- ಹನಗವಾಡಿಯಲ್ಲಿ ಗುರುನಾಥ ಸ್ವಾಮಿ ಆರಾಧನೆಯಲ್ಲಿ ಹಿರೇಕಲ್ಮಠ ಶ್ರೀ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇವಸ್ಥಾನಗಳು ಜನರಲ್ಲಿ ಸಕರಾತ್ಮಕ ಭಾವಗಳನ್ನು ಜಾಗೃತಿಗೊಳುಸುತ್ತವೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಜೀವನ ಕಠಿಣವಾಗುತ್ತಿದೆ. ದೇವಾಲಯಗಳು ಜೀವನದ ಕಠಿಣತೆ ಕಡಿಮೆಗೊಳಿಸಿ, ನಕಾರಾತ್ಮಕತೆ ದೂರಗೊಳಿಸಿ ನೆಮ್ಮದಿ ನೀಡುತ್ತಿವೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಸಾಸ್ವೇಹಳ್ಳಿ ಹೋಬಳಿ ಸಮೀಪದ ಹನಗವಾಡಿಯ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುನಾಥ ಸ್ವಾಮಿ ಆರಾಧನೆ ಮತ್ತು 108 ಶ್ರೀ ಸತ್ಯ ನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಸನಾತನ ಧರ್ಮವನ್ನು ಇಂದು ಬುದ್ಧಿವಂತರು ಎಂದುಕೊಂಡ ಬಹಳಷ್ಟು ಜನ ಅವಹೇಳನ ಮಾಡುತ್ತಿದ್ದಾರೆ. ಅದು ಅವರ ಮೌಢ್ಯತೆ ತೋರುತ್ತದೆ. ದೇವಾಲಯಗಳಲ್ಲಿ ನೆಮ್ಮದಿ ಸಿಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಪೂಜೆಯಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಪೂಜೆಯೇ ನಮ್ಮ ನಂಬಿಕೆಯಾಗಿ ಅರ್ಧ ಕೆಲಸವನ್ನು ಪೂರ್ಣಗೊಳಿಸುತ್ತದೆ ಎಂದರು.ಶಿವಮೊಗ್ಗದ ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ವರ್ಷದಲ್ಲಿ ಒಮ್ಮೆಯಾದರೂ ದೇವಸ್ಥಾನಗಳಲ್ಲಿ ಕುಟುಂಬದ ಎಲ್ಲ ಸದಸ್ಯರು ಕೂಡಿ ಪೂಜೆ ಮಾಡುವುದರಿಂದ, ಪರಸ್ಪರರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚುತ್ತದೆ ಎಂದರು.ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿಗೆ ಗ್ರಾಮಸ್ಥರು ಮನವಿ ಮಾಡಿದರು. ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್ ಆಶ್ವಾಸನೆ ನೀಡಿದರು.
ಲಿಂಗದಹಳ್ಳಿ ಕುಟುಂಬಸ್ಥರಾದ ದತ್ತಾತ್ರೇಯ ಎಲ್.ವೈಶ್ಯರ್, ಕೃಷ್ಣಮೂರ್ತಿ ಶ್ರೇಷ್ಠಿ, ದಾವಣಗೆರೆ ಕೃಷ್ಣಮೂರ್ತಿ ಶ್ರೇಷ್ಠಿ, ಹನುಮಂತ ಶ್ರೇಷ್ಠಿ, ಸಾಧು ವೀರಶೈವ ಲಿಂಗಾಯಿತ ಸಮಾಜದ ತಾಲೂಕು ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಗ್ರಾಮದ ಮುಖಂಡರಾದ ಎಚ್.ಎಂ. ರಾಘವೇಂದ್ರ, ಎಚ್.ಕೆ. ಸುರೇಶ್, ಎಂ.ಆರ್. ಶಶಿಧರ, ಬಿ.ಎಂ. ಕೃಷ್ಣಮೂರ್ತಿ, ಪುರೋಹಿತರಾದ ತಿಪ್ಪಯ್ಯ ಹಾಗೂ ಗ್ರಾಪಂ ಪದಾಧಿಕಾರಿಗಳು, ಮುಖಂಡರು ಇದ್ದರು.- - -
-21ಎಚ್.ಎಲ್.ಐ1.ಜೆಪಿಜಿ:
ಧರ್ಮಸಭೆಯನ್ನು ವಿಪ ಸದಸ್ಯ ಡಿ.ಎಸ್ ಅರುಣ್ ಉದ್ಘಾಟಿಸಿದರು. ಹೊನ್ನಾಳಿ ಹಿರೇಕಲ್ಮಠ ಸ್ವಾಮೀಜಿ, ದತ್ತಾತ್ರೇಯ ಎಲ್.ವೈಶ್ಯರ್, ಕೃಷ್ಣಮೂರ್ತಿ ಶ್ರೇಷ್ಠಿ, ಕೃಷ್ಣಮೂರ್ತಿ ಶ್ರೇಷ್ಠಿ, ಹನುಮಂತ ಶ್ರೇಷ್ಠಿ ಇದ್ದರು.