ಶಿಕ್ಷಕರು ದೇವರ ಸಮಾನ. ಇದು ಮಾದರಿ ಕಾರ್ಯಕ್ರಮ ಎಂದು ಶಿವಮೊಗ್ಗ ಶ್ರೀದೊಡ್ಡಮ್ಮ ದೇವಿ ಉಪಾಸಕ ಶ್ರೀ ಸಿದ್ದಪ್ಪಾಜಿ ಹೇಳಿದರು.
ಕನ್ನಡಪ್ರಭ ವಾರ್ತೆ ತರೀಕೆರೆ
ಶಿಕ್ಷಕರು ದೇವರ ಸಮಾನ. ಇದು ಮಾದರಿ ಕಾರ್ಯಕ್ರಮ ಎಂದು ಶಿವಮೊಗ್ಗ ಶ್ರೀದೊಡ್ಡಮ್ಮ ದೇವಿ ಉಪಾಸಕ ಶ್ರೀ ಸಿದ್ದಪ್ಪಾಜಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತರೀಕೆರೆ ಜಯ ಕರ್ನಾಟಕ, ಸದ್ಗುರು ಜನಸೇವಾ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜ ಸರಿಯಾಗಿ ನಡೆಯಲು ಶಿಕ್ಷಕರು ಕಾರಣ. ಶಿಕ್ಷಕರು ಸದ್ಗುಣಗಳನ್ನು ಬೆಳೆಸುತ್ತಾರೆ. ವ್ಯಕ್ತಿಯನ್ನು ಶಕ್ತಿಯನ್ನಾಗಿ ಮಾಡುತ್ತಾರೆ. ಸದ್ಗುರು ಜನಸೇವಾ ಫೌಂಡೇಶನ್ ಅಧ್ಯಕ್ಷ ಟಿ.ಎನ್.ಜಗದೀಶ್ ಅವರಿಗೆ ಒಳ್ಳೆಯ ಆಲೋಚನೆಗಳಿವೆ ಎಂದು ಹೇಳಿದರು.
ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಮಾತನಾಡಿ, ಗುರುಗಳ ಆಶೀರ್ವಾದ ಇದ್ದರೆ ಸಾಧನೆ ಮಾಡಬಹುದು ಎಂದರು.
ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯಿನಿ ಹೇಮಾವತಿ ನೀಲಕಂಠಪ್ಪ ಮಾತನಾಡಿ, ಗುರುಗಳಿಗೆ ಮಹತ್ವದ ಸ್ಥಾನ ಇದೆ. ವಿದ್ಯೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.
ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಇಮ್ರಾನ್ ಅಹಮದ್ ಬೇಗ್ ಮಾತನಾಡಿ, ಇದು ವಿನೂತನ ವಿಶೇಷ ಅರ್ಥಪೂರ್ಣ ಕಾರ್ಯಕ್ರಮ. ಗುರುಗಳೆಂದರೆ ಸರ್ವವ್ಯಾಪಿ, ಸರ್ವಶಕ್ತಿ, ಸರ್ವಜ್ಞಾನದ ಭಂಡಾರ ಎಂದ ಅವರು ಗುರುಗಳ ದಾಸನಾಗ ಬೇಕು ಎಂದರು.
ಸದ್ಗುರು ಜನಸೇವಾ ಫೌಂಡೇಷನ್ ಅಧ್ಯಕ್ಷ ಟಿ.ಎನ್.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುಗಳಾದ ಶ್ರೀ ಸಿದ್ದಪ್ಪಾಜಿ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸದ್ಗುರು ಜನಸೇವಾ ಫೌಂಡೇಷನ್‌ನಿಂದ ಇಂದು ಆದರ್ಶ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಗಿದೆ. ಗುರುಗಳು ದೇಶದ ಭವಿಷ್ಯ ರೂಪಿಸಿದ್ದಾರೆ. ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ತಿಳಿಸಿದರು.
ಸಾಹಿತಿ, ಗಾಯಕಿ ಉಮಾ ಪ್ರಕಾಶ್ ಅವರು ಗೀತೆಯನ್ನು ಹಾಡಿದರು. ಆದರ್ಶ ಶಿಕ್ಷಕರಿಗೆ ಪಾದಪೂಜೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು.
ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸಿ.ಆರ್.ಅನಂತಪ್ಪ, ನಿವೃತ್ತ ಶಿಕ್ಷಕಿ ಕಮಲಮ್ಮ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಕನ್ನಡಶ್ರೀ ಬಿ.ಎಸ್.ಭಗವಾನ್, ಮಮತ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಮಂಜುಳಾ ವಿಜಯಕುಮಾರ್, ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷ ಸುನಿತಾ ಕಿರಣ್, ಜಯಕರ್ನಾಟಕ ಸಂಘಟನೆ ತಾಲೂಕು ಘಟಕ ಮಹಿಳಾ ಅಧ್ಯಕ್ಷೆ ರೂಪ, ದರ್ಶನ್, ದೇವರಾಜ್, ಲಿಂಗರಾಜು, ವಿನೋದ್, ಅಂತೋಣಿ, ಸೈಮನ್, ಸಲ್ಮಾನ್, ಸಿದ್ದು, ಆನಂದ್, ಶಿಲ್ಪ ಲಿಂಗರಾಜ್ ಇತರರು ಭಾಗವಹಿಸಿದ್ದರು. 10ಕೆಟಿಆರ್.ಕೆ.15ಃ
ತರೀಕೆರೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶ್ರೀ ಸಿದ್ದಪ್ಪಾಜಿ, ವಾಣಿ ಶ್ರೀನಿವಾಸ್, ಟಿ.ಎನ್.ಜಗದೀಶ್, ಟಿ.ಎಸ್.ಪ್ರಕಾಶ್ ವರ್ಮ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.