ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಇದೇ ವೇಳೆ ಖಾಸಗಿ ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾದ ಮಾರುತಿ ಹಿರಿಯಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಿ.ಸುರೇಶ್, ಉಪಾಧ್ಯಕ್ಷರಾಗಿ ಗಿರೀಶ್, ಪ್ರಧಾನಕಾರ್ಯದರ್ಶಿ ಎಂ.ಪಾಲಯ್ಯ, ಸಹಕಾರ್ಯದರ್ಶಿ ಜಾಕೀರ್‌ಹುಸೇನ್, ಸಂಘಟನಾ ಕಾರ್ಯದರ್ಶಿ ಎಚ್.ಎಂ.ಸ್ವಾಮಿರನ್ನು ಅಭಿನಂದಿಸಲಾಯಿತು.
ಜಿಲ್ಲಾ ಅನುದಾನಿತ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಬಿ.ಸುರೇಶ್ ಮಾತನಾಡಿ, ಕಳೆದ ಸುಮಾರು ಎರಡು ದಶಕಗಳಿಂದ ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವೆ. ಶಿಕ್ಷಕರ ಸಮಸ್ಯೆ ಕುರಿತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಗುಣಮಟ್ಟದ ಶಿಕ್ಷಣದ ಬಗ್ಗೆ ಪ್ರಯತ್ನ ನಡೆಸಿದ್ದೇನೆ. ಖಾಸಗಿ ಅನುದಾನಿತ ಶಾಲಾ ಶಿಕ್ಷಕರು ಸಹ ಉತ್ತಮ ಬೋಧನೆ ಮೂಲಕ ಶಿಕ್ಷಣ ಇಲಾಖೆ ಗೌರವ ಕಾಪಾಡಬೇಕು ಎಂದರು.ಜಿಲ್ಲಾ ಗೌರವಾಧ್ಯಕ್ಷ ಟಿ.ಸೂರನಾಯಕ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ವೀರೇಶ್, ಚಿತ್ರದುರ್ಗ ತಾಲೂಕು ಅಧ್ಯಕ್ಷ ಕೆಂಚಪ್ಪ, ಮಹಂತಣ್ಣ, ಎಂ.ಒ.ರಾಜಣ್ಣ, ವಸಂತಕುಮಾರ್, ರಂಗನಾಥ, ಕೆಂಚರಾಜ್, ಓಬಣ್ಣ, ರಾಮು, ಬೋರಯ್ಯ, ತಿಪ್ಪೇಸ್ವಾಮಿ, ಗೋವಿಂದರಾಜು, ದ್ಯಾಮಣ್ಣ, ತಿಮ್ಮರಾಜು, ಮುರುಗೇಶ್, ಮಂಜಣ್ಣ, ಬಸಪ್ಪ ಮುಂತಾದವರು ಇದ್ದರು.