ತೃತೀಯ ಭಾಷೆ ಹಿಂದಿಯನ್ನು ಮುಂದುವರಿಸುವಂತೆ ಶಿಕ್ಷಕರ ಒತ್ತಾಯ

KannadaprabhaNewsNetwork |  
Published : Sep 22, 2026, 02:00 AM IST
21ಬಿಜಿಪಿ-1 | Kannada Prabha

ಸಾರಾಂಶ

ಕಳೆದ ವರ್ಷ ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆಯಲ್ಲಿ ತೃತೀಯ ಭಾಷೆಯಾಗಿರುವ ಹಿಂದಿಗೆ ನೀಡಲಾಗುತ್ತಿದ್ದ ಅಂಕಗಳ ಬದಲಿಗೆ ಗ್ರೇಡ್ ನೀಡುವ ನಿಯಮ ವಿರೋಧಿಸಿ ವಿದ್ಯಾರ್ಥಿಗಳು ನ್ಯಾಯಾಲಯದಿಂದ ಅಂಕಗಳನ್ನು ಪಡೆದಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 1800 ಶಾಲೆಗಳಲ್ಲಿ ತೃತೀಯ ಭಾಷೆ ಬದಲು ಎನ್ ಎಸ್ ಕ್ಯೂ ಎಫ್ ಅಡಿ ಎಐ ವಿಷಯ ಅಳವಡಿಸುತ್ತಿರುವುದರಿಂದ ಹಿಂದಿ ಅಧ್ಯಾಯ ಬಯಸುವ ವಿದ್ಯಾರ್ಥಿಗಳು ಹಾಗೂ ಹಿಂದಿ ಶಿಕ್ಷಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ದ್ವಿಭಾಷಾ ಸೂತ್ರವನ್ನು ಕೈಬಿಟ್ಟು ತೃತೀಯ ಭಾಷೆ ಹಿಂದಿಯನ್ನೇ ಮುಂದುವರಿಸುವಂತೆ ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್ ಆಗ್ರಹಿಸಿದರು.

ದ್ವಿಭಾಷಾ ಸೂತ್ರವನ್ನು ಕೈಬಿಟ್ಟು ತ್ರಿಭಾಷಾ ಸೂತ್ರವನ್ನೇ ಮುಂದುವರಿಸುವಂತೆ ಒತ್ತಾಯಿಸಿ, ರಾಜ್ಯ ಸಂಘದ ಕರೆಯ ಮೇರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯಲಿರುವ ಒಂದು ದಿನದ ಸಾಂಕೇತಿಕ ಹೋರಾಟದ ಹಿನ್ನೆಲೆ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ತಾಲೂಕಿನ ಹಿಂದಿ ಶಿಕ್ಷಕರು ಬೆಂಗಳೂರಿಗೆ ಬಸ್ ಪ್ರಯಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಸುಮಾರು 15 ಸಾವಿರ ಹಿಂದಿ ಶಿಕ್ಷಕರು ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ ದ್ವಿಭಾಷಾ ನೀತಿಯನ್ನು ವಾಪಸ್ ಪಡೆದು ತೃತೀಯ ಭಾಷಾ ಹಿಂದಿಯನ್ನೇ ಮುಂದುವರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಕಳೆದ ವರ್ಷ ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆಯಲ್ಲಿ ತೃತೀಯ ಭಾಷೆಯಾಗಿರುವ ಹಿಂದಿಗೆ ನೀಡಲಾಗುತ್ತಿದ್ದ ಅಂಕಗಳ ಬದಲಿಗೆ ಗ್ರೇಡ್ ನೀಡುವ ನಿಯಮ ವಿರೋಧಿಸಿ ವಿದ್ಯಾರ್ಥಿಗಳು ನ್ಯಾಯಾಲಯದಿಂದ ಅಂಕಗಳನ್ನು ಪಡೆದಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 1800 ಶಾಲೆಗಳಲ್ಲಿ ತೃತೀಯ ಭಾಷೆ ಬದಲು ಎನ್ ಎಸ್ ಕ್ಯೂ ಎಫ್ ಅಡಿ ಎಐ ವಿಷಯ ಅಳವಡಿಸುತ್ತಿರುವುದರಿಂದ ಹಿಂದಿ ಅಧ್ಯಾಯ ಬಯಸುವ ವಿದ್ಯಾರ್ಥಿಗಳು ಹಾಗೂ ಹಿಂದಿ ಶಿಕ್ಷಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 12 ವರ್ಷಗಳಿಂದ ಶಿಕ್ಷಕರ ನೇಮಕಾತಿಯಾಗಿಲ್ಲ, ಈಗ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಕೇವಲ ಕನ್ನಡ ಮತ್ತು ಇಂಗ್ಲಿಷ್‍ಗೆ ಅವಕಾಶ ನೀಡಲಾಗಿದೆ. 4 ಸಾವಿರಕ್ಕೂ ಹೆಚ್ಚು ಹಿಂದಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ರಾಜ್ಯಪತ್ರದಲ್ಲಿ ಪರಿಗಣಿಸದೆ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕೂಡಲೇ ಹಿಂದಿ ಶಿಕ್ಷಕರನ್ನು ನೇಮಕಾತಿಯಲ್ಲಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ತಾಲೂಕು ಹಿಂದಿ ಭಾಷೆ ಶಿಕ್ಷಕರ ಸಂಘದ ಅಧ್ಯಕ್ಷೆ ಜಿ. ರಾಮಸುಬ್ಬಮ್ಮ ಮಾತನಾಡಿ, ತೃತೀಯ ಭಾಷೆ ತೆಗೆಯುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಆಸಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ಹಿಂದಿ ಶಿಕ್ಷಕರಿಗೆ ಕುತ್ತು ಬರುವ ಸಾಧ್ಯತೆ ಇದೆ. ಇದರಿಂದ ದ್ವಿಭಾಷೆ ಕೈಬಿಟ್ಟು ಶಾಲೆಗಳಲ್ಲಿ ತೃತೀಯ ಭಾಷೆಯನ್ನೇ ಮುಂದುವರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಪದವೀಧರರ ಬಡ್ತಿ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಈಶ್ವರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ವಿ.ವೆಂಕಟರಾಯಪ್ಪ, ಎಂ.ವಿ. ರಂಗಾರೆಡ್ಡಿ, ವಿಜಯ್ ಕುಮಾರ್, ತಬ್ಬುಸಮ್, ಈಶ್ವರಾಚಾರಿ, ಸುಬ್ಬಾರಾಯಪ್ಪ, ಜಯಣ್ಣ, ಸುನೀಲ್ ಕುಮಾರ್, ನಟರಾಜ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೆಪ್ಟಂಬರ್‌ 25, 26ರಂದು ರಾಜ್ಯ ಗ್ರಂಥಪಾಲಕರ 2ನೇ ಸಮ್ಮೇಳನ
ಇಂದಿನಿಂದ ಆಯುಷ್ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ