ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶ್ರೀಮಠದಲ್ಲಿ ಇತ್ತೀಚಿಗೆ ಕೈಗೊಳ್ಳಲಾದ ಧರ್ಮದತ್ತಿ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಮಠದ ಪೌಳಿಯ ಕಾರ್ಯ ವೀಕ್ಷಿಸಿದರು. ಮುಜರಾಯಿ ಇಲಾಖೆಯಿಂದ ಮಂಜೂರಾದ ಹಣದ ಸಮರ್ಪಕವಾದ ಮಾಹಿತಿ ಪಡೆದು ಕಟ್ಟಡಗಳ ಬಗ್ಗೆ ಅವಲೋಕಿಸಿ ಮಠದಲ್ಲಿ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದರು. ಇನ್ನುಳಿದ ಕಾರ್ಯಗಳನ್ನು ಕೂಡಲೇ ಮಾಡಿಕೊಡುವುದಾಗಿ ಭರವಸೆ ನೀಡಿದರು.
ತಹಸೀಲ್ದಾರ್ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರಪ್ಪ ಮೆಣಸಗಿ, ಗ್ರಾಪಂ ಸದಸ್ಯ ಶಿವಪ್ಪ ಕೋವಳ್ಳಿ, ಮಾಜಿ ಸದಸ್ಯ ಮಹೇಶ ಮೇಟಿ, ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಗ್ರಾಮಲೆಕ್ಕಾಧಿಕಾರಿ ರವಿ ಚಲವಾದಿ, ಗ್ರಾಮದ ಪ್ರಮುಖರಾದ ಹನುಮಂತ ಪಸಂದವರ, ನಾಗೇಶ ನೀಲನ್ನವರ, ಕರಿಯಪ್ಪ ವಾಲಿಕಾರ, ನಾಗಲಿಂಗಪ್ಪ ಕಟಗೇರಿ, ಪರುಶುರಾಮದಲ್ಲಿ ಸೇರಿದಂತೆ ಇತರರು ಭಾಗವಹಿಸಿದ್ದರು.