ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಕರ ಪಾತ್ರ ಮುಖ್ಯ: ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್

KannadaprabhaNewsNetwork | Published : Apr 1, 2024 12:51 AM

ಸಾರಾಂಶ

ಅರಸೀಕೆರೆ ನಗರದ ಶ್ರೀನಿವಾಸ ನಗರ ಬಡಾವಣೆಯ ಸೇವಾ ಸಂಕಲ್ಪ ಶಾಲೆಯ ಸಭಾಂಗಣದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಕೆ.ಎಂ.ಶಿವಶಂಕರ್ ಅವರ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.

ಸಮಾರಂಭ । ಕೆ.ಎಂ.ಶಿವಶಂಕರ್‌ಗೆ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಜತೆಗೆ ಜನರ ಪ್ರೀತಿ, ವಿಶ್ವಾಸವನ್ನು ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದರು.

ನಗರದ ಶ್ರೀನಿವಾಸ ನಗರ ಬಡಾವಣೆಯ ಸೇವಾ ಸಂಕಲ್ಪ ಶಾಲೆಯ ಸಭಾಂಗಣದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಕೆ.ಎಂ.ಶಿವಶಂಕರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾದ ಕೆ.ಎಂ.ಶಿವಶಂಕರ್ ದೈಹಿಕ ಶಿಕ್ಷಕರಾಗಿ ಮಕ್ಕಳಿಗೆ ವಿವಿಧ ಕ್ರೀಡಾ ಚಟುವಟಿಕೆ, ಯೋಗ, ವ್ಯಾಯಮ ಕಲಿಸುವ ಜತೆಗೆ ಮಾನವೀಯ ಮೌಲ್ಯಗಳ ಶಿಸ್ತುಬದ್ಧವಾದ ಜೀವನದ ಪಾಠವನ್ನು ಕಲಿಸುವ ಮೂಲಕ ಮಕ್ಕಳ ಮನಸ್ಸು ಗೆಲುವು ಜತೆಗೆ ಪ್ರತಿಯೊಬ್ಬ ಪೋಷಕರ ಪ್ರೀತಿ, ವಿಶ್ವಾಸವನ್ನು ಗಳಿಸಿರುವುದಕ್ಕೆ ಈ ಬೀಳ್ಕೊಡುಗೆ ಸಮಾರಂಭವೇ ಸಾಕ್ಷಿಯಾಗಿದ್ದು, ಇವರ ನಿವೃತ್ತಿ ಜೀವನವು ಸಮಾಜಮುಖಿ ಸೇವಾ ಸತ್ಕಾರ್ಯಕ್ಕೆ ಸದಾ ಕಾಲವೂ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು.

ಸೇವಾ ಸಂಕಲ್ಪ ವಿದ್ಯಾಸಂಸ್ಥೆ ಅಧಕ್ಷ ಕೆ.ಆರ್.ಶ್ರೀಧರ್ ಮಾತನಾಡಿ, ‘ವಿದ್ಯೆ ಯಾರೊಬ್ಬರ ಸ್ವತ್ತಲ್ಲ, ಅದನ್ನ ನಮ್ಮ ಸತತ ಪರಿಶ್ರಮದಿಂದ ಯಾರು ಬೇಕಾದರೂ ಕಲಿಯಬಹುದು ಹಾಗೂ ತಾವು ಕಲಿತ ಜ್ಞಾನ ಭಂಡಾರವನ್ನ ಮತ್ತೊಬ್ಬರಿಗೂ ಕಲಿಸಬಹುದು, ಗುರುವಿನ ಮಹತ್ವದ ಸ್ಥಾನದಲ್ಲಿರುವ ಶಿಕ್ಷಕರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದರೆ ದೇಶದ ಭವಿಷ್ಯವನ್ನು ಉಜ್ವಲವಾಗಿ ರೂಪಿಸಲು ಸಾಧ್ಯ’ ಎಂದು ಹೇಳಿದರು.

ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯನಿರ್ವಾಹಕ ಲ.ನಾ. ಶಾಸ್ತ್ರಿ, ವಿವೇಕಾನಂದ ವಿದ್ಯಾಸಂಸ್ಥೆ ಅಧಕ್ಷ ಸತೀಶ್ ಹೊನ್ನವಳ್ಳಿ, ಮಂಜುನಾಥ ರಾವ್, ಅಕ್ಷರ ದಾಸೋಹ ಸಹಾಯ ನಿರ್ದೇಶಕ ಯೋಗೀಶ್, ಶಿಕ್ಷಣ ಸಂಯೋಜಕ ಗಿರೀಶ್, ವಿದ್ಯಾಸಂಸ್ಥೆ ನಿರ್ದೇಶಕರಾದ ಸತ್ಯನಾರಾಯಣ್, ಮೋಹನ್ ಕುಮಾರ್, ಕೆ.ಆರ್.ಮುರುಳೀಧರ್, ಬಬ್ರುವಾಹನ ರಾವ್, ರಾಮಚಂದ್ರ, ಮಯೂರಿ ನಾಗೇಶ್, ವೀಣಾ ರಂಗನಾಥ್, ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ ಸ್ವಾಮಿ ಇದ್ದರು.

ಅರಸೀಕೆರೆ ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಕೆ.ಎಂ.ಶಿವಶಂಕರ್‌ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ಬಿಇಒ ಮೋಹನ್ ಕುಮಾರ್ ಮಾತನಾಡಿದರು.

Share this article