ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಎಂ.ಪ್ರಕಾಶ್ ಸುವರ್ಣ ಪುನರಾಯ್ಕೆ

KannadaprabhaNewsNetwork |  
Published : Jun 18, 2025, 01:50 AM IST
ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದ್ಯೆವಸ್ತಾನದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಎಂ ಪ್ರಕಾಶ್‌ ಸುವರ್ಣ ಪುನರಾಯ್ಕೆ  | Kannada Prabha

ಸಾರಾಂಶ

ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ಆಡಳಿತ ಸಮಿತಿಯ 2025-27 ರ ಸಾಲಿನ ಅಧ್ಯಕ್ಷರಾಗಿ ಎಂ ಪ್ರಕಾಶ್‌ ಸುವರ್ಣ ಪುನರಾಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ಆಡಳಿತ ಸಮಿತಿಯ 2025-27 ರ ಸಾಲಿನ ಅಧ್ಯಕ್ಷರಾಗಿ ಎಂ ಪ್ರಕಾಶ್‌ ಸುವರ್ಣ ಪುನರಾಯ್ಕೆಯಾಗಿದ್ದಾರೆ.ಎಂ. ಪ್ರಕಾಶ್‌ ಸುವರ್ಣ 2001ರಿಂದ ನಿರಂತರವಾಗಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು , ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ, ಲಯನ್ಸ್‌ ಕ್ಲಬ್‌ ಮೂಲ್ಕಿಯ ಅಧ್ಯಕ್ಷರಾಗಿ, ಲಯನ್ಸ್‌ ಸಂಸ್ಥೆಯ ವಲಯಾಧ್ಯಕ್ಷ, ಮೂಲ್ಕಿ ಶಾಂಭವಿ ಜೇಸಿ ಸಂಸ್ಥೆಯ ಅಧ್ಯಕ್ಷರಾಗಿ, ಮೂಲ್ಕಿ ಮಾನಿಷ್‌ ಕ್ರಿಕೆಟರ್ಸ್‌ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷರಾಗಿ ಉಮೇಶ್‌ ಪೂಜಾರಿ, ಹರಿಶ್ಚಂದ್ರ ಪಿ ಸಾಲ್ಯಾನ್‌, ಕೆ. ರಾಘು ಸುವರ್ಣ, ಕೃಷ್ಣ ಆರ್‌ ಕೋಟ್ಯಾನ್‌ ಸಾನದ ಮನೆ, ಪ್ರಾಣೇಶ್‌ ಪೂಜಾರಿ ಸಾನದ ಮನೆ, ತೇಜ ಪೂಜಾರಿ, ಉಪಾಧ್ಯಕ್ಷರಾಗಿ ಹೇಮನಾಥ ಕೋಟ್ಯಾನ್‌, ಕರುಣಾಕರ ಸುವರ್ಣ, ಕೃಷ್ಣ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ದಯಾನಂದ ಸುವರ್ಣ, ಹಿತೇಶ್‌, ಕೋಶಾಧಿಕಾರಿಯಾಗಿ ರಮಾನಾಥ ಸುವರ್ಣ, ಜೊತೆ ಕೋಶಾಧಿಕಾರಿಯಾಗಿ ವಿಜೇತ್‌ ಸುವರ್ಣ, ಮಹಿಳಾ ಮಂಡಲಿಯ ಅಧ್ಯಕ್ಷೆಯಾಗಿ ಲತಾ ಶೇಖರ್‌, ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌ ನ ಅಧ್ಯಕ್ಷರಾಗಿ ಚರಣ್‌ ಬಂಗೇರ ಅಯ್ಕೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ