.

ಶಿಬಿರದಲ್ಲಿ ಬೈಂದೂರಿನ ರಂಗಕರ್ಮಿಗಳಾದ ಸತ್ಯನಾ ಕೊಡೇರಿ ಅವರಿಂದ ‘ರಂಗಗೀತೆಗಳು ಮತ್ತು ಲಲಿತಕಲೆ’, ಪತ್ರಕರ್ತ ಅರುಣಕುಮಾರ್ ಇವರಿಂದ ನಾಗರಿಕತೆ ನಿರ್ಮಾಣದಲ್ಲಿ ಶಿಕ್ಷಕರ ಮತ್ತು ಮಾಧ್ಯಮದ ಪಾತ್ರ, ರತ್ತುಬಾಯಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆನಂದ ಮದ್ದೋಡಿ ಇವರಿಂದ ‘ಶಿಕ್ಷಕರಿಂದ ಶ್ರೇಷ್ಠ ಸಮಾಜ ನಿರ್ಮಾಣ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನಡೆಯಿತು.

ಶಿಬಿರದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಥ್ಯೂ, ನಂದರಗದ್ದೆ, ಶೈಕ್ಷಣಿಕವಾಗಿ ಸಾಧನೆ ಮಾಡಿದ ಉಮೇಶ ಮರಾಠಿ ಹೊಸೂರು ಮತ್ತು ಸುಚಿತ್ರಾ ಪರಮೇಶ್ವರ್ ಮರಾಠಿ, ಒಲಂಪಿಯಾಡ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಂಶಿಕಾ , ಜನಪದ ಕ್ಷೇತ್ರದಲ್ಲಿ ಓಮಿ ಮರಾಠಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುರಭಿಯ ಸುಧಾಕರ ಬೈಂದೂರು ಅವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ ಉಪಸ್ಥಿತರಿದ್ದರು. ಬೈಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಎಸ್, ಎಸ್.ಡಿ.ಎಂ. ಸಿ ಅಧ್ಯಕ್ಷ ದಯಾನಂದ ಮರಾಠಿ, ಗಣೇಶೋತ್ಸವ ಸಮಿತಿ ಹೊಸೂರಿನ ಅಧ್ಯಕ್ಷ ವಾಸುದೇವ ಮರಾಠಿ , ಬಿಆರ್‌ಸಿ ಬೈಂದೂರಿನ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾಡಿಗ, ಉಧ್ಯಮಿಗಳಾದ ರಾಮಾ ಮೇಸ್ತ ಮತ್ತು ಪ್ರಸಾದ ಪ್ರಭು, ದುರ್ಗಾಪರಮೇಶ್ವರಿ ದೇವಸ್ಥಾನ ಹೊಸೂರಿನ ಅಧ್ಯಕ್ಷ ನಾಗಪ್ಪ ಮರಾಠಿ, ಮತ್ತು ಸಂಚಲನ(ರಿ) ಹೊಸೂರಿನ ಅಧ್ಯಕ್ಷ ನಾರಾಯಣ ಮರಾಠಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ನಾಗರಾಜ ಮಡಿವಾಳ ಸ್ವಾಗತಿಸಿದರು, ರಶ್ಮಿ, ನಮೃತಾ, ನಿಶ್ಚಿತಾ ಮತ್ತು ಗಣೇಶ ನಿರೂಪಿಸಿದರು, ಗಜಾನನ ಶಾಸ್ತ್ರಿ ವಂದಿಸಿದರು. ಮೊದಲೆರಡು ದಿನ ಸಂಜೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆದರೆ ಮೂರನೇ ದಿನ ಶಿಬಿರಾಗ್ನಿ ನಡೆಯಿತು.

ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಿಂದ ಬೈಂದೂರಿನ ಮುಲ್ಲಿಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಮುದಾಯ ಬದುಕಿನ ಶಿಬಿರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ