ಕನ್ನಡಪ್ರಭ ವಾರ್ತೆ ಕಡೂರು
ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರಿಗೆ ಸಮಯ ಪಾಲನೆ ಬಹುಮುಖ್ಯ ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿ ಆರ್. ಸಿದ್ಧರಾಜು ನಾಯ್ಕ ಎಚ್ಚರಿಸಿದರು. ಶಿಕ್ಷಕರ ದಿನಾಚರಣೆ ಪ್ರಯುಕ್ತ ಕಡೂರಿನ ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಕರಿಗೆ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಾತನಾಡಿ, ಕ್ರೀಡಾಕೂಟಕ್ಕೆಇಲಾಖೆ ಒಒಡಿ ರಜೆ ನೀಡಿದ್ದರೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲ್ಲ ಬಂದವರಿಗೆ ಮಾತ್ರ ಸೌಲಭ್ಯ ದೊರಕುತ್ತದೆ. ಕಳೆದ ಶಿಕ್ಷಕರ ದಿನಾಚರಣೆಯಲ್ಲಿ ಶಿಸ್ತು ಇಲ್ಲದೆ ಗೊಂದಲ ವಾಗಿತ್ತು. ಆದ್ದರಿಂದ ಬೆಳಗ್ಗೆ 9.30ಕ್ಕೆ ಶಿಕ್ಷಕರು-ಶಿಕ್ಷಕಿಯರು ಸರಿಯಾಗಿ ಬಂದರೆ ಯಾವುದೇ ಗೊಂದಲಗಳಿಲ್ಲದೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯ ಸಮಯಕ್ಕೆ ಸರಿಯಾಗಿ ಬನ್ನಿ ಸಹಕಾರ ನೀಡಿ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರಂತರ ಒತ್ತಡದಲ್ಲೆ ಕಾರ್ಯ ನಿರ್ವಹಿಸುವ ಶಿಕ್ಷಕರ ಏಕತಾನತೆ ದೂರಮಾಡಲು ಕ್ರೀಡೆ ಸಹಕಾರಿ ಎಂದರು.
ವರ್ಷವಿಡೀ ಶಿಕ್ಷಣ ಕ್ಷೇತ್ರದಲ್ಲಿ ಬಿಡುವಿಲ್ಲದೆ ದುಡಿಯುವ ಶಿಕ್ಷಕರು ಸರ್ಕಾರದ ಅನೇಕ ಯೋಜನೆಗಳ ಅನುಷ್ಟಾನಕ್ಕೆ ಕಾರ್ಯ ನಿರ್ವಹಿಸುತ್ತಾರೆ ಅವರ ಒತ್ತಡಕ್ಕೆ ಒಂದಿಷ್ಟು ಬಿಡುವು ನೀಡುವ ಹಾಗೂ ಶಿಕ್ಷಕರ ಪ್ರತಿಭೆ ಅನಾವರಣಗೊಳಿಸಲು ಈ ಕಾರ್ಯ ಕ್ರಮ ಏರ್ಪಡಿಸಲಾಗಿದೆ ಎಂದರು.ಕ್ರೀಡಾಕೂಟ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಸಮಸ್ಯೆ ಪರಿಹರಿಸಲು ಜನಪ್ರತಿನಿಧಿಗಳು ಚಿಂತನೆ ನಡೆಸಬೇಕಿದೆ ಎಂದರು.
ಯುವ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ಡಾ.ಶ್ರೀನಿವಾಸ್ ಕ್ರೀಡಾ ಜ್ಯೋತಿಯನ್ನು ದೈಹಿಕ ಪರಿವೀಕ್ಷಣಾಧಿಕಾರಿ ನಾಗರಾಜ್ ಅವರಿಗೆ ಹಸ್ತಾಂತರಿಸಿದರು.ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಸ್.ಎಸ್. ತವರಾಜ್, ಮಂಜುನಾಥ್, ಪುರಸಭೆ ಸದಸ್ಯ ಮರುಗುದ್ದಿ ಮನು, ಯುವಜನ ಕ್ರೀಡಾಧಿಕಾರಿ ಶಿಕ್ಷಕ ಮುರುಳಿ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಇದ್ದರು.2ಕೆಕೆಡಿಯು3.ಕಡೂರು ಶೈಕ್ಷಣಿಕ ವಲಯದ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾಕೂಟವನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಬಿಇಒ ಸಿದ್ದರಾಜನಾಯ್ಕ, ಹರೀಶ್ ಮತ್ತಿತರರು ಇದ್ದರು.