ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿ ನಾಲ್ಕು ದಿನಗಳು ಕಳೆದಿವೆ. ಆದರೆ ಇನ್ನೂ ಸರ್ವರ್ ಮತ್ತು ಇತರೇ ತಾಂತ್ರಿಕ ಸಮಸ್ಯೆಗಳು ಪರಿಹಾರವಾಗಿಲ್ಲ. ಇದರಿಂದಾಗಿ ಗಣತಿದಾರರು ಸಮೀಕ್ಷೆ ಮಾಡಲಾಗದೆ ಹೈರಾಣಾಗಿದ್ದಾರೆ.ಮೊದಲ ದಿನದಿಂದಲೂ ತಾಲೂಕಿನಲ್ಲಿ ಗೊಂದಲದ ಗೂಡಾಗಿಯೇ ಸಮೀಕ್ಷೆ ನಡೆಯುತ್ತಿದೆ. ಮೊದಲದಿನವೇ ತಾಂತ್ರಿಕ ಸಮಸ್ಯೆಯಿಂದ ಬಳಲಿದ ಗಣತಿದಾರರು, ಸಮಸ್ಯೆ ನೀವಾರಿಸಬೇಕೆಂದು ತಹಸೀಲ್ದಾರ್‌ಗೆ ಮನವಿ ಸಹ ಸಲ್ಲಿಸಿದ್ದರು.ಸರ್ವರ್ ಹಾಗೂ ಆ್ಯಪ್ ಸಮಸ್ಯೆಆದರೆ ನಾಲ್ಕನೇ ದಿನವಾದ ಗುರುವಾರ ಸಂಪೂರ್ಣವಾಗಿ ಸರ್ವರ್ ಹಾಗೂ ಆ್ಯಪ್ ಓಫನ್ ಆಗದೆ ಬಗುತೇಕ ಗಣತಿ ಕೆಲಸಕ್ಕೆ ತೆರಳಿದ್ದ ಶಿಕ್ಷಕರು ತಾಲೂಕು ಕಚೇರಿ ಸುತ್ತಲೂ ಸುತ್ತಾಡಿಕೊಂಡಿದ್ದದ್ದು ಕಂಡು ಬಂತು.ಬೆಳಗ್ಗೆಯಿಂದ ಮನೆಗಳ ಬಳಿ ಹೋಗಿ ಆಪ್ ತೆರೆದರೆ ಚಾಲು ಆಗುತ್ತಿಲ್ಲ,ಆಪ್ ತೆರೆದರೂ ಸರ್ವರ್ ಸಮಸ್ಯೆಯಿಂದ ಒಂದು ಮನೆಯ ಸಮೀಕ್ಷೆ ಸಹ ಮಾಡಲಾಗುತ್ತಿಲ್ಲ ಎಂದು ಬೇಸತ್ತು ಹಳ್ಳಿಗಳಿಂದ ವಾಪಸ್ ಬಂದಿದ್ದರು. ಇನ್ನೂ ಕೆಲವರು ಗ್ರಾಮಗಳಲ್ಲೆ ಮರಗಳ ಕೆಳಗೆ ಕುಳಿತುಕೊಂಡು ಸಮಯ ಕಳೆಯುವಂತಾಯಿತು.ಗ್ರಾಮಗಳಿಗೆ ಬೆಳಗ್ಗೆ ಹೋದರೆ ಒಂದು ಮನೆಯ ಸಂಪೂರ್ಣ ಮಾಹಿತಿ ಕಲೆ ಹಾಕಲು ಕನಿಷ್ಟ ಪಕ್ಷ ಎರಡು ಗಂಟೆ ಬೇಕಾಗುತ್ತದೆ, ಆದರೂ ಪರವಾಗಿಲ್ಲ ಮಾಡುವೆವು, ಆದರೆ ನೆಟ್ ವರ್ಕ್, ಸರ್ವರ್ ಆ್ಯಪ್ ತೆರೆಯದ ಸಮಸ್ಯೆಯಿಂದ ಹಾಗೂ ತೆರೆದರೂ ಒಟಿಪಿ ಹೋಗದೆ ಗಂಟೆಗಟ್ಟಲೆ ಕಾಯುವಂತಾಗಿದೆ. ಕಷ್ಟಪಟ್ಟು ಸಮೀಕ್ಷೆ ಮಾಡಿದರೂ ಕೊನೆ ಹಂತದಲ್ಲಿ ಸಬ್ಮಿಟ್ ಆಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ‘ಕಾಯಿರಿ ಎಲ್ಲವೂ ಸರಿಯೋಗಲಿದೆ’ ಎಂದಷ್ಟೇ ಉತ್ತರ ಸಿಗುತ್ತಿದೆ ಎಂದು ಗಣತಿದಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಗುರಿ ಮುಟ್ಟುವ ಬಗ್ಗೆ ಅನುಮಾನಸರ್ಕಾರ ಅಕ್ಟೋಬರ್‌೭ರವರೆಗೂ ಸಮೀಕ್ಷೆ ನಡೆಯಲಿದೆ ಎಂದು ಹೇಳಿದೆ, ಆದರೆ ಈಗಿನ ಪರಿಸ್ಥಿತಿ ನೋಡಿದರೆ ನಿಗದಿತ ಸಮಯಕ್ಕೆ ಸಮೀಕ್ಷೆ ಪೂರ್ಣವಾಗುವ ಲಕ್ಷಣಗಳು ಕಾಣುತ್ತಿಲ್ಲ,೧೫೦ಮನೆಗಳಿಗೆ ಒಬ್ಬ ಗಣತಿದಾರ,೧೫ರಿಂದ ೨೦ಗಣತಿದಾರರಿಗೆ ಶಿಕ್ಷಣ ಇಲಾಖೆಯ ಶಿಕ್ಷಕರು,ಬಿಆರ್‌ಪಿ,ಸಿಆರ್‌ಪಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ, ೫೦ ಮಂದಿಗೆ ಒಬ್ಬ ಮಾಸ್ಟರ್ ಟ್ರೈನರ್ ನೇಮಿಸಿದ್ದರೂ ತಾಂತ್ರಿಕ ದೋಷದಿಂದ ಗಣತಿ ಕಾರ್ಯ ತಾಲೂಕಿನಲ್ಲಿ ಕುಂಟುತ್ತಿದೆ.ಕುಟುಂಬಕ್ಕೆ 60 ಪ್ರಶ್ನೆಗಳ ಪಟ್ಟಿ
ಹಿಂದುಳಿದ ಆಯೋಗವು ಸಿದ್ದಪಡಿಸಿರುವ ಪ್ರಶ್ನಾವಳಿ ಬಳಸಿ ಕುಟುಂಬದ ಪ್ರತಿಯೊಬ್ಬ ಸದಸ್ಯನ ವಿವರ ಸಂಗ್ರಹಿಸಿದ್ದಾರೆ. ಈ ವೇಳೆ ಹೆಸರು, ವಯಸ್ಸು,ಲಿಂಗ, ಸೇರಿ ಶೈಕ್ಷಣಿಕ ಅರ್ಹತೆ, ಉದ್ಯೋಗ, ಜಾತಿ, ಉಪಜಾತಿ, ಧರ್ಮ ಹಾಗೂ ಮಾತೃಭಾಷೆ, ಆದಾಯದ ಮೂಲ, ಕುಟುಂಬದ ಆದಾಯ, ಆಸ್ತಿ, ವಿವರ ಸೇರಿ ೬೦ ಪ್ರಶ್ನೆಗಳಿಗೆ ವಿವರ ಪಡೆಯಲಿದ್ದರೆ.ಗಣತಿದಾರರು ಎದುರಿಸುತ್ತಿರುವ ಸಮಸ್ಯೆ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ವರ್, ನೆಟ್‌ವರ್ಕ್ ಹಾಗೂ ಇತರೇ ಸಮಸ್ಯೆಗಳನ್ನು ತಿಳಿಸಲಾಗಿದೆ. ಎಲ್ಲ ಸಮಸ್ಯೆಗಳು ನೀಗಲಿವೆ. ಗಣತಿದಾರರು ಸಮೀಕ್ಷೆ ಸ್ಥಳದಲ್ಲೆ ಇರುವಂತೆ ಸೂಚಿಸಲಾಗಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅನಿತಾ ಮಾಹಿತಿ ನೀಡಿದ್ದಾರೆ.ಗಣತಿದಾರನಿಗೆ ಕಚ್ಚಿದ ನಾಯಿ ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಗಣತಿದಾರರು ಪಟ್ಟಣದ ದೇಶಿಹಳ್ಳಿ ಬಡಾವಣೆಯ ದಿಢೀರ್ ನಗರದಲ್ಲಿ ಸಮೀಕ್ಷೆಗೆಂದು ಹೋದಾಗ ನಾಯಿಗಳ ಹಿಂಡು ದಾಳಿ ಮಾಡಿ ಕಾಲು ಕಚ್ಚಿರುವ ಘಟನೆ ನಡೆದಿದೆ. ಗಣತಿ ಕಾರ್ಯದಿಂದ ನನಗೆ ಮುಕ್ತಿ ಕೊಡಿ ಎಂದು ಶಿಕ್ಷಕ ವೆಂಕಟಪ್ಪ ತಹಸೀಲ್ದಾರ್ ಹಾಗೂ ಬಿಇಒ ರವರಿಗೆ ಮನವಿ ಸಲ್ಲಿಸಿದ್ದಾರೆ.