ಇಂದಿನಿಂದ ಟೆಕ್‌ ಶೃಂಗಸಭೆ ಆರಂಭ

KannadaprabhaNewsNetwork |  
Published : Nov 18, 2025, 12:30 AM IST
ಟೆಕ್ ಸಮ್ಮೇಳನ ಕುರಿತು ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ನಿರ್ಮಾಣವಾಗಿರುವ ಕಂಪ್ಯೂಟರ್ ಚಿಪ್ ಅನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರದರ್ಶಿಸಿದರು. ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಡಾ. ಮಂಜುಳಾ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಏಷ್ಯಾದ ಅತಿ ದೊಡ್ಡ, ಮೂರು ದಿನಗಳ (ನ.18-20) ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ ಮಂಗಳವಾರ ವಿದ್ಯುಕ್ತವಾಗಿ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಹಿತಿ ತಂತ್ರಜ್ಞಾನ, ಎಐ, ಡೀಪ್ ಟೆಕ್, ಬಯೋಟೆಕ್, ಹೆಲ್ತ್ ಟೆಕ್, ಸೆಮಿ ಕಂಡಕ್ಟರ್ ಸೇರಿ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಜ್ಯವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ, ಏಷ್ಯಾದ ಅತಿ ದೊಡ್ಡ, ಮೂರು ದಿನಗಳ (ನ.18-20) ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ ಮಂಗಳವಾರ ವಿದ್ಯುಕ್ತವಾಗಿ ಆರಂಭವಾಗಲಿದೆ.

ಈ ಕುರಿತು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಐಟಿ ಕ್ಷೇತ್ರಕ್ಕೆ ಹೊಸ ರೂಪ ಮತ್ತು ಶಕ್ತಿ ತುಂಬಲಿರುವ ವಿಶೇಷವಾದ ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಟೆಕ್ ಸಮ್ಮಿಟ್‌ನಲ್ಲಿ 10 ಪ್ರಮುಖ ಕಿರು ಸಮ್ಮೇಳನಗಳು ನಡೆಯಲಿವೆ. ಭವಿಷ್ಯ ರೂಪಿಸುವವರ ಸಮಾವೇಶ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉದ್ಯಮಗಳನ್ನು ಸ್ಥಾಪಿಸಲಿರುವ ನವೋದ್ಯಮಿಗಳು, ಸಂಸ್ಥಾಪಕರು, ಹೂಡಿಕೆದಾರರು ಮತ್ತು ನಾವೀನ್ಯಕಾರರನ್ನು ಒಳಗೊಂಡ ಸುಮಾರು 10,000 ಪ್ರತಿಭಾನ್ವಿತರ ಚಿಂತನ ಮಂಥನ ನಡೆಯಲಿದೆ ಎಂದು ಖರ್ಗೆ ತಿಳಿಸಿದರು. ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿದರು.

---ಬಾಕ್ಸ್...

60 ದೇಶಗಳ ಪ್ರತಿನಿಧಿಗಳು ಭಾಗಿ

ಶೃಂಗಸಭೆಯಲ್ಲಿ 1 ಸಾವಿರಕ್ಕೂ ಹೆಚ್ಚು ಹೂಡಿಕೆದಾರರು, 500ಕ್ಕೂ ಹೆಚ್ಚು ಭಾಷಣಕಾರರು, 1,000ಕ್ಕೂ ಹೆಚ್ಚು ಪ್ರದರ್ಶಕರು, 15,000ಕ್ಕೂ ಹೆಚ್ಚು ಉದ್ಯಮ ಕ್ಷೇತ್ರದ ಪರಿಣಿತರು ಹಾಗೂ 50 ಸಾವಿರಕ್ಕೂ ಹೆಚ್ಚು ಸಂದರ್ಶಕರು ಭಾಗಿಯಾಗಲಿದ್ದಾರೆ. 80ಕ್ಕೂ ಹೆಚ್ಚು ಜ್ಞಾನ ಸಭೆಗಳು ನಡೆಯಲಿದ್ದು, ಜಗತ್ತಿನ 60ಕ್ಕೂ ಹೆಚ್ಚು ದೇಶಗಳ ಹಾಗೂ ದೇಶದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೆರಿಗೆ ಹೊರೆಯಿಂದ ಸಂಕ್ರಾಂತಿ ಹಿಗ್ಗು ಮಾಯ: ರವಿಕುಮಾರ್
ಅಥಣಿಯಲ್ಲಿ ರಸ್ತೆ ಅತಿಕ್ರಮಣ ತೆರವು