ಶಿಕ್ಷಕ ಈರೇಶ್ ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : Oct 19, 2024, 12:30 AM IST
ಶಿಕ್ಷಕ ಈರೇಶ್ ನಾಮ ಪತ್ರ ಸಲ್ಲಿಕೆ. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೇಲೂರು ತಾಲೂಕು ಶಾಖೆಯ ಐದು ವರ್ಷಗಳ ಅವಧಿಯ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ಈರಯ್ಯ ಜಿ.ಜೆ (ಈರೇಶ್)ರವರು ಅಪಾರ ಸ್ನೇಹ ಬಳಗದೊಂದಿಗೆ ಇಂದು ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೇಲೂರು ತಾಲೂಕು ಶಾಖೆಯ ಐದು ವರ್ಷಗಳ ಅವಧಿಯ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ಈರಯ್ಯ ಜಿ.ಜೆ (ಈರೇಶ್)ರವರು ಅಪಾರ ಸ್ನೇಹ ಬಳಗದೊಂದಿಗೆ ಇಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ. 28ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೇಲೂರು ತಾಲೂಕು ಘಟಕದ ನಿರ್ದೇಶಕರ ಹುದ್ದೆಗೆ ಚುನಾವಣೆ ನಡೆಯುತ್ತಿದ್ದು, ಆತ್ಮೀಯರು, ಹಿತೈಷಿಗಳ ಮಾರ್ಗದರ್ಶನದಂತೆ ಇಂದು ನಾಮ ಪತ್ರಿಕೆ ಸಲ್ಲಿಕೆ ಮಾಡಿದ್ದು, ಈ ಹಿಂದೆ ನಾನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನನ್ನಿಂದ ಸಾಧ್ಯವಾದಷ್ಟು ಕಾನೂನಾತ್ಮಕವಾಗಿ ನಿಮ್ಮಗಳ ಸೇವೆ ಮಾಡಿರುವೆ. ಮುಂಬರುವ ರಾಜ್ಯ ಸರ್ಕಾರದ ನೌಕರರ ಚುನಾವಣೆಯಲ್ಲಿ ನಿಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ನಿಮ್ಮ ಸೇವೆಯ ಜೊತೆಗೆ ನಿಮ್ಮ ಕಷ್ಟಕ್ಕೆ ಧ್ವನಿಯಾಗುವ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಚಂದ್ರಶೇಖರ್, ಪಿ.ಡಿ ಈರಯ್ಯ, ರಾಜಯ್ಯ, ರುದ್ರೇಗೌಡ, ಮೋಕ್ಷ, ಸಣ್ಣಸ್ವಾಮಿ, ದೇವರಾಜು, ಪುಟ್ಟರಾಜು, ಸುರೇಶ್, ಯಲ್ಲಪ್ಪ, ಮಂಜುನಾಥ್, ಯಲ್ಲಯ್ಯ, ಲಕ್ಷ್ಮಣ, ಸಂದೀಪ್, ಬೈರೇಶ್, ರಾಮಯ್ಯ, ಪಾಂಡುರಂಗ, ಈಶ್ವರಪ್ಪ, ರುದ್ರೇಗೌಡ, ಬೈರೇಶಪ್ಪ, ಧರ್ಮಪ್ಪ, ಬಸವರಾಜ್, ಧರ್ಮಯ್ಯ, ಮಲ್ಲಿಕಾರ್ಜುನ, ಓಂಕಾರಪ್ಪ, ಶಿವಕುಮಾರ್, ಪಾಂಡು, ರಮೇಶಪ್ಪ, ಹೊಯ್ಸಳ, ಮಲ್ಲೇಶಪ್ಪ, ಗಂಗಾಧರಪ್ಪ, ಚಂದ್ರಶೇಖರ್, ತಿಮ್ಮಶೆಟ್ಟಿ, ನಾರಾಯಣ, ಮಹಾಲಿಂಗಪ್ಪ ಸೇರಿದಂತೆ ಮತ್ತಿತರರ ಶಿಕ್ಷಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ