ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗಿದೆ: ಶಾಸಕ

KannadaprabhaNewsNetwork |  
Published : Sep 07, 2026, 02:30 AM IST
5ಕೆಬಿಪಿಟಿ.2.ಬಂಗಾರಪೇಟೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಹಾಕವಿ ಕಾಳಿದಾಸರು ತಮ್ಮ ನಾಟಕ ಮಾಳವೀಕಗ್ನಿಮಿತ್ರಂನಲ್ಲಿ ಆಳವಾದ ಜ್ಙಾನವನ್ನು ಹೊಂದಿರುವ ಮತ್ತು ಆ ಜ್ಙಾನವನ್ನು ಪರಿಣಾಮಕಾರಿಯಾಗಿ ಪಸರಿಸುವ ಸಾಮರ್ಥ್ಯವನ್ನು ಹೊಂದಿರುವಾತನೇ ಉತ್ತಮ ಶಿಕ್ಷಕ ಎಂದು ಬರೆದಿದ್ದಾರೆ.

ಬಂಗಾರಪೇಟೆ: ಮಕ್ಕಳ ಭವಿಷ್ಯ,ವ್ಯಕ್ತಿತ್ವ ಹಾಗೂ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಇರುವುದು ಕೇವಲ ಶಿಕ್ಷಕರಿಗೆ ಮಾತ್ರ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ನಗರದ ಹೊರವಲಯದ ಎಸ್.ಎನ್.ಸಿಟಿಯಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಉತ್ತಮ ಶಿಕ್ಷಕರ ಬಗ್ಗೆ ಪ್ರಾಚೀನ ಕಾಲದಿಂದ ಇರುವ ಒಳನೋಟವು ಇಂದಿಗೂ ಪ್ರಸ್ತುತ ಶತಮಾನಗಳ ಹಿಂದೆ ಮಹಾಕವಿ ಕಾಳಿದಾಸರು ತಮ್ಮ ನಾಟಕ ಮಾಳವೀಕಗ್ನಿಮಿತ್ರಂನಲ್ಲಿ ಆಳವಾದ ಜ್ಙಾನವನ್ನು ಹೊಂದಿರುವ ಮತ್ತು ಆ ಜ್ಙಾನವನ್ನು ಪರಿಣಾಮಕಾರಿಯಾಗಿ ಪಸರಿಸುವ ಸಾಮರ್ಥ್ಯವನ್ನು ಹೊಂದಿರುವಾತನೇ ಉತ್ತಮ ಶಿಕ್ಷಕ ಎಂದು ಬರೆದಿದ್ದಾರೆ ಎಂದರು.

ಇದೇ ವೇಳೆ ಉತ್ತಮ ಶಿಕ್ಷಕರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ತಹಸೀಲ್ದಾರ್ ಸುಜಾತ, ಬಿಇಒ ಚಂದ್ರಶೇಖರ್, ಇಒ ರವಿಕುಮಾರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿ,ಎಲ್.ರಾಮಕೃಷ್ಣ, ಅಪ್ಪಯ್ಯಗೌಡ, ಎಚ್.ಎಲ್.ಆನಂದ್, ಆರ್.ನಾಗಾನಂದ ಕೆಂಪರಾಜ್, ಮುನಿರಾಜು, ರಾಜಪ್ಪ, ಕಸಾಪ ಅಧ್ಯಕ್ಷ ಆರ್.ಅಶ್ವತ್, ಸುಜಾತ, ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ನಾಗೇಂದ್ರ, ಭೂ ಬ್ಯಾಂಕ್ಆಂ ಅಧ್ಯಕ್ಷ ರಘುನಾಥ್, ಆಂಜನೇಯಗೌಡ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಯಿಂದ ಶಿಸ್ತು, ಆತ್ಮವಿಶ್ವಾಸ ವೃದ್ಧಿ: ಎಸ್ಪಿ ದೀಪನ್ ಎಂ.ಎನ್.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಜಾಸೇವಾ ಆಂದೋಲನದಲ್ಲಿ 1383 ಅರ್ಜಿ ಸಲ್ಲಿಕೆ