ಶ್ರೀ ಬನ್ನಿಮಹಂಕಾಳಿ ದೇಗುಲದ ಜೀರ್ಣೋದ್ಧಾರಕ್ಕೆ ₹10 ಲಕ್ಷ ಧನ ಸಹಾಯ: ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ

KannadaprabhaNewsNetwork |  
Published : Jul 10, 2026, 12:15 AM IST
9ಕೆಆರ್ ಎಂಎನ್ 1.ಜೆಪಿಜಿ ರಾಮನಗರದ ಶ್ರೀ ಬನ್ನಿಮಹಂಕಾಳಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ನಗರಸಭೆ ವತಿಯಿಂದ 10 ಲಕ್ಷ ರು.ಗಳ ಧನಸಹಾಯದ ಚೆಕ್ ಅನ್ನು ದೇವಾಲಯದ ಸಮಿತಿ ಸದಸ್ಯರಿಗೆ ಅಧ್ಯಕ್ಷ ಕೆ.ಶೇಷಾದ್ರಿರವರು ವಿತರಿಸಿದರು. | Kannada Prabha

ಸಾರಾಂಶ

ಬನ್ನಿ ಮಹಂಕಾಳಿ ದೇವಿಗೆ ಇತಿಹಾಸ ಇದೆ. ಆಷಾಢ ಮಾಸದಲ್ಲಿ ಕರಗ ಮಹೋತ್ಸವ ಆರಂಭವಾದ ಮೇಲೆ ಬೇರೆ ಕರಗಗಳು ಆರಂಭಗೊಳ್ಳುತ್ತೇವೆ. ರೋಗ ರುಜಿನೆಗಳು ಬರಬಾರದೆಂದು ನಗರ ದೇವತೆಗಳನ್ನು ಪೂಜಾಕೈಂಕರ್ಯಗಳ ಮೂಲಕ ಆರಾಧನೆ ಮಾಡುತ್ತೇವೆ. ಆ ದೇವಿಯರ ಆಶೀರ್ವಾದ ನಗರದ ಜನರ ಮೇಲೆ ಸದಾ ಇರಲೆಂದು ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನಗರಸಭೆ ವತಿಯಿಂದ ಇತಿಹಾಸ ಪ್ರಸಿದ್ಧ ನಗರ ದೇವತೆ ಶ್ರೀ ಬನ್ನಿಮಹಂಕಾಳಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ₹10 ಲಕ್ಷ ರುಪಾಯಿಗಳ ಧನ ಸಹಾಯದ ಚೆಕ್ ಅನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಗುರುವಾರ ವಿತರಿಸಿದರು.

ನಗರಸಭೆಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಗರಸಭೆಯ 2026-27ನೇ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಬನ್ನಿಮಹಂಕಾಳಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ₹10 ಲಕ್ಷ ರು.ಗಳ ಚೆಕ್ ಅನ್ನು ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿತರಿಸಿದ ಕೆ.ಶೇಷಾದ್ರಿ, ನಾಗರಿಕರ ತೆರಿಗೆ ಹಣ ಇದಾಗಿದ್ದು, ಈ ಹಣವನ್ನು ಪೂರ್ಣವಾಗಿ ದೇಗುಲದ ಜೀರ್ಣೋದ್ಧಾರಕ್ಕೆ ವಿನಿಯೋಗ ಮಾಡುವಂತೆ ತಿಳಿಸಿದರು.

ನಗರದ ಪ್ರಧಾನ ದೇವತೆಯಾದ ಬನ್ನಿಮಹಂಕಾಳಿ ದೇವಿ ಇತಿಹಾಸ ಪ್ರಸಿದ್ಧಿಯಾಗಿದೆ. ಸಮಸ್ತ ಭಕ್ತರು ದೇವಿಯನ್ನು ಆರಾಧಿಸುತ್ತಾರೆ. ಪುರಾತನ ದೇವಾಲಯ ಆಗಿರುವುದರಿಂದ ದೇಗುಲದ ಸಮಿತಿಯವರು ಜೀರ್ಣೋದ್ಧಾರಕ್ಕಾಗಿ ಮನವಿ ಮಾಡಿದ್ದರು.

ಜನರ ಭಾವನೆಗಳಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ನಗರಸಭೆ ತನ್ನ ಆಯವ್ಯಯದಲ್ಲಿ ದೇಗುಲದ ಜೀರ್ಣೋದ್ಧಾರಕ್ಕೆ ಸಹಾಯ ಹಸ್ತ ಚಾಚುತ್ತಿದೆ. ಇದಕ್ಕೆ ನಗರಸಭೆಯ ಸರ್ವ ಸದಸ್ಯರು ಸಹಕರಿಸಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಬನ್ನಿ ಮಹಂಕಾಳಿ ದೇವಿಗೆ ಇತಿಹಾಸ ಇದೆ. ಆಷಾಢ ಮಾಸದಲ್ಲಿ ಕರಗ ಮಹೋತ್ಸವ ಆರಂಭವಾದ ಮೇಲೆ ಬೇರೆ ಕರಗಗಳು ಆರಂಭಗೊಳ್ಳುತ್ತೇವೆ. ರೋಗ ರುಜಿನೆಗಳು ಬರಬಾರದೆಂದು ನಗರ ದೇವತೆಗಳನ್ನು ಪೂಜಾಕೈಂಕರ್ಯಗಳ ಮೂಲಕ ಆರಾಧನೆ ಮಾಡುತ್ತೇವೆ. ಆ ದೇವಿಯರ ಆಶೀರ್ವಾದ ನಗರದ ಜನರ ಮೇಲೆ ಸದಾ ಇರಲೆಂದು ಪ್ರಾರ್ಥಿಸಿದರು.

ರಾಮನಗರದ ಜನರು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದು, ಪ್ರತಿಯೊಂದು ವರ್ಗದವರು ಜನರ ಭಾವನೆಗಳಿಗೆ ಅನುಗುಮವಾಗಿ ನಡೆದುಕೊಳ್ಳಬೇಕು. ದೇವಾಲಯ, ಮಸೀದಿ, ದರ್ಗಾ, ಚರ್ಚ್ ಗಳು ಎಲ್ಲರಿಗೂ ಸೇರಿದ್ದು, ಅವುಗಳ ಅಭಿವೃದ್ಧಿಗೆ ಪರಸ್ಪರ ಸಹಕಾರ ಕೊಡಬೇಕು ಎಂದು ಕೆ.ಶೇಷಾದ್ರಿ ಹೇಳಿದರು.

ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದೇವೆ:

ನಗರಸಭೆ ಸದಸ್ಯ ಮಂಜುನಾಥ್ ಮಾತನಾಡಿ, ನಗರಸಭೆಯಿಂದ ಜನರ ತೆರಿಗೆ ಹಣದಿಂದಲೇ ರಸ್ತೆ, ಚರಂಡಿ, ಬೀದಿ ದೀಪಗಳನ್ನು ಒದಗಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಧಾರ್ಮಿಕ ಕೇಂದ್ರಗಳು ನೆಮ್ಮದಿ ಕಲ್ಪಿಸುವ ಸ್ಥಳಗಳು. ಆಯವ್ಯಯದಲ್ಲಿ ಘೋಷಿಸಿದಂತೆ ಜನರ ತೆರಿಗೆ ಹಣವನ್ನು ಜನರ ಉಪಯೋಗಕ್ಕೆ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.

ನಗರಸಭೆ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ದಿನ ಪತ್ರಿಕೆಗಳ ಪೂರೖಕೆ, ಫುಡ್ ಸ್ಟ್ರೀಟ್ ನಿರ್ಮಾಣ ಸೇರಿದಂತೆ ಅನೇಕ ಜನೋಪಯೋಗಿ ಕೆಲಸಗಳು ನಡೆಯುತ್ತಿವೆ. ಅಧ್ಯಕ್ಷರು ಪಕ್ಷ ಬೇಧ ಮರೆತು ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತಿದ್ದಾರೆ. ನಾವುಗಳು ವಿಪಕ್ಷ ಸ್ಥಾನದಲ್ಲಿದ್ದರೂ ಒಳ್ಳೆಯ ಉದ್ದೇಶಗಳಿಗೆ ರಾಜಕೀಯ ಮಾಡಬಾರದೆಂದು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುತ್ತಾ ಬಂದಿದ್ದೇವೆ ಎಂದರು.

ನಗರಸಭೆ ಸದಸ್ಯ ನಿಜಾಮುದ್ದೀನ್ ಷರೀಫ್ ಮಾತನಾಡಿ, ತನ್ನ ವಾರ್ಡಿನ ವ್ಯಾಪ್ತಿಗೆ ಬರುವ ಬನ್ನಿಮಹಂಕಾಳಿ ದೇಗುಲದ ಜೀರ್ಣೋದ್ಧಾರಕ್ಕೆ ನಗರಸಭೆ ಆರ್ಥಿಕ ನೆರವು ಕಲ್ಪಿಸುತ್ತಿರುವುದು ಸಂತಸದ ವಿಷಯ. ಕರಗ ಮಹೋತ್ಸವದ ಸಂದರ್ಭದಲ್ಲಿ ದೇವಾಲಯ ಸಮಿತಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ತಿಳಿಸಿದರು.

ಜಿಲ್ಲಾ ದಲಿತ ಒಕ್ಕೂಟಗಳ ಅಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ರಾಮನಗರ ನಗರಸಭೆ ತನ್ನ ಸಮಾಜ ಮುಖಿ ಕಾರ್ಯಗಳ ಮೂಲಕ ದೇಶದಲ್ಲಿಯೇ ಮಾದರಿ ನಗರಸಭೆಯಾಗಿ ರೂಪುಗೊಂಡಿದೆ. ನಗರಸಭೆ ಅಧ್ಯಕ್ಷ ಶೇಷಾದ್ರಿರವರು ಪೌರಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮಾತ್ರವಲ್ಲದೆ ಎಲ್ಲ ವರ್ಗದ ಜನರಿಗೂ ಅವರ ಕುಲಕಸುಬಿಗೆ ಪೂರಕವಾದ ಕಿಟ್ ಗಳನ್ನು ವಿತರಿಸುವ ಮೂಲಕ ನಿಜವಾದ ಜನನಾಯಕ ಎನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ವರ್ತಕ ಉಮೇಶ್ ಮಾತನಾಡಿ, ರಾಮನಗರದಲ್ಲಿ ಅನೇಕ ರಾಜಕಾರಣಿಗಳು ಪಕ್ಷಪಾತ ಮಾಡದೆ ಸಹಾಯ ಹಸ್ತ ಚಾಚುತ್ತಾ ಬಂದಿದ್ದಾರೆ. ಅ‍ವರೆಲ್ಲರ ಪೈಕಿ ನಗರಸಭೆ ಅಧ್ಯಕ್ಷ ಶೇಷಾದ್ರಿ ಅಪರೂಪದಲ್ಲಿ ಅಪರೂಪದ ರಾಜಕಾರಣಿಯಾಗಿದ್ದಾರೆ. ರಾಮದೇವರ ತೇರಿನ ಹಿನ್ನೆಲೆಯಲ್ಲಿ ರಸ್ತೆ ನಿರ್ಮಿಸಿಕೊಟ್ಟರಲ್ಲದೆ, ತೇರಿಗಾಗಿ ₹1 ಲಕ್ಷ ಘೋಷಣೆ ಮಾಡಿದ್ದಾರೆ. ಸುಸಜ್ಜಿತ ರಸ್ತೆ, ಕುಡಿಯುವ ನೀರು, ಫುಡ್ ಸ್ಟ್ರೀಟ್ , ಗೋಡೆ ಗಡಿಯಾರ ನಿರ್ಮಾಣ ಸೇರಿದಂತೆ ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡ ಎಸ್. ಆರ್. ನಾಗರಾಜ್, ಮುಖಂಡರಾದ ಹರೀಶ್ , ಕೃಷ್ಣಮೂರ್ತಿ ಮಾತನಾಡಿದರು. ನಗರಸಭೆ ಆಯುಕ್ತ ಜಯಣ್ಣ, ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಸದಸ್ಯರಾದ ನರಸಿಂಹ, ಅಜ್ಮತ್ ಉಲ್ಲಾ ಖಾನ್, ಸೋಮಶೇಖರ್ (ಮಣಿ), ಸಮದ್, ಗೋವಿಂದರಾಜು, ಮೋಯಿನ್ ಖುರೇಷಿ, ರಮೇಶ್, ಗ್ಯಾಬ್ರಿಯಲ್, ಪಾರ್ವತಮ್ಮ, ಪವಿತ್ರ, ವಿಜಯ ಕುಮಾರಿ, ನಾಗಮ್ಮ, ಮಹಾಲಕ್ಷ್ಮಿ, ಮಂಜುಳಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕ್ಕೆ ಡಿಕ್ಕಿಯಾಗಿ ಪೆಟ್ರೋಲ್‌ - ಹಾಲಿನ ಟ್ಯಾಂಕರ್‌ ಬೆಂಕಿಗಾಹುತಿ
ಹಾಲಿನ ಖರೀದಿ ದರ ₹10 ಹೆಚ್ಚಳಕ್ಕೆ ಆಗ್ರಹಿಸಿ ಬೀದಿಗಿಳಿದ ದೊಡ್ಡಬಳ್ಳಾಪುರ ತಾಲೂಕಿನ ರೈತರು