ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 15 ಶಿಕ್ಷಕರ ಆಯ್ಕೆ

KannadaprabhaNewsNetwork |  
Published : Sep 04, 2026, 02:45 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ತಲಾ ಐವರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರವಾರ: 2026- 27ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 15 ಶಿಕ್ಷಕರು ಆಯ್ಕೆಯಾಗಿದ್ದಾರೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ತಲಾ ಐವರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಡಿಬಾಗ ನಂ. 2ರ ವಿಶಾಂತ ನಾಯ್ಕ, ಅಂಕೋಲಾದ ಮಳಲಗಾಂವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಮೇಶ ಕೇಶವ ಹೆಗಡೆ, ಕುಮಟಾದ ನೆಹರುನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೈಲಾ ದಿನಕರ ನಾಯ್ಕ, ಹೊನ್ನಾವರ ತಾಲೂಕಿನ ಖಂಡೋಡಿ ಶಾಲೆಯ ಲಕ್ಷ್ಮಣ ಮಂಜುನಾಥ ಪಟಗಾರ ಹಾಗೂ ಭಟ್ಕಳ ತಾಲೂಕಿನ ಬಬ್ಬನಕಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಯಶವಂತ ಆರ್. ನಾಯ್ಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರದ ಕೋಡಿಬಾಗ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಕನ್ನಡ ಶಾಲೆಯ ಶೋಭಾ ಆರ್. ಕಾಮತ, ಅಂಕೋಲಾದ ಗುಂಡಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೋಭಾ ಸಣ್ಣಪ್ಪ ನಾಯಕ, ಕುಮಟಾದ ಗುಡಿಗಾರಗಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರಾಮಚಂದ್ರ ಸುಬ್ರಾಯ ಶೆಟ್ಟಿ, ಹೊನ್ನಾವರ ತಾಲೂಕಿನ ಸಂಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಲ್ವದೋರ್ ಮಿಂಗ್ಲಿ ಲೋಪಿಸ್ ಹಾಗೂ ಭಟ್ಕಳ ತಾಲೂಕಿನ ಮಡಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾದೇವಿ ಟಿ. ಹರಿಕಾಂತ ಆಯ್ಕೆಯಾಗಿದ್ದಾರೆ.ಪ್ರೌಢಶಾಲಾ ವಿಭಾಗದಲ್ಲಿ ಕಾರವಾರ ತಾಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರ ಪ್ರೌಢಶಾಲೆಯ ಸಂತೋಷ ಭರಮಾಣಿ ಕಾಂಬಳೆ, ಅಂಕೋಲಾದ ಅವರ್ಸಾ ಶ್ರೀ ಕಾತ್ಯಾಯಿನಿ ಹೈಸ್ಕೂಲ್‌ನ ವಿನಾಯಕ ನಾಯಕ, ಕುಮಟಾದ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ನ ರಾಮಕೃಷ್ಣ ಎನ್. ನಾಯಕ, ಹೊನ್ನಾವರ ತಾಲೂಕಿನ ಚಿತ್ತಾರದ ಸರಕಾರಿ ಪ್ರೌಢಶಾಲೆಯ ಭಾರತಿ ಆನಂದು ಶಾನಭಾಗ ಹಾಗೂ ಭಟ್ಕಳ ತಾಲೂಕಿನ ಬೆಳಕೆ ಸರ್ಕಾರಿ ಪ್ರೌಢಶಾಲೆಯ ಪ್ರಕಾಶ ಮಾಧವ ಶಿರಾಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 18 ಶಿಕ್ಷಕರು ಆಯ್ಕೆ

ಕಾರವಾರ: ಶಿರಸಿ ಶೈಕ್ಷಣಿಕ ಜಿಲ್ಲೆಯ ವತಿಯಿಂದ 2026- 27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರು ಆಯ್ಕೆಯಾಗಿದ್ದಾರೆ.ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ ಹಾಗೂ ಜೋಯಿಡಾ ತಾಲೂಕುಗಳಿಂದ ತಲಾ ಒಬ್ಬರಂತೆ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿಯ ಹಾರೇಪಾಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅರುಣ ಭಟ್ಟ, ಸಿದ್ದಾಪುರ ತಾಲೂಕಿನ ಕಂಚಿಕೈ ಶಾಲೆಯ ಪ್ರೇಮಾ ನಾಯ್ಕ, ಯಲ್ಲಾಪುರ ತಾಲೂಕಿನ ಆನಗೋಡ ಶಾಲೆಯ ಮಾರುತಿ ಆಚಾರಿ, ಮುಂಡಗೋಡ ತಾಲೂಕಿನ ಸಂಜಯನಗರ ಶಾಲೆಯ ಗಣೇಶ ಸುಬ್ರಾಯ್ ಆಚಾರಿ, ಹಳಿಯಾಳ ತಾಲೂಕಿನ ಕೆ.ಕೆ. ಹಳ್ಳಿ ಶಾಲೆಯ ಸುಜಾತಾ ಎ.ಆರ್. ಹಾಗೂ ಜೋಯಿಡಾ ತಾಲೂಕಿನ ಕೊಂದರ ಶಾಲೆಯ ಈರಣ್ಣ ಪಗಡಿ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿಯ ಕಸ್ತೂರಬಾ ನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಹಾದೇವ ಸಂಭಾಜಿ, ಸಿದ್ದಾಪುರ ತಾಲೂಕಿನ ಹೊಸೂರು ಶಾಲೆಯ ಗಣಪತಿ ಗೊಂಡ, ಯಲ್ಲಾಪುರ ತಾಲೂಕಿನ ಶಿರನಾಲ ಶಾಲೆಯ ಸತೀಶ ಶೆಟ್ಟಿ, ಮುಂಡಗೋಡ ತಾಲೂಕಿನ ಮಳಗಿ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲೆಯ ಪುಷ್ಪಲತಾ ಗೋವಿಂದರಾಯ್ ನಾಯಕ, ಹಳಿಯಾಳ ತಾಲೂಕಿನ ಚಿಬ್ಬಲಗೇರಿ ಶಾಲೆಯ ಬೇಬಿ ದೊಡ್ಡಾ ಬೋರಕರ ಹಾಗೂ ಜೋಯಿಡಾ ತಾಲೂಕಿನ ರಾಮನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾ ಸೀತಾರಾಮ ದೇಸಾಯಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಶಿರಸಿ ತಾಲೂಕಿನ ಇಸಳೂರು ಸರ್ಕಾರಿ ಪ್ರೌಢಶಾಲೆಯ ದಿವಾಕರ ಮರಾಠಿ, ಸಿದ್ದಾಪುರ ತಾಲೂಕಿನ ಕಾನಸೂರಿನ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆಯ ಪ್ರವೀಣ ಕುರುಬರ್, ಯಲ್ಲಾಪುರ ತಾಲೂಕಿನ ಕಿರವತ್ತಿ ಕೆಪಿಎಸ್ ಪ್ರೌಢಶಾಲೆಯ ನಾಗರಾಜ ಟಿ. ನಾಯ್ಕ, ಮುಂಡಗೋಡದ ಸರ್ಕಾರಿ ಪದವಿಪೂರ್ವ ಕಾಲೇಜು(ಪ್ರೌಢ ವಿಭಾಗ) ನಂ.1ರ ರಮೇಶ ಪವಾರ, ಹಳಿಯಾಳ ತಾಲೂಕಿನ ತೇರಗಾಂವ ಸರಕಾರಿ ಪ್ರೌಢಶಾಲೆಯ ಅರುಣ ಬೊಮ್ಮಯ್ಯ ನಾಯಕ ಹಾಗೂ ಜೋಯಿಡಾ ತಾಲೂಕಿನ ತಿನೈಘಾಟ ಸರಕಾರಿ ಪ್ರೌಢಶಾಲೆಯ ಬಾಬು ತಾರಾಸಿಂಗ ಚವ್ಹಾಣ ಆಯ್ಕೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಜನನ ಪ್ರಮಾಣಪತ್ರ ಸೃಷ್ಟಿಸಿ ವಂಚನೆ: ಇಬ್ಬರಿಗೆ ಶಿಕ್ಷೆ
ಮನುಷ್ಯನಿಗೆ ಅರಿವಿನ ಬದುಕು ಅಗತ್ಯ: ರಾಘವೇಶ್ವರ ಭಾರತೀ ಶ್ರೀ