ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಭಾನುವಾರ ತಾಲೂಕಿನ ನಾವಲಗಿ ಗ್ರಾಮದ ಶ್ರೀನೀಲಕಂಠೇಶ್ವರ ಮಠದ ಸಭಾಭವನದಲ್ಲಿ ನಡೆದ ದಿ.ಶಿಕ್ಷಕ ಗುರುಪಾದ ಹಿಪ್ಪರಗಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂಥ ಶಿಕ್ಷಕರು ಇಂದಿನ ದಿನದಲ್ಲಿ ಸಿಗುವುದು ಅಪರೂಪ. ಸಿಕ್ಕಿದ್ದು ಪುಣ್ಯ ಸರಳ ಸಜ್ಜನ ಶಿಕ್ಷಕನಾಗಿ ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ಪ್ರತಿ ವಿದ್ಯಾರ್ಥಿಗಳು ಅವರ ಆದರ್ಶ ತತ್ವ ಸಿದ್ಧಾಂತ ಪಾಲಿಸಿದಲ್ಲಿ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆಂದರು. ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಶಿಕ್ಷಕ ಹಿಪ್ಪರಗಿ ಕಾರ್ಯನಿಷ್ಠೆ ಅನುಕರಣೀಯ. ಅವರ ಅಗಲಿಕೆ ಸಮಾಜಕ್ಕೆ ತುಂಬು ನಷ್ಟ ಮಾಡಿದೆ. ಸಮಾಜಮುಖಿ ಶಿಕ್ಷಕರಾಗಿದ್ದ ಗುರುಪಾದರ ಹೆಸರಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಮಾಡುವುದಕ್ಕೆ ₹೫೧ ಸಾವಿರ ಸಹಾಯ ನೀಡುವುದಾಗಿ ಘೋಷಿಸಿದರು.
ಮರೇಗುದ್ದಿ ಗುರುಪಾದಶ್ರೀ, ಜಮಖಂಡಿ ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಆಶೀರ್ವಚನ ನಿಡಿದರು. ವೇದಿಕೆಯಲ್ಲಿ ಮುತ್ತೂರಿನ ಗಿರೀಶದೇವರು, ಕೊಪ್ಪಳದ ಯಶವಂತ ಶರಣರು, ಶ್ರೀಶೈಲಯ್ಯ ಹಿರೇಮಠ, ಕಾಶಿರಾಯ ಹಿಪ್ಪರಗಿ ಇದ್ದರು. ಶಿವಾನಂದ ಬಾಗಲಕೋಟಮಠ, ಶೇಖರ ನೀಲಕಂಠ, ಗುರು ಮರಡಿಮಠ, ದಾನಪ್ಪ ಆಸಂಗಿ, ಆನಂದ ಕಂಪು, ಹನುಮಂತ ಮಗದುಮ್, ಮಲ್ಲಪ್ಪ ಗಣಿ ಸೇರಿದಂತೆ ಅಪಾರ ಶಿಷ್ಯ ಬಳಗ ಉಪಸ್ಥಿತರಿದ್ದರು. ಪ್ರಕಾಶ ಪಟ್ಟಣಶೆಟ್ಟಿ ನಿರೂಪಿಸಿದರು. ಬಸವರಾಜ ಮುಧೋಳ ವಂದಿಸಿದರು.