ಸ್ವಂತ ಖರ್ಚಲ್ಲಿ ದೇಶಿಪುರ ಶಾಲಾ ಮಕ್ಕಳಿಗೆ ಸಮವಸ್ತ್ರ ಹೊಲಿಸಿದ ಶಿಕ್ಷಕ

KannadaprabhaNewsNetwork |  
Published : Jan 26, 2026, 01:30 AM IST
ಅರ್ಧದಷ್ಟು ಸ್ವಂತ ಕಾಸಲ್ಲಿ ದೇಶಿಪುರ ಶಾಲಾ ಮಕ್ಕಳಿಗೆ ಸಮವಸ್ತ್ರ ಕೊಡಿಸಿದ ಶಿಕ್ಷಕ! | Kannada Prabha

ಸಾರಾಂಶ

ಕಾಡಂಚಿನ ದೇಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೦ ವರ್ಷ ಸೇವೆ ಸಲ್ಲಿಸಿದ ನೆನಪಿಗಾಗಿ ಪೋಷಕರ ಸಹಕಾರದಲ್ಲಿ ಶಾಲಾ ಮಕ್ಕಳಿಗೆ ಬ್ಲೇಜರ್‌, ಪ್ಯಾಂಟ್‌ ಹೊಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ದೇಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರೊಬ್ಬರು ಶಾಲೆಯಲ್ಲಿ ಹತ್ತು ವರ್ಷ ಕರ್ತವ್ಯ ನಿರ್ವಹಿಸಿದ್ದು, ದಶಕದ ನೆನಪಿಗಾಗಿ ಖಾಸಗಿ ಶಾಲೆಗಳಲ್ಲಿ ಧರಿಸುವ ಸಮವಸ್ತ್ರ ಮಾದರಿಯಲ್ಲಿ ಅರ್ಧದಷ್ಟು ಸ್ವಂತ ಹಣ ಹಾಕಿ ಸಮವಸ್ತ್ರ ಹೊಲಿಸಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

ಗ್ರಾಮದ ಶಾಲೆಯಲ್ಲಿ ೩೬ ವಿದ್ಯಾರ್ಥಿಗಳು ೧ ರಿಂದ ೭ ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಮಕ್ಕಳ ಪೋಷಕರೊಂದಿಗೆ ಶಾಲಾ ಮುಖ್ಯ ಶಿಕ್ಷಕ ನಂದೀಶ್‌ ಚರ್ಚಿಸಿ, ಮಕ್ಕಳಿಗೆ ಗುಣಮಟ್ಟದ ಬ್ಲೇಜರ್‌ ಹಾಗೂ ಪ್ಯಾಂಟ್‌ನ್ನು ಹೊಲಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಮುಖ್ಯ ಶಿಕ್ಷಕರು ಪಾತ್ರರಾಗಿದ್ದಾರೆ.

ಮುಖ್ಯ ಶಿಕ್ಷಕ ನಂದೀಶ್‌ ಹಾಗೂ ಪೋಷಕರ ಸಹಕಾರದಲ್ಲಿ ಶಾಲಾ ಮಕ್ಕಳಿಗೆ ಹೊಲಿಸಿದ ಬಟ್ಟೆಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ವಿತರಿಸಿ ಮುಖ್ಯ ಶಿಕ್ಷಕರ ಸೇವೆಗೆ ಸಲಾಂ ಎಂದರು.ಇದೇ ವೇಳೆ ಮುಖ್ಯ ಶಿಕ್ಷಕ ನಂದೀಶ್‌ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸತೀಶ್ ಅಭಿನಂದಿಸಿದರು.

ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸತೀಶ್, ಸಿಆರ್ ಪಿ ಚಂದ್ರಶೇಖರ್, ಎಸ್ಡಿಎಂಸಿ ಅಧ್ಯಕ್ಷ ಪ್ರಸನ್ನ, ಮುಖ್ಯ ಶಿಕ್ಷಕ ನಂದೀಶ್, ಎಸ್‌ ಡಿಎಂಸಿ ಸದಸ್ಯರು, ಸಹ ಶಿಕ್ಷಕರು, ಪೋಷಕರು ಸೇರಿದಂತೆ ಗ್ರಾಮಸ್ಥರು ಇದ್ದರು.

------

ಕಾಡಂಚಿನ ದೇಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೦ ವರ್ಷ ಸೇವೆ ಸಲ್ಲಿಸಿದ ನೆನಪಿಗಾಗಿ ಪೋಷಕರ ಸಹಕಾರದಲ್ಲಿ ಶಾಲಾ ಮಕ್ಕಳಿಗೆ ಬ್ಲೇಜರ್‌, ಪ್ಯಾಂಟ್‌ ಹೊಲಿಸಲಾಗಿದೆ.

-ನಂದೀಶ್‌,ಮುಖ್ಯ ಶಿಕ್ಷಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!