ಶಿಕ್ಷಕ ಸತೀಶ್, ಶೋಭಾಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Sep 27, 2024, 01:31 AM IST
ಚಿತ್ರ:  26ಎಂಡಿಕೆ1 : ಮಡಿಕೇರಿ ಮಿಸ್ಟಿ ಹಿಲ್ಸ್ ನಿಂದ ಸತೀಶ್ ಮತ್ತು ಶೋಭಾ ಅವರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.  | Kannada Prabha

ಸಾರಾಂಶ

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇಷನ್ ಬಿಲ್ಡರ್ಸ್‌ ಪ್ರಶಸ್ತಿಗಳನ್ನು ಮುಳ್ಳೂರು ಶಾಲಾ ಮುಖ್ಯೋಪಾಧ್ಯಾಯ ಸಿ.ಎಸ್ .ಸತೀಶ್ ಮತ್ತು ನಾಪೋಕ್ಲು ರಾಮಟ್ರಸ್ಟ್ ನ ಶಿಕ್ಷಕಿ ಬೊಳ್ಳಚೆಟ್ಟೀರ ಶೋಭಾ ವಿಜಯ ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇಷನ್ ಬಿಲ್ಡರ್ಸ್‌ ಪ್ರಶಸ್ತಿಗಳನ್ನು ಮುಳ್ಳೂರು ಶಾಲಾ ಮುಖ್ಯೋಪಾಧ್ಯಾಯ ಸಿ.ಎಸ್ .ಸತೀಶ್ ಮತ್ತು ನಾಪೋಕ್ಲು ರಾಮಟ್ರಸ್ಟ್ ನ ಶಿಕ್ಷಕಿ ಬೊಳ್ಳಚೆಟ್ಟೀರ ಶೋಭಾ ವಿಜಯ ಅವರಿಗೆ ಪ್ರದಾನ ಮಾಡಲಾಯಿತು.

ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮತ್ತು ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತ ಸಿ.ಎಸ್‌.ಸತೀಶ್‌ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಅಟ್ಟಣಿಗೆ ನಿರ್ಮಿಸಿ ಮೊಬೈಲ್ ಸಿಗ್ನಲ್ ಸಿಗುವಂತೆ ಮಾಡಿ ಶಿಕ್ಷಣ ನೀಡಿದ್ದು ಜಾಗತಿಕ ಮಟ್ಟದಲ್ಲಿ ಪ್ರಚಾರಕ್ಕೆ ಕಾರಣವಾಯಿತು, ತನ್ನ ಸೇವೆಗೆ ಸಾರ್ವಜನಿಕರು ನೀಡುತ್ತಿರುವ ಶ್ಲಾಘನೆ ಮತ್ತಷ್ಟು ಛಲ ತಂದಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಬೊಳ್ಳಚೆಟ್ಟೀರ ಶೋಭಾ ವಿಜಯ, ರೋಟರಿ ಮಿಸ್ಟಿ ಹಿಲ್ಸ್ ಶ್ರೀರಾಮಟ್ರಸ್ಟ್ ನಲ್ಲಿ ಮೊದಲು ಪ್ರಾರಂಭಿಸಿದ ಇಂಟರ್ಯಾಕ್ಟ್ ಕ್ಲಬ್ ನಿಂದಾಗಿ ವಿದ್ಯಾರ್ಥಿಗಳಲ್ಲಿ ಸಮಾಜಸೇವಾ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನೆರವಾಗಿದೆ, ನಾಯಕತ್ವ ಗುಣ ಬೆಳೆಸುವಲ್ಲಿ ಈ ಸಂಸ್ಥೆ ಸಹಕಾರಿಯಾಗಿದೆ, ವಿದ್ಯಾಥಿ೯ಗಳು ಮಾತ್ರವಲ್ಲದೇ ಶಿಕ್ಷಕ ವರ್ಗದಲ್ಲಿಯೂ ರೋಟರಿಯ ಸೇವಾ ಕಾರ್ಯಗಳು ಆದರ್ಶಪ್ರಾಯವಾಗಿವೆ ಎಂದರು.

ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಅನಿಲ್ ಎಚ್.ಟಿ., ಲೀನಾ ಪೂವಯ್ಯ ನಿರ್ವಹಿಸಿದರು. ಅಜಿತ್ ನಾಣಯ್ಯ ಸ್ವಾಗತಿಸಿದರು. ಬಿ.ಜಿ. ಅನಂತಶಯನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ