ಕನ್ನಡಪ್ರಭ ವಾರ್ತೆ ಶಿರಾ
ಅವರು ಶಿರಾ ತಾಲೂಕಿನ ಚಿಕ್ಕಗುಳ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಮಾತನಾಡಿದರು. ಪುರಾಣಗಳು ಮತ್ತು ಇತಿಹಾಸದ ಮೂಲಕ ದೇವಸ್ಥಾನಗಳು ಮಾನವ ಜೀವನಕ್ಕೆ ಅಗತ್ಯವಾದ ಮೌಲ್ಯಗಳು ಹಾಗೂ ತತ್ವಗಳನ್ನು ಸಮಾಜಕ್ಕೆ ಬೋಧಿಸುತ್ತಿವೆ. ಲಕ್ಷ್ಮೀದೇವಿಯ ಸಹಿತ ನರಸಿಂಹ ಸ್ವಾಮಿ ಶಕ್ತಿ ಮತ್ತು ಕರುಣೆಯ ಸಮತೋಲನದ ಪ್ರತೀಕವಾಗಿದ್ದು, ಭಕ್ತರಿಗೆ ಅಭಯ, ಐಶ್ವರ್ಯ ಮತ್ತು ರಕ್ಷಣೆಯನ್ನು ನೀಡುವ ದೇವರಾಗಿದ್ದಾರೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ಧಾರ್ಮಿಕ ಶ್ರದ್ಧೆಯ ಜೊತೆಗೆ ಸಾಮಾಜಿಕ ಏಕತೆ, ಆತ್ಮಶುದ್ಧಿ ಮತ್ತು ನೈತಿಕ ಜೀವನ ಮೌಲ್ಯಗಳನ್ನು ಬೆಳೆಸುವ ಶಕ್ತಿಕೇಂದ್ರಗಳು ದೇವಸ್ಥಾನಗಳು. ಇಂತಹ ಪವಿತ್ರ ಕ್ಷೇತ್ರಗಳು ಯುವ ಪೀಳಿಗೆಗೆ ಧರ್ಮದ ನೈಜ ಅರ್ಥವನ್ನು ತಿಳಿಸುವ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ್, ಮಲ್ಲೇಶ್, ಮಂಜುನಾಥ್, ರಂಗನಾಥ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.