ಯುವಕರಿಗೆ ತಂತ್ರಜ್ಞಾನ ತರಬೇತಿ ಅನಿವಾರ್ಯ: ಜಿ.ಎಸ್‌. ಪಾಟೀಲ

KannadaprabhaNewsNetwork |  
Published : Oct 01, 2026, 02:30 AM IST
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ವಿಧಾನಸಭಾಧ್ಯಕ್ಷ  ಜಿ.ಎಸ್.ಪಾಟೀಲ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಗದಗದಲ್ಲಿ ಹಿಂದೆ ಆಯಿಲ್ ಕಿಂಗ್, ಕಾಟನ್ ಕಿಂಗ್ ಇದ್ದರು. ಕಾಲ ಬದಲಾದಂತೆ ವ್ಯವಸ್ಥೆ ಬದಲಾಯಿತು. ಇಂದು ತಂತ್ರಜ್ಞಾನ ಬದಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಗದಗ

ಗದಗದಲ್ಲಿ ಹಿಂದೆ ಆಯಿಲ್ ಕಿಂಗ್, ಕಾಟನ್ ಕಿಂಗ್ ಇದ್ದರು. ಕಾಲ ಬದಲಾದಂತೆ ವ್ಯವಸ್ಥೆ ಬದಲಾಯಿತು. ಇಂದು ತಂತ್ರಜ್ಞಾನ ಬದಲಾಗುತ್ತಿದೆ. ಸ್ಪರ್ಧೆಯ ಈ ಯುಗದಲ್ಲಿ ಉದ್ಯಮ ನಡೆಸುವುದು ಸುಲಭವಲ್ಲ. ಆದ್ದರಿಂದ ಯುವಕರಿಗೆ ಉದ್ಯಮದ ಬಗ್ಗೆ ತಿಳುವಳಿಕೆ ಮತ್ತು ತಂತ್ರಜ್ಞಾನ ತರಬೇತಿ ನೀಡುವ ಕೆಲಸ ಸಂಸ್ಥೆ ಮಾಡಬೇಕು ಎಂದು ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ತಿಳಿಸಿದರು.

ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಇತ್ತೀಚೆಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 50 ವರ್ಷ ಪೂರೈಸಿ 51ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂಸ್ಥೆಯ ಹೆಮ್ಮೆ. ಪ್ರತಿ ವರ್ಷ ಒಬ್ಬ ಅಧ್ಯಕ್ಷ, ಒಂದು ವರ್ಷದ ಅವಧಿಯಲ್ಲಿ ಸಾಧನೆ ತೋರಿಸಬೇಕಾದ ಸವಾಲಿನ ವ್ಯವಸ್ಥೆಯಲ್ಲೇ ಸಂಸ್ಥೆ ದೊಡ್ಡದಾಗಿ ಬೆಳೆದಿರುವುದು ವಿಶೇಷ. ಹೊಸ ವಿಚಾರಧಾರೆಗಳೊಂದಿಗೆ ಜಿಲ್ಲೆಗೆ ಕೀರ್ತಿ ತರಲಿ ಎಂದರು.

ಸಂಸ್ಥೆಯ ಸ್ವಂತ ನಿವೇಶನದ ಬೇಡಿಕೆ ಅರ್ಥಪೂರ್ಣವಾಗಿದೆ. ಸದ್ಯ ಕಚೇರಿ ಎಪಿಎಂಸಿ ಆವರಣದಲ್ಲಿದೆ. ಕೌಶಲ್ಯಾಭಿವೃದ್ಧಿಗೆ ಸ್ವಂತ ಸ್ಥಳ ಬೇಕು. ನೀತಿ ಸಂಹಿತೆ ಇರುವುದರಿಂದ ಭರವಸೆ ನೀಡುವುದಿಲ್ಲ, ಆದರೆ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಸರ್ಕಾರದ ಮುಂದೆ ತೆಗೆದುಕೊಂಡು ಹೋಗುತ್ತೇನೆ ಎಂದರು.

ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿ, ಗುಡಿ ಕೈಗಾರಿಕೆ ಸೇರಿದಂತೆ ಜಿಲ್ಲೆಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು 25 ವರ್ಷಗಳಿಂದ ಗದಗ ಉತ್ಸವ ಆಯೋಜಿಸಲಾಗುತ್ತಿದೆ. ಆದರೆ ಶಾಶ್ವತ ವ್ಯಾಪಾರ ಮೇಳದ ಮೈದಾನದ ಕೊರತೆಯಿಂದ ಸಣ್ಣ ಕಲ್ಯಾಣ ಮಂಟಪಗಳಲ್ಲಿ 25-40 ಮಳಿಗೆಗಳಿಗೆ ಸೀಮಿತವಾಗಬೇಕಾಗಿದೆ ಎಂದರು.

ಈ ವೇಳೆ ಪ್ರಭಣ್ಣ ಹುಣಶಿಕಟ್ಟಿ, ಐ.ಎಸ್. ಪಾಟೀಲ, ಚಂದ್ರು ಬಾಳಿಹಳ್ಳಿಮಠ ಸೇರಿ ಸಂಸ್ಥೆಯ ಪದಾಧಿಕಾರಿಗಳು ಇದ್ದರು. ಚನ್ನವೀರಪ್ಪ ಹುಣಶಿಕಟ್ಟಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಒತ್ತಾಯ
ಡಾ. ಐ.ಆರ್. ಭಟ್ಟರ ಮಾನವೀಯ ಗುಣ ಸ್ಮರಿಸಿದ ಒಡನಾಡಿಗಳು