ಗುರುಪರಂಪರೆ ಭಾರತದಲ್ಲಿ ಕಾಣಲು ಮಾತ್ರ ಸಾಧ್ಯ, ಬದುಕಲ್ಲಿನ ಅಂಧಕಾರವನ್ನು ತೊಡೆದು ಹಾಕಲು ಶ್ರಮಿಸುವ ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಮಹಾಶಿಲ್ಪಿಗಳು ಎಂದು ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಅಭಿಪ್ರಾಯ ಪಟ್ಟರು.
ಬ್ಯಾಡಗಿ: ಗುರುಪರಂಪರೆ ಭಾರತದಲ್ಲಿ ಕಾಣಲು ಮಾತ್ರ ಸಾಧ್ಯ, ಬದುಕಲ್ಲಿನ ಅಂಧಕಾರವನ್ನು ತೊಡೆದು ಹಾಕಲು ಶ್ರಮಿಸುವ ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಮಹಾಶಿಲ್ಪಿಗಳು ಎಂದು ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಅಭಿಪ್ರಾಯ ಪಟ್ಟರು.ಪಟ್ಟಣದ ಎಸ್.ಎಸ್.ಪಿಎನ್ ಶಾಲೆಯ 96-97ನೇ ಸಾಲಿನ ವಿದ್ಯಾರ್ಥಿಗಳು ನಡೆಸಿದ ಗುರುವಂದನೆ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಗುರು ಶಿಕ್ಷಣ ಪರಂಪರೆ ವೇದಗಳ ಕಾಲದಲ್ಲಿಯೇ ಖ್ಯಾತಿ ಪಡೆದಿತ್ತು. ನಾವು ವೇದಗಳನ್ನು ಓದುವ ಕಾಲದಲ್ಲಿ ಜಗತ್ತು ಇನ್ನು ನಾಗರಿಕತೆಯ ಬಗ್ಗೆ ಅರಿವಿಲ್ಲದೇ ಉಳಿದಿತ್ತು. ಇದು ನಮ್ಮ ಸಂಸ್ಕೃತಿ ಸಂಪ್ರದಾಯ ಹಾಗೂ ಬುದ್ಧಿಕ್ಷಮತೆಗೆ ಹಿಡಿದ ಸಾಕ್ಷಿಯಾಗಿತ್ತು ಎಂದರು.ಮಂಗಳಾ ವಿಭೂತಿ ಮಾತನಾಡಿ, ಶಾಲಾ ಅವಧಿಯಲ್ಲಿ ಕಲಿತ ಜ್ಞಾನ ಮಾತ್ರ ಬದುಕಿನ ಅಂತಿಮ ಹಂತದವರೆಗೂ ಜೊತೆಯಲ್ಲಿ ಇರಲಿದೆ. ತಾವು ಗಳಿಸಿದ ಆಸ್ತಿ-ಅಂತಸ್ತು ಯಾವುದೂ ಶಿಕ್ಷಣಕ್ಕೆ ಸಾಟಿಯಾಗುವುದಿಲ್ಲ. ಹೀಗಾಗಿ ಜ್ಞಾನವನ್ನು ಧಾರೆಯೆರೆದ ಶಿಕ್ಷಕರನ್ನು ಸದಾಕಾಲ ಸ್ಮರಿಸಿಕೊಳ್ಳಬೇಕಾಗುತ್ತದೆ. ಆದರೆ ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲರಾಗಲು ಶಿಕ್ಷಣವೆ ಕಾರಣ ವೆಂಬುದನ್ನು ಮರೆಯಬಾರದು. ಅಷ್ಟಕ್ಕೂ ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರು ಜ್ಞಾನ ನೀಡಿದ ಪ್ರಾಧ್ಯಾಪಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.ಶಿಕ್ಷಕ ಸುಭಾಷ ಯಲಿ ಮಾತನಾಡಿ, ನಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ತಮ್ಮ ಬದುಕಿಗೆ ಬೇಕಾದ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅವರೆಲ್ಲರೂ ಒಂದು ಸಿದ್ಧಾಂತ ರೂಢಿಸಿಕೊಳ್ಳುವ ಮೂಲಕ ದೇಶವು ನೀಡಿದಂತಹ ಜವಾಬ್ದಾರಿಗಳನ್ನು ನಿಭಾಯಿಸಬೇಕು ಅಂದಾಗ ಮಾತ್ರ ಉನ್ನತ ಶಿಕ್ಷಣದ ಫಲಿತಾಂಶವು ಬರಲಿದೆ ಎಂದರು.
ಕಾರ‍್ಯಕ್ರಮವನ್ನು ನಿವೃತ್ತ ಪ್ರಾಚಾರ‍್ಯ ಎಸ್.ಬಿ. ತವರದ ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಕೆ. ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಕಾರ‍್ಯಕ್ರಮದಲ್ಲಿ ಎಂ.ಕೆ. ಹೊಸಮನಿ, ಎಂ.ವಿ. ನೆಲವಗಿ, ಬಿ.ಎಫ್. ದೊಡ್ಡಮನಿ, ಎಸ್.ಎನ್.ಪೋಲೇಶಿ, ಎ.ಕೆ.ಕುಲಕರ್ಣಿ, ಎಸ್.ಎಸ್. ಮಹಾರಾಜಪೇಟ್, ಜಿ.ಎಚ್. ಹುಲ್ಲತ್ತಿ, ಸುಮಂಗಲಾ ಎಚ್.ಜಿ., ಆರ್.ಬಿ. ಮಠದ, ನಾಗರಾಜ ಕುಳೆನೂರ, ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.