ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವ: ಮೂವೆರ ಅನಿಲ ಕಾವೇರಿಯಮ್ಮ

KannadaprabhaNewsNetwork |  
Published : Sep 29, 2025, 12:05 AM IST
ನಾಪೋಕ್ಲು ಲಯನ್ಸ್  ಕ್ಲಬ್  ಮತ್ತು ಲಿಯೋ ಕ್ಲಬ್ ಆಶ್ರಯದಲ್ಲಿ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಮೂವೆರ ಅನಿಲ ಕಾವೇರಿಯಮ್ಮ ಅವರನ್ನುಸನ್ಮಾನಿಸಿ ಗೌರವಿಸಲಾಯಿತು ..================================================================= | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಇರುವ ಮಕ್ಕಳಿಗೆ ಶಿಕ್ಷಣ ನೀಡುವುದು ಸುಲಭದ ಮಾತಲ್ಲ. ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಕರು ವಿಶೇಷವಾದ ಕಾಳಜಿ ಶ್ರಮ ಪಡಬೇಕಾಗುತ್ತದೆ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡುವುದರ ಮೂಲಕ ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಗಮನಹರಿಸಬೇಕು ಎಂದು ನಿವೃತ್ತ ಶಿಕ್ಷಕಿ ಮೂವೆರ ಅನಿಲ ಕಾವೇರಿಯಮ್ಮ ಹೇಳಿದರು.

ಸ್ಥಳೀಯ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಆಶ್ರಯದ ವತಿಯಿಂದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಾವು ಸೇವೆ ಸಲ್ಲಿಸಿದ ಖಾಸಗಿ ಅನುದಾನಿತ ಶಾಲೆಯಲ್ಲಿ ಏಕೈಕ ಮಹಿಳಾ ಶಿಕ್ಷಕಿಯಾಗಿದ್ದು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸಿದ್ದೆ. ಬೋಧನೆಯೊಂದಿಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದು ನನ್ನ ಕರ್ತವ್ಯವಾಗಿತ್ತು. ಕ್ರೀಡೆ, ಶೈಕ್ಷಣಿಕ ಪ್ರವಾಸ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರನ್ನು ತೊಡಗಿಸಿಕೊಳ್ಳುವಲ್ಲಿ

ಮಹಿಳಾ ಶಿಕ್ಷಕರ ಜವಾಬ್ದಾರಿ ಪ್ರಮುಖವಾಗಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಇರುವ ಮಕ್ಕಳಿಗೆ ಶಿಕ್ಷಣ ನೀಡುವುದು ಸುಲಭದ ಮಾತಲ್ಲ. ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶಿಕ್ಷಕರು ವಿಶೇಷವಾದ ಕಾಳಜಿ ಶ್ರಮ ಪಡಬೇಕಾಗುತ್ತದೆ. ಉತ್ತಮ ಆಡಳಿತ ಮಂಡಳಿ, ಶಿಕ್ಷಕವೃಂದದ ಸಹಕಾರ, ಪ್ರೋತ್ಸಾಹವಿದ್ದಲ್ಲಿ ಶಿಕ್ಷಣ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು ಎಂದರು.ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಕೋಟೆರ ಪಂಚಮ್ ತಿಮ್ಮಯ್ಯ ಮಾತನಾಡಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಸಂಬಂಧ ಅನ್ಯೋನ್ಯವಾಗಿದ್ದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ದುಡಿದ ಕಾವೇರಿಯಮ್ಮ ಅವರ ಸೇವೆ ಸ್ಮರಣೀಯ ಎಂದರು. ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜ ಸೇವೆ ಸಂಸ್ಥೆಯ ಮುಖ್ಯ ಗುರಿ. ಸಂಸ್ಥೆ ವತಿಯಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಸದಸ್ಯರ ಸಹಕಾರ ಮುಖ್ಯ ಎಂದರು.

ಈ ಸಂದರ್ಭ ಲಯನ್ಸ್ ಕಬ್ಬಿನ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಸುನಿಲ್ ಪೊರ್ಕೊವಂಡ, ಅಪ್ಪಚೆಟ್ಟೋಳಂಡ ವನು ವಸಂತ, ಮಾದೆಯಂಡ ಮೈನಾ ಪೊನ್ನಮ್ಮ ರಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.

ಮುಕ್ಕಟಿರ ವಿನಯ್ ಮಾತನಾಡಿ ಜನವರಿ 4ರಂದು ನಾಪೋಕ್ಲುವಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ರೀಜನಲ್ ಕಾನ್ಫರೆನ್ಸ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ . ಕಾರ್ಯಕ್ರಮದ ಯಶಸ್ವಿ ಸಂಘಟನೆಗೆ ಎಲ್ಲರೂ ತನು, ಮನ, ಧನ ಸಹಾಯ ಮಾಡಬೇಕು ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಯಂಡ .ಬಿ.ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಾಂತೀಯ ರಾಯಭಾರಿ ನವೀನ್ ಅಂಬೇಕಲ್, ಲಯನ್ಸ್

ಜೋನ್ 2 ವಲಯ ಅಧ್ಯಕ್ಷ ನಟರಾಜ್ ಕೆಸ್ತೂರ್, ಜಿಲ್ಲಾ ಸಹ ಕಾರ್ಯದರ್ಶಿ ಲಯನ್ ಸುಮನ್ ಬಾಲಚಂದ್ರ, ಲಯನ್ಸ್ ಜಿಲ್ಲಾ ರಾಯಬಾರಿ ಮೋಹನ್ ದಾಸ್, ಲಯನ್ಸ್ ಎಸ್‌ಸಿ ಐಪಿ ಟ್ರೈನರ್ ಪ್ರೀತಂ ಪೊನ್ನಪ್ಪ, ಸ್ಥಳೀಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ಬನ್ಸಿ ಭೀಮಯ್ಯ, ಖಜಾಂಚಿ ವಸಂತ ಮುತ್ತಪ್ಪ, ಲಿಯೋ ಕ್ಲಬ್ ಅಧ್ಯಕ್ಷೆ ಕನ್ನಿಕಾ, ಕಾರ್ಯದರ್ಶಿ ಧೃವದೇವಯ್ಯ ಹಾಗೂ ಖಜಾಂಚಿ ಅನನ್ಯ ಉಪಸ್ಥಿತರಿದ್ದರು.

ಕಾಂಡಂಡ ರೇಖಾಪೊನ್ನಣ್ಣ ಪ್ರಾರ್ಥಿಸಿ ಯಂ.ಬಿ.ಕುಟ್ಟಪ್ಪಸ್ವಾಗತಿಸಿದರು. ಕುಂಡಿಯೊಳಂಡ ಗಣೇಶ್ ಮುತ್ತಪ್ಪ ದ್ವಜವಂದನೆ ನೆರವೇರಿಸಿ, ಬಡ್ಡಿರ ನಳಿನಿ ಪುವಯ್ಯ, ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಮಂದಪಂಡ ಪುಷ್ಪ ಅತಿಥಿಗಳ ಪರಿಚಯವನ್ನು ಮಾಡಿದರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ