ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಶಿಕ್ಷಕರ ಪಾತ್ರ ಪ್ರಮುಖ: ಯಲ್ಲಪ್ಪ ಹಂದ್ರಾಳ

KannadaprabhaNewsNetwork |  
Published : Feb 23, 2026, 02:30 AM IST
ಪೋಟೊ ಕ್ಯಾಪ್ಸನ್: ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಶ್ರೀಬಸಪ್ಪ ಮಲ್ಲಪ್ಪ ಹೊಸೂರ ಸರಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಮತ್ತು ಮಿಷನ್ 40ಪ್ಲಸ್ ಕಲಿಕಾ ಚಟುವಟಿಕೆ ಬ್ಯಾನರ್ ಉದ್ಘಾಟಸಿ ದೀಪಬೇಳಗಿಸಿದ ಡಯಟ್ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ, ಎಸ್ ಡಿ ಎಮ್ ಸಿ ಅಧ್ಯಕ್ಷ ಬಸಪ್ಪ ನರೇಗಲ್ ಇದ್ದರು.ಪೋಟೊ ಕ್ಯಾಪ್ಸನ್:ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಶ್ರೀಬಸಪ್ಪ ಮಲ್ಲಪ್ಪ ಹೊಸೂರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಿಷನ್ 40ಪ್ಲಸ್ ಕಲಿಕಾ ಚಟುವಟಿಕೆ ಬ್ಯಾನರ್ ಉದ್ಘಾಟಸಿದ ಎಸ್ ಡಿ ಎಮ್ ಸಿ ಅಧ್ಯಕ್ಷ ಬಸಪ್ಪ ನರೇಗಲ. ಗ್ರಾಮದ ಹಿರಿಯರು, ಗುರುವೃಂದ ಇದ್ದರು. | Kannada Prabha

ಸಾರಾಂಶ

ಮುಖ್ಯೋಪಾಧ್ಯಾಯ ಎ.ಎಲ್. ಬಿಜಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಬಸಪ್ಪ ಹೊಸೂರ ಅವರು ನೀಡಿದ ಭೂದಾನ ಮಾಡಿದ್ದರಿಂದ ನೂರಾರು ವಿದ್ಯಾರ್ಥಿಗಳ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿದೆ ಎಂದರು.

ಡಂಬಳ: ಕಲಿಕಾ ವಾತಾವರಣದಲ್ಲಿ ಬಹಳ‌ ಅತ್ಯಮೂಲ್ಯವಾದ ವಾತಾವರಣ ನಿರ್ಮಿಸಿ ವಿದ್ಯಾರ್ಥಿಗಳಿಗೆ ಜ್ಞಾನದ ಬುತ್ತಿ ಗಟ್ಟಿಗೊಳಿಸುತ್ತಿರುವ ಶಿಕ್ಷಕರ ಕಾರ್ಯ ಬಹಳ‌ ಅತ್ಯಮೂಲ್ಯವಾದದ್ದು ಎಂದು ಡಯಟ್ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ತಿಳಿಸಿದರು.

ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಬಸಪ್ಪ ಮಲ್ಲಪ್ಪ ಹೊಸೂರ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಮತ್ತು ಮಿಷನ್ 40 ಪ್ಲಸ್ ಕಲಿಕಾ ಚಟುವಟಿಕೆ ಬ್ಯಾನರ್ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೇವಕ ಮಲ್ಲನಗೌಡ ಪಾಟೀಲ ಮಾತನಾಡಿ, ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸಲು ಪಾಲಕರು ಜವಾಬ್ದಾರಿಯೂ ಸಾಕಷ್ಟಿದೆ ಎಂದರು.

ಮುಖ್ಯೋಪಾಧ್ಯಾಯ ಎ.ಎಲ್. ಬಿಜಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಬಸಪ್ಪ ಹೊಸೂರ ಅವರು ನೀಡಿದ ಭೂದಾನ ಮಾಡಿದ್ದರಿಂದ ನೂರಾರು ವಿದ್ಯಾರ್ಥಿಗಳ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿದೆ ಎಂದರು.

ವರದಿ ವಾಚನವನ್ನು ಶಿಕ್ಷಕಿ ಸಂಗೀತ ಪಾಟೀಲ ಮಂಡಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು. ಸಿಆರ್‌ಪಿ ಎಸ್‌.ಎಂ. ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಬಸಪ್ಪ ನರೇಗಲ್, ಉಪಾಧ್ಯಕ್ಷೆ ನಂದಾ ಕವಲೂರ, ಮುತ್ತಣ್ಣ ಹೊಸೂರ, ಪ್ರಕಾಶ ಸಂಕಣ್ಣವರ, ಮಲ್ಲನಗೌಡ ಪಾಟೀಲ, ಪಕ್ಕಪ್ಪ ಬಾದಾಮಿ, ರುದ್ರಪ್ಪ, ಬಸವಂತಪ್ಪ ಬಡಿಗೇರ, ವೀರೇಶ ಚೆನ್ನವೀರಮಠ, ಪ್ರಭು ಕಾರಪುಡಿ, ಅಡವೇಪ್ಪ ಪೂಜಾರ, ಪುಸ್ಪಾ, ಹುಸೇನಸಾಬ ನದಾಫ, ಹನುಮವ್ವ, ಯಲ್ಲವ್ವ, ಹನುಮವ್ವ ಹುಲ್ಲಣ್ಣವರ, ಗಂಗಾದರ ಚೆನ್ನವೀರಮಠ, ರುದ್ರಪ್ಪ ಅಡರಕಟ್ಟಿ, ವೀರನಗೌಡ ಪಾಟೀಲ, ಶಿವು ಸಂಕಣ್ಣವರ, ರಾಮನಗೌಡ್ರ ಹಿರೇಗೌಡರ, ಪ್ರವೀಣ ಹರಿಜನ, ಕುಮಾರಸ್ವಾಮಿ ಹಿರೇಮಠ ಇತರರು ಇದ್ದರು. ವೈ.ಎನ್. ಓಸೇಕರ ಸ್ವಾಗತಿಸಿದರು. ಬಿ.ಡಿ. ಅರ್ಜನಾಳ ನಿರೂಪಿಸಿದರು. ಪಿ.ಎನ್. ಉಕ್ಕುಂದ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್