ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಹಾಗೂ ಕ್ರಿಯಾತ್ಮಕ ಶಿಕ್ಷಣವನ್ನು ಕಲಿಸಬೇಕು ಎಂದು ನಿವೃತ್ತ ಪ್ರಾ. ಜಿ.ಎಚ್. ಉಮಾಕಾಂತ ಹೇಳಿದರು.
ರಾಣಿಬೆನ್ನೂರು: ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಹಾಗೂ ಕ್ರಿಯಾತ್ಮಕ ಶಿಕ್ಷಣವನ್ನು ಕಲಿಸಬೇಕು ಎಂದು ನಿವೃತ್ತ ಪ್ರಾ. ಜಿ.ಎಚ್. ಉಮಾಕಾಂತ ಹೇಳಿದರು. ನಗರದ ಎನ್.ಆರ್. ಸಂಕೇತ್ ಶಾಲೆಯಲ್ಲಿ 2024-25 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸ ಹೊಸ ವಿಧಾನಗಳಿಂದ ಮಕ್ಕಳಿಗೆ ಉತ್ಸಾಹಭರಿತವಾಗಿ ಪಾಠವನ್ನು ಮಾಡಿದಾಗ ಮಾತ್ರ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ. ಕೇವಲ ಅಂಕ ಗಳಿಕೆ ಮಾತ್ರ ಪರಿಪೂರ್ಣ ಶಿಕ್ಷಣವಾಗಲಾರದು ಎಂದರು. ನಿವೃತ್ತ ಪ್ರಾ. ಎಸ್.ಎನ್. ಶಿವಲಿಂಗಪ್ಪ ಮಾತನಾಡಿ, ಹೊಸ ಹೊಸ ವಿಧಾನಗಳಿಂದ ಮಕ್ಕಳಿಗೆ ಉತ್ಸಾಹಭರಿತವಾಗಿ ಪಾಠವನ್ನು ಮಾಡಿದಾಗ ಮಾತ್ರ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ನಿವೃತ್ತ ಪ್ರಾ. ಡಾ.ಎನ್.ಕೆ. ರಾಮಚಂದ್ರಪ್ಪ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ಅಂಕ ಗಳಿಕೆ ಹಾಗೂ ಉದ್ಯೋಗ ಹಿಡಿಯುವುದೇ ಆಗಿದೆ. ವಿದ್ಯಾರ್ಥಿಗಳಲ್ಲಿ ಇಂದು ನೈತಿಕ ಶಿಕ್ಷಣದ ಕೊರತೆಯಿಂದ ಸಮಾಜದಲ್ಲಿ ಹೆಚ್ಚೆಚ್ಚು ಅಪರಾಧಗಳಾಗುತ್ತವೆ. ಶಿಕ್ಷಣ ಮತ್ತು ಕಾನೂನುಗಳ ಅರಿವಿನ ಕೊರತೆ ಹಾಗೂ ಶ್ರಮ ತಾಳ್ಮೆಗಳ ಕೊರತೆಯಿಂದ ಜೀವನದಲ್ಲಿ ಕಷ್ಟ ನಷ್ಟವನ್ನು ಅನುಭವಿಸಬೇಕಾಗುತ್ತದೆ. ತಂದೆ ತಾಯಿ ಜೀವನ ಕೊಡುತ್ತಾರೆ ಆದರೆ ಗುರು ಬದುಕನ್ನು ಕಟ್ಟಿಕೊಡುತ್ತಾನೆ ಆದ್ದರಿಂದ ಗುರುಗಳಿಗೆ ಗೌರವ ಕೊಡಬೇಕು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಸ್ಕೂಲ್‌ನ ಮುಖ್ಯ ಶಿಕ್ಷಕ ಡಿ.ಕೆ. ಆಂಜನೇಯ, ನಯನ ಮಯಾಚಾರಿ, ಅಮೃತ ಕಂಬಳಿ, ಸ್ನೇಹ ಮೈಲಾರ, ತನುಶ್ರೀ ನಾಯಕ್, ವಿದ್ಯಾ ಕುಂಚೂರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.