ಶಿಸ್ತುಬದ್ಧ ಬದುಕಿಗೆ ರಾಮಣ್ಣ ಶಿಕ್ಷಕರು ಮಾದರಿ: ಡಿವೈಎಸ್ಪಿ ವೆಂಕಟಪ್ಪ

KannadaprabhaNewsNetwork |  
Published : Jun 01, 2026, 02:15 AM IST
31ಕೆಪಿಎಲ್22ಎ  ಕೊಪ್ಪಳ ರೈನ್ ಬೋ ಶಾಲೆಯಲ್ಲಿ ನಿವೃತ್ತರಾದ ಶಿಕ್ಷಕ ರಾಮಣ್ಣ ಬಾರಕೇರ ಅವರ ಸನ್ಮಾನ ಸಮಾರಂಭದ ಉದ್ಘಾಟನೆ | Kannada Prabha

ಸಾರಾಂಶ

ಅತ್ಯಂತ ಶಿಸ್ತುಬದ್ಧವಾಗಿ ಸೇವೆ ಸಲ್ಲಿಸಿ ಇಡೀ ತಮ್ಮ ವೃತ್ತಿ ಬದುಕನ್ನು ಮಕ್ಕಳ ಏಳ್ಗೆಗಾಗಿ ಶ್ರಮಿಸಿದ್ದಾರೆ

ಕೊಪ್ಪಳ: ಅತ್ಯಂತ ಶ್ರದ್ಧೆಯಿಂದ ವೃತ್ತಿ ಬದುಕಿನಲ್ಲಿ ಸೇವೆ ಮಾಡಿ, ಶಿಸ್ತುಬದ್ಧ ಬದುಕು ಸಾಗಿಸಿದವರಲ್ಲಿ ಶಿಕ್ಷಕ ರಾಮಣ್ಣ ಬಾರಕೇರ ಮಾದರಿಯಾಗಿದ್ದಾರೆ ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ಹೇಳಿದ್ದಾರೆ.

ತಾಲೂಕಿನ ಇರಕಲ್ಗಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ರಾಮಣ್ಣ ಬಾರಕೇರ ವಯೋನಿವೃತ್ತಿಯಾಗುವ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ರೈನ್ ಬೋ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅತ್ಯಂತ ಶಿಸ್ತುಬದ್ಧವಾಗಿ ಸೇವೆ ಸಲ್ಲಿಸಿ ಇಡೀ ತಮ್ಮ ವೃತ್ತಿ ಬದುಕನ್ನು ಮಕ್ಕಳ ಏಳ್ಗೆಗಾಗಿ ಶ್ರಮಿಸಿದ್ದಾರೆ.ಇಂಥ ಶಿಕ್ಷಕರು ಇತರರಿಗೆ ಮತ್ತು ಇಂದಿನ ನೂತನ ತಲೆಮಾರಿನ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಮಾತನಾಡಿ, ನಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಈಗ ನಿವೃತ್ತಿಯಾಗುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಅವರೊಂದಿಗೆ ನಾವು ಬೆಳೆದಿದ್ದೇವೆ. ಶಿಕ್ಷಕರಾಗಿ ಪ್ರಮಾಣಿಕವಾಗಿ ಸೇವೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಮಾತನಾಡಿ, ನಮ್ಮೂರಿನ ರಾಮಣ್ಣ ಬಾರಕೇರ ವ್ಯಕ್ತಿತ್ವ ಗ್ರಾಮದ ಅನೇಕರ ಮೇಲೆ ಪರಿಣಾಮ ಬೀರಿದೆ. ಅವರ ಕುಟುಂಬದವರು ಸೇರಿದಂತೆ ಅನೇಕರು ಬದುಕು ಹಸನವಾಗಲು ಶ್ರಮಿಸಿದ್ದಾರೆ ಎಂದರು.

ವೇದಿಕೆಯ ಮೇಲೆ ಜಾಕೀರಹುಸೇನ್, ಶಿವಾನಂದಯ್ಯ ಹಿರೇಮಠ, ಮಾರ್ತಂಡರಾವ್ ದೇಸಾಯಿ, ಹೇಮಣ್ಣ ಕವಲೂರು, ಶರಣಬಸನಗೌಡ, ಹನುಮಂತಪ್ಪ ಕುರಿ, ನಾಗನಗೌಡ ನಂದಿನಗೌಡ್ರ, ವೀರೇಶ ಲಕ್ಷಾಣಿ, ದೇವರಡ್ಡಿ ಮಾಟ್ರ, ಚಂದ್ರಶೇಖರ ಕಾವಲಿ, ಶಂಕರಪ್ಪ ಮಾಟ್ರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಪರವಾಗಿ ಹಂಪಿಯಲ್ಲಿ ಕಾಂಗ್ರೆಸ್‌ನಿಂದ ಪೂಜೆ
ವಿಜಯನಗರ ಜಿಲ್ಲೆಯಲ್ಲಿ ಇಂದಿನಿಂದ 1612 ಶಾಲೆ ಆರಂಭ