ಸುಂದರ ಸಮಾಜದ ನಿರ್ಮಾತೃಗಳೇ ಶಿಕ್ಷಕರು: ಪ್ರೇಮಾ

KannadaprabhaNewsNetwork |  
Published : Sep 13, 2026, 03:00 AM IST
ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಿಸಲಾಯಿತು. | Kannada Prabha

ಸಾರಾಂಶ

ಸುಂದರ ಸಮಾಜದ ನಿರ್ಮಾತೃಗಳೇ ಶಿಕ್ಷಕರು. ಶಿಕ್ಷಕ ವೃತ್ತಿ, ಕೇವಲ ಜೀವನ ವೃತ್ತಿಯಲ್ಲ. ಶ್ರದ್ಧೆಯಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಇರುವ ಗುರುತರ ಜವಾಬ್ದಾರಿಯಾಗಿದೆ.

ಗದಗ ಇನ್ನರ್‌ವೀಲ್ ಕ್ಲಬ್‌ದಿಂದ ಶಿಕ್ಷಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಗದಗ

ಸುಂದರ ಸಮಾಜದ ನಿರ್ಮಾತೃಗಳೇ ಶಿಕ್ಷಕರು. ಶಿಕ್ಷಕ ವೃತ್ತಿ, ಕೇವಲ ಜೀವನ ವೃತ್ತಿಯಲ್ಲ. ಶ್ರದ್ಧೆಯಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಇರುವ ಗುರುತರ ಜವಾಬ್ದಾರಿಯಾಗಿದೆ. ತ್ಯಾಗಮಯಿಯಾದ ಶಿಕ್ಷಕರ ಬದುಕು ಸದಾ ಆದರ್ಶಮಯವಾಗಿದೆ ಎಂದು ಇನ್ನರ್‌ವೀಲ್ ಕ್ಲಬ್‌ನ ಪಿಡಿಸಿ ಪ್ರೇಮಾ ಗುಳಗೌಡರ ಹೇಳಿದರು.

ನಗರದಲ್ಲಿ ಇನ್ನರ್‌ವೀಲ್ ಕ್ಲಬ್‌ದಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ನಡೆದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಶಿಕ್ಷಕರ ಮೌಲ್ಯಯುತ ಮಾರ್ಗದರ್ಶನವೇ ಮಕ್ಕಳು ಪಡೆಯುವ ಅನುಭವಗಳು. ಇದು ಮಕ್ಕಳ ಸಮಗ್ರ ಜೀವನಕ್ಕೆ ಪೂರಕವಾಗಿದೆ. ಪ್ರಯತ್ನ ಹಾಗೂ ಸ್ವ-ಪ್ರಯತ್ನ, ಶಿಕ್ಷಕ ಹಾಗೂ ವಿದ್ಯಾರ್ಥಿ ಮಧ್ಯೆ ಬೆಸುಗೆಯಾಗಿದ್ದು, ಮಕ್ಕಳ ಬಾಳಲ್ಲಿ ಬೆಳಕು ಬೀರಿ ಅವರನ್ನು ಉನ್ನತ ನಾಗರಿಕರನ್ನಾಗಿ ರೂಪಿಸುವ ಶ್ರಮಜೀವಿಗಳು ಶಿಕ್ಷಕ ಬಂಧುಗಳು ಎಂದರು.

ಕ್ಲಬ್‌ನ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿ, ಶಿಕ್ಷಣವು ಮಾನವನ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿಕಸಿಸುವ ಹಾಗೂ ಸಮಾನ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಿಸಿ, ರಾಷ್ಟ್ರೀಯ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಭೂತ ಅಂಶವಾಗಿದ್ದು, ಮಕ್ಕಳು ನವ ಸಮಾಜದ ನಿರ್ಮಾತೃಗಳು. ಅವರನ್ನು ಅಕ್ಷರದ ಮೂಲಕ ಸಧೃಢವಾಗಿಸುವಲ್ಲಿ ಶಿಕ್ಷಕ ಸಮುದಾಯ ಹಗಲಿರುಳು ಶ್ರಮಿಸುತ್ತಿದೆ ಎಂದರು.

ಕ್ಲಬ್‌ನ ಕಾರ್ಯದರ್ಶಿ ಪೂಜಾ ಭೂಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಬ್‌ದಿಂದ ಗುರುತಿಸಿದ ಅತ್ಯುತ್ತಮ ಶಿಕ್ಷಕರಾದ ಸರ್ಕಾರಿ ಪ್ರಾಥಮಿಕ ಶಾಲೆ ಸಿಂಗಟರಾಯನಕೇರಿ (ತಾಂಡಾ)ದ ಸರೋಜಾ ಬಂಡಿ, ಸ.ಪ್ರಾ. ಶಾಲೆ ನಂ. 2 ಗದಗದ ಕಮಲಾಕ್ಷಿ ರೇಷ್ಮೆ, ಸ.ಪ್ರಾ. ಶಾಲೆ ಯಕ್ಲಾಸಪುರದ ಸುರಯ್ಯ ನದಾಫ, ಗದಗ ಸ.ಪ್ರಾ. ಶಾಲೆ ನಂ. 13ರ ಸುಧಾ ಬೇವಿನಮಟ್ಟಿ, ಉರ್ದು ಪ್ರಾಥಮಿಕ ಶಾಲೆ ನಂ. 4 ಗದಗದ ಎನ್.ಎಚ್. ಜಕ್ಕಲಿ, ಎಚ್.ಪಿ.ಎಸ್. ಗಂಗಿಮಡಿಯ ರೇಣವ್ವ ಹಾದಿಮನಿ, ಪಿಪಿಜಿ ಪ್ರಾಥಮಿಕ ಶಾಲೆಯ ಉಡಚಮ್ಮ ವಾಲ್ಮೀಕಿ, ಎಚ್.ಪಿ.ಎಸ್. ನಂ. 8ರ ಎಸ್.ಎಚ್. ಮೊರಬರಡ್ಡಿ, ಎಲ್.ಪಿ.ಯು.ಎಸ್. ಕಣಗಿನಹಾಳದ ರವಿ ಕಟ್ಟಿಮನಿ ಅವರನ್ನು ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಲಾಯಿತು.

ಸಿಪಿಸಿಸಿ ಜಯಶ್ರೀ ಉಗಲಾಟದ, ಕ್ಲಬ್‌ನ ಉಪಾಧ್ಯಕ್ಷೆ ಶಿವಲೀಲಾ ಅಕ್ಕಿ, ಮೀನಾಕ್ಷಿ ಕೊರವನವರ, ವೀಣಾ ಕಾವೇರಿ, ಪುಷ್ಪಾ ಭಂಡಾರಿ, ವಿದ್ಯಾ ಶಿವನಗುತ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜರ್ಮನಿಯ ಗಣೇಶನಿಗೆ ಪುತ್ತೂರಿನಲ್ಲಿ ತಯಾರಾದ ರಜತ ಕಿರೀಟ
ರಷ್ಯಾದ ಬ್ರಿಕ್ಸ್ ಪರಿಸರ ಸಮ್ಮೇಳನದಲ್ಲಿ ವಿವೇಕ್ ಆಳ್ವ ಉಪನ್ಯಾಸ