ಶಿಕ್ಷಕರು ದೇಶ ನಿರ್ಮಾಣದ ಶಿಲ್ಪಿಗಳು

KannadaprabhaNewsNetwork | Published : Sep 19, 2024 2:00 AM

ಸಾರಾಂಶ

ಮೇಧಾವಿಗಳನ್ನು ರಾಷ್ಟ್ರಕ್ಕೆ ನೀಡುವವರು ಶಿಕ್ಷಕರು ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಇನ್ನರ್‌ ವ್ಹೀಲ್ ಅಧ್ಯಕ್ಷೆ ರೇಖಾ ಅಭಿಪ್ರಾಯಪಟ್ಟರು. ಅವರು ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ನಾವು ಶಿಕ್ಷಕಿ ಕುಸುಮ ಅವರನ್ನು ಅಭಿನಂದಿಸುತ್ತಿದ್ದೇವೆ. ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಶಾಲೆಯ ಪ್ರಗತಿಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಈ ಹಿಂದೆ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿರುವುದು ಸಹ ಇವರ ವ್ಯಕ್ತಿತ್ವವನ್ನು ಹೆಚ್ಚಿಸಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಕಾಳಜಿಯನ್ನು ವಹಿಸಲು ಭಗವಂತನು ಅವರಿಗೆ ಸ್ಫೂರ್ತಿಯನ್ನು ನೀಡಲಿ ಎಂದು ಅವರು ಹರಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮೇಧಾವಿಗಳಿಂದ ರಾಷ್ಟ್ರವು ಉನ್ನತ ಸ್ಥಿತಿಗೆ ಬೆಳೆಯಲು ಸಾಧ್ಯವಾಗುತ್ತದೆ. ಅಂತಹ ಮೇಧಾವಿಗಳನ್ನು ರಾಷ್ಟ್ರಕ್ಕೆ ನೀಡುವವರು ಶಿಕ್ಷಕರು ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಇನ್ನರ್‌ ವ್ಹೀಲ್ ಅಧ್ಯಕ್ಷೆ ರೇಖಾ ಅಭಿಪ್ರಾಯಪಟ್ಟರು.

ಅವರು ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ನಾವು ಶಿಕ್ಷಕಿ ಕುಸುಮ ಅವರನ್ನು ಅಭಿನಂದಿಸುತ್ತಿದ್ದೇವೆ. ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಶಾಲೆಯ ಪ್ರಗತಿಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಈ ಹಿಂದೆ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿರುವುದು ಸಹ ಇವರ ವ್ಯಕ್ತಿತ್ವವನ್ನು ಹೆಚ್ಚಿಸಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಕಾಳಜಿಯನ್ನು ವಹಿಸಲು ಭಗವಂತನು ಅವರಿಗೆ ಸ್ಫೂರ್ತಿಯನ್ನು ನೀಡಲಿ ಎಂದು ಅವರು ಹರಸಿದರು.

ಇನ್ನರ್‌ವ್ಹೀಲ್‌ ಕ್ಲಬ್ ಕೋಶಾಧಿಕಾರಿ ಶ್ವೇತಾ ಶಿಕ್ಷಕರ ವೃತ್ತಿ ನಿವೃತ್ತಿಯ ನಂತರವೂ ಸಮಾಜ ಬಹಳ ಗೌರವದಿಂದ ನೋಡುತ್ತದೆ. ಅಂತಹ ವೃತ್ತಿ ಎಲ್ಲರಿಗೂ ಲಭಿಸುವುದಿಲ್ಲ, ಈ ಒಂದು ಅವಕಾಶ ದೊರೆತಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ, ಆ ನಿಟ್ಟಿನಲ್ಲಿ ಕುಸುಮ ಯಶಸ್ವಿಯಾಗಿದ್ದಾರೆ ಎಂದರು.

ಅಭಿನಂದಿತರಾಗಿ ಮಾತನಾಡಿದ ಶಿಕ್ಷಕಿ ಕುಸುಮ, ಇನ್ನರ್‌ವ್ಹೀಲ್‌ ಸಂಸ್ಥೆಯು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಅನೇಕ ಶಾಲೆಗಳಿಂದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡುವಲ್ಲಿಯೂ ಯಶಸ್ವಿಯಾಗುತ್ತಾ ಬಂದಿದೆ. ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಸಮಾನ ಮನಸ್ಕರಾಗಿ ಕಾರ್ಯಾಲಯ ನಿರ್ವಹಿಸುತ್ತಿರುವುದರಿಂದ ಈ ಎಲ್ಲವೂ ಸಾಧ್ಯವಾಗಿದೆ. ಶಿಕ್ಷಕರ ದಿನಾಚರಣೆಯ ಮಾಸವಾಗಿರುವುದರಿಂದ ಇದೇ ಸಂದರ್ಭದಲ್ಲಿ ನನ್ನನ್ನು ಅಭಿನಂದಿಸಿರುವುದು ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ ನಾನು ಸಂಸ್ಥೆಗೆ ಆಭಾರಿಯಾಗಿದ್ದೇನೆ ಎಂದರು.

ಕಾರ್ಯದರ್ಶಿ ರಂಜಿತ ಮಾತನಾಡಿ, ಗುರುವಿನ ಮಹತ್ವವನ್ನು ತಿಳಿಸಿಕೊಟ್ಟರು. ರೋಹಿಣಿ ನಾಗೇಶ್ ಕಾರ್ಯಕ್ರಮವನ್ನು ನಿರ್ವಹಿಸಿದರಲ್ಲದೆ ಸಂಸ್ಥೆಯ ಕಾರ್ಯಕ್ರಮಗಳು ಯಶಸ್ವಿಯಾಗಲು ಸಹಕಾರ ನೀಡದ ಎಲ್ಲರನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರಾದ ಸಂಧ್ಯಾ, ಸುನೀತಾ, ಲತಾ, ಅಪೂರ್ವ ಮೊದಲಾದ ಸದಸ್ಯರು ಉಪಸ್ಥಿತರಿದ್ದರು.

ಶಿಕ್ಷಕರ ದಿನದ ಪ್ರಯುಕ್ತ ರಾಷ್ಟ್ರಪ್ರಶಸ್ತಿ ವಿಜೇತ ಕುಸುಮ ಮೇಡಂ ಅವರಿಗೆ ಸನ್ಮಾನಿಸಲಾಯಿತು. ಹಾಗೆಯೇ ಹಿರಿಯ ಪತ್ರಕರ್ತರಾದ ಸೀತಾರಾಮ್ ಸರ್ವರಿಗೂ ಕೂಡ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರಾದ ರೇಖಾ ಜಿತೇಂದ್ರ ಹಾಗೂ ಕಾರ್ಯದರ್ಶಿಗಳಾದ ರಂಜಿತ ವಿನಯ್ ಖಜಾಂಚಿಗಳಾದ ಶ್ವೇತಾ ಮೋಹನ್ ಅಪೂರ್ವ ಹಾಗೆ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

Share this article