ಶಿಕ್ಷಕನಿಗೆ ಸಮಾಜ ಬದಲಾಯಿಸುವ ಶಕ್ತಿ

KannadaprabhaNewsNetwork |  
Published : Aug 10, 2025, 01:34 AM IST
೦೮ ವೈಎಲ್‌ಬಿ ೦೩ಯಲಬುರ್ಗಾದ ಎಸ್.ಎ.ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಬಳ್ಳಾರಿ ವಿಎಸ್‌ಕೆವಿವಿ ಹಾಗೂ ಕೊಪ್ಪಳ ವಿವಿ ವಿಭಾಗ ಮಟ್ಟದ ಗುರುವಂದನಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ರವರು ಮೊದಲು ಶಿಕ್ಷಕರಾದವರು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಅದರ ಪಾವಿತ್ರ‍್ಯತೆಯನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆದು ಅವರ ತತ್ವಾದರ್ಶ ಪಾಲಿಸಬೇಕು.

ಯಲಬುರ್ಗಾ:

ಶಿಕ್ಷಕರು ಗುರು ಪರಂಪರೆಯ ಬಗ್ಗೆ ಆದರ್ಶ ಇಟ್ಟುಕೊಳ್ಳಬೇಕು. ಉತ್ತಮ ಶಿಕ್ಷಕನಿಗೆ ಸಮಾಜ ಬದಲಾಯಿಸುವ ಶಕ್ತಿ ಇದೆ ಎಂದು ವಿಭಾಗೀಯ ಪ್ರಮುಖರು ಹಾಗೂ ಪ್ರಾಚಾರ್ಯ ಶಿವಾನಂದ ಮೇಟಿ ಹೇಳಿದರು.

ಪಟ್ಟಣದ ಎಸ್.ಎ. ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಬಳ್ಳಾರಿ ವಿಎಸ್‌ಕೆವಿವಿ ಹಾಗೂ ಕೊಪ್ಪಳ ವಿವಿ ವಿಭಾಗ ಮಟ್ಟದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ರವರು ಮೊದಲು ಶಿಕ್ಷಕರಾದವರು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಅದರ ಪಾವಿತ್ರ‍್ಯತೆಯನ್ನು ಅವರು ಕಾಪಾಡಿಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆದು ಅವರ ತತ್ವಾದರ್ಶ ಪಾಲಿಸಬೇಕು. ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಂಡು ಒಳ್ಳೆಯ ನಡವಳಿಕೆಯಿಂದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ, ಗುರು ಶಿಷ್ಯಪರಂಪರೆ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದು ಪವಿತ್ರ ಪ್ರೇಮದ ಸಂಕೇತ ಎಂದು ಬಣ್ಣಿಸಿದರು. ಉಪನ್ಯಾಸಕ ಪವನಕುಮಾರ ಗುಂಡೂರ ಮಾತನಾಡಿದರು. ಉಪನ್ಯಾಸಕ ಶರಣಬಸಪ್ಪ ಬಿಳೆಯಲಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪ್ರಾಚಾರ್ಯ ಡಾ. ಪ್ರಕಾಶ, ವಿ.ಎಸ್. ಶಿವಪ್ಪಯ್ಯನಮಠ, ವೀರೇಶ ಪತ್ತಾರ, ವಿದ್ಯಾ ಹೊಸಮನಿ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುವೆಂಪು ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಶ್ರೀ ಶ್ಯಾಮ್ ಸುಂದರ್ ಹೆಗ್ಡೆ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!