ಅಭಿವೃದ್ಧಿ ಮಾಡದ ಬಿಜೆಪಿ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಿ

KannadaprabhaNewsNetwork |  
Published : May 02, 2024, 12:17 AM IST
ಗಜೇಂದ್ರಗಡ ಜಿ.ಕೆ.ಬಂಡಿ ಗಾರ್ಡನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದಪ್ಪ ಬಂಡಿ ಮಾತನಾಡಿದರು. | Kannada Prabha

ಸಾರಾಂಶ

ಕ್ಷೇತ್ರದಲ್ಲಿನ ಜನತೆ ಯಾವುದೇ ಹೆದರಿಕೆ ದಬ್ಬಾಳಿಕೆ ಬಗ್ಗುವ ಜರೂರತ್ತಿಲ್ಲ. ನಮ್ಮ ಬಾಳೈ ಐತಿ, ನಮ್ಮ ಬದುಕೈತಿ, ನಮಗೆ ಬೇಕಾದವರನ್ನು ನಾವು ಆರಿಸುವ ಹಕ್ಕಿದೆ

ಗಜೇಂದ್ರಗಡ: ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದಿಂದ ೩ಬಾರಿ ಗೆಲುವು ಸಾಧಿಸಿದ್ದ ಸಂಸದರು ಅಭಿವೃದ್ಧಿ ಕೆಲಸದ ಬದಲು ಕೇವಲ ಮಾತಿನ ರೈಲು ಬಿಟ್ಟರು, ಈಗ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಬೊಮ್ಮಾಯಿ ಕೊಡುಗೆ ಕ್ಷೇತ್ರಕ್ಕೆ ಶೂನ್ಯವಾಗಿದ್ದು, ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ ಹೇಳಿದರು.

ಲೋಕಸಭಾ ಚುನಾವಣೆಯ ೨ನೇ ಹಂತದ ಮತದಾನ ಮೇ ೭ರಂದು ನಡೆಯುವ ಹಿನ್ನೆಲೆಯಲ್ಲಿ ಸ್ಥಳೀಯ ಜಿ.ಕೆ. ಬಂಡಿ ಗಾರ್ಡನಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಹಾಗೂ ೧೫ಕ್ಕೂ ಅಧಿಕ ಸಂಘ, ಸಂಸ್ಥೆಗಳ ಮುಖಂಡರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಜನತೆಗೆ ತಾಳ್ಮೆ ಬಹಳ, ಹೀಗಾಗಿ ಸತತ ಮೂರು ಬಾರಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಸಂಸದರನ್ನು ಗೆಲ್ಲಿಸಿ ಪಾರ್ಲಿಮೆಂಟ್‌ಗೆ ಕಳುಹಿಸಿದರೆ ಅವರು ಕೇವಲ ಮಾತಿನ ರೈಲು ಬಿಟ್ಟಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ ಈ ಭಾಗಕ್ಕೆ ಏನೂ ಕೊಡುಗೆ ನೀಡದ ಬೊಮ್ಮಾಯಿ ಈ ಕ್ಷೇತ್ರದವನಲ್ಲ, ದುಡ್ಡಿನಿಂದ ಗೆಲ್ಲುತ್ತೇವೆ ಎಂಬ ಅಹಂ ಇದೆ ಎಂದು ಏಕವಚನದಲ್ಲಿ ಹರಿಹಾಯ್ದರು. ಬಿಜೆಪಿ ಆಡಳಿತದಿಂದ ಜನತೆ ಭ್ರಮ ನಿರಸನಗೊಂಡಿದ್ದು, ಜನತೆ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ. ಕ್ಷೇತ್ರದಲ್ಲಿನ ಜನತೆ ಯಾವುದೇ ಹೆದರಿಕೆ ದಬ್ಬಾಳಿಕೆ ಬಗ್ಗುವ ಜರೂರತ್ತಿಲ್ಲ. ನಮ್ಮ ಬಾಳೈ ಐತಿ, ನಮ್ಮ ಬದುಕೈತಿ, ನಮಗೆ ಬೇಕಾದವರನ್ನು ನಾವು ಆರಿಸುವ ಹಕ್ಕಿದೆ. ಹೀಗಾಗಿ ನೀವು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ, ನಿಮ್ಮೊಂದಿಗೆ ನಾವು ಸದಾ ಇರಲಿದ್ದೇವೆ ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮೊದಲ ಹಂತದ ಚುನಾವಣೆ ಬಳಿಕ ಬಿಜೆಪಿ ವಲಯದಲ್ಲಿ ಸೋಲಿನ ಹತಾಶೆ ಕಾಡುತ್ತಿದೆ. ಹೀಗಾಗಿ ಅಭಿವೃದ್ಧಿ ಕಾರ್ಯ ಮುಂದಿಟ್ಟು ಮತಯಾಚಿಸುವ ಬದಲು ಜನರನ್ನು ಒಡೆದಾಳುವ ದಾಟಿಯಲ್ಲಿ ಮತ ಕೇಳುತ್ತಿದ್ದಾರೆ ಎಂದ ಅವರು, ಕ್ಷೇತ್ರದಲ್ಲಿ ಯಾವುದಕ್ಕೂ ಭಯಪಡಬಾರದು ಎಂದು ಸಿದ್ದಪ್ಪ ಬಂಡಿ ಎಂಬ ಗುಡ್ಡವನ್ನು ತಂದು ಕೂರಿಸಿದ್ದೇವೆ. ಪ್ರೀತಿ, ವಿಶ್ವಾಸದಿಂದ ಜನರ ಮನಸ್ಸನ್ನು ಗೆದ್ದು ಕಾಂಗ್ರೆಸ್ ಅಭ್ಯರ್ಥಿಯನ್ನು ಗಲ್ಲಿಸೋಣ ಎಂದರು.

ಈ ವೇಳೆ ಸುರೇಂದ್ರಸಾ ರಾಯಬಾಗಿ, ಅಜೀತ ಬಾಗಮಾರ, ಆರ್.ಎಂ. ರಾಯಬಾಗಿ ಹಾಗೂ ಮಹೇಶ ಮಾತನಾಡಿ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ವರ್ತಕರಿಗೆ ಆಗಿರುವ ತೊಂದರೆಗಳ ಬಗ್ಗೆ ಮಾತನಾಡಿದರೆ, ಪರಶುರಾಮ ಚಿಟಗಿ, ರಫೀಕ್ ಯಲಬುಣಚಿ, ಸಿದ್ದಪ್ಪ ಚಲವಾದಿ ಸೇರಿ ಇತರರು ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸುವದಾಗಿ ಮಾತನಾಡಿದರು.

ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಎಚ್.ಎಸ್. ಸೋಂಪುರ, ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ವೀರಣ್ಣ ಶೆಟ್ಟರ, ಬಿ.ಎಸ್. ಶೀಲವಂತರ, ರಫೀಕ್ ತೋರಗಲ್, ಮುತ್ತಣ್ಣ ಮ್ಯಾಗೇರಿ, ಉಮೇಶ ರಾಠೋಡ, ಮಂಗಲಾದೇವಿ ದೇಶಮುಖ, ಶರಣಪ್ಪ ಚಳಗೇರಿ, ಅಪ್ಪು ಮತ್ತಿಕಟ್ಟಿ, ಅರಿಹಂತ ಬಾಗಮಾರ ಸೇರಿ ಇತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ