ಲಕ್ಷಾಂತರ ರು. ಮೌಲ್ಯದ ಸಾಗವಾನಿ ಮರ ಕಡಿತಲೆ

KannadaprabhaNewsNetwork | Published : Oct 18, 2023 1:00 AM

ಸಾರಾಂಶ

ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯ ದೇವದಾನ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರು. ಬೆಲೆ ಬಾಳುವ ನಾಲ್ಕು ಸಾಗುವಾನಿ ಮರ ಕಡಿತಲೆ ಮಾಡಿ ನಾಟಾ ಸಂಗ್ರಹ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಇಬ್ಬರ ಬಂಧನ ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯ ದೇವದಾನ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರು. ಬೆಲೆ ಬಾಳುವ ನಾಲ್ಕು ಸಾಗುವಾನಿ ಮರ ಕಡಿತಲೆ ಮಾಡಿ ನಾಟಾ ಸಂಗ್ರಹ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ. ದೇವದಾನ ಎಸ್ಟೇಟ್‌ನ ಸೂಪರ್‌ವೈಸರ್ ಎ.ಎ.ಇಲಿಯಾಸ್ ಹಾಗೂ ರೈಟರ್ ಸಿ.ಜೆ.ರಿನೋ ಬಂಧಿತ ಆರೋಪಿಗಳು. ಈ ಇಬ್ಬರು ದೇವದಾನ ಮೀಸಲು ಅರಣ್ಯದ ಸರ್ವೆ ನಂಬರ್ 343ರಲ್ಲಿ ನಾಲ್ಕು ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ, 31 ಸೈಜ್ ನಾಟಾವನ್ನು ತಯಾರಿಸಿ, 14 ರೌಂಡ್ ಲಾಗ್‌ಗಳನ್ನು ಮಾಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮೀಸಲು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿರುವುದು ಕಂಡುಬಂದಿದ್ದು, ಇದರ ಜಾಡು ಹಿಡಿದು ಹೋದಾಗ ಸ್ಥಳೀಯ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ರೈಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಲಿಯಾಸ್, ರಿನೋ ಅವರು ಮರವನ್ನು ಕಡಿತಲೆ ಮಾಡಿರುವ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ಕಡಿತಲೆ ಮಾಡಿರುವ ಮರದಲ್ಲಿ ತಯಾರಿಸಿದ್ದ 31 ಸೈಜ್ ನಾಟಾವನ್ನು ತಮ್ಮ ಮನೆಯಲ್ಲಿ ಉಳಿದ ರೌಂಡ್ ಲಾಗ್‌ಗಳನ್ನು ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದರು. ಆರೋಪಿಗಳಿಂದ 2.381 ಕ್ಯೂಬಿಕ್ ಮೀಟರ್ ಸಾಗುವಾನಿ ಮರದ ನಾಟಾ, ತುಂಡುಗಳನ್ನು ಹಾಗೂ ಮರ ಕೊಯ್ಯಲು ಬಳಸಿದ ಯಂತ್ರವನ್ನು ವಶಕ್ಕೆ ಪಡೆಯಲಾಗಿದ್ದು, ಕಡಿತಲೆ ಮಾಡಿರುವ ಸಾಗುವಾನಿ ಮರಗಳ ಮೌಲ್ಯ ರು. 4 ಲಕ್ಷಕ್ಕೂ ಅಧಿಕವಾಗಿದೆ. ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಆರ್‌ಎಫ್‌ಓ ಎಂ. ಸಂದೀಪ್ ತಿಳಿಸಿದ್ದಾರೆ. ಎಸಿಎಫ್ ಚೇತನ್ ಮಂಗಲ್ ಗಸ್ತಿ ಮಾರ್ಗದರ್ಶನದಲ್ಲಿ ಸಂಗಮೇಶ್ವರಪೇಟೆ ಡಿಆರ್‌ಎಫ್‌ಓ ಮಂಜುನಾಥ್, ಸಿಬ್ಬಂದಿಗಳಾದ ಹನುಮಂತ ಲೋನಿ, ಕಾರ್ತಿಕ್, ಚಾಲಕ ಪ್ರಕಾಶ್ ಭಾಗವಹಿಸಿದ್ದರು.

Share this article