ಟೆನೆಟ್ ಡಯಾಗ್ನೋಸ್ಟಿಕ್ಸ್ ಮೈಸೂರು ಶಾಖೆ ಆರಂಭ

KannadaprabhaNewsNetwork |  
Published : Jun 22, 2024, 12:51 AM IST
8 | Kannada Prabha

ಸಾರಾಂಶ

ಟೆನೆಟ್ ಡಯಾಗ್ನೋಸ್ಟಿಕ್ಸ್ ದೇಶದ 8 ರಾಜ್ಯಗಳಲ್ಲಿ ಮತ್ತು 30 ವಿವಿಧ ಸ್ಥಳಗಳಲ್ಲಿ ಭಾರತದೆಲ್ಲೆಡೆ ಹೊಂದಿದೆ. ಕರ್ನಾಟಕದಲ್ಲಿ 9 ಕಡೆ ತನ್ನ ಕೇಂದ್ರವನ್ನು ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಜಯನಗರ, ಸದಾಶಿವನಗರ, ಇಂದಿರಾನಗರ, ಮಾರತಹಳ್ಳಿ, ಫ್ರೆಜರ್ ಟೌನ್ ಮತ್ತು ವೈಟ್ ಫೀಲ್ಡ್, ಮಂಗಳೂರಿನಲ್ಲಿ 1 ಶಾಖೆ ತೆರೆಯಲಾಗಿದೆ. ರಾಜ್ಯದಲ್ಲಿ 9ನೇ ಶಾಖೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಟೆನೆಟ್ ಡಯಾಗ್ನೋಸ್ಟಿಕ್ಸ್ ಎಂಬ ಬ್ರಾಂಡ್ ಹೆಸರಿನ ಟೆನೆಟ್ ಮೆಡ್ ಕಾರ್ಪ್ ಪ್ರೈವೇಟ್ ಲಿಮಿಟೆಡ್ ಭಾರತದ ಸಂಯೋಜಿತ ರೋಗ ನಿರ್ಣಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು, ಮೈಸೂರಿನಲ್ಲಿ ತನ್ನ ಸುಸಜ್ಜಿತ ಕೇಂದ್ರವನ್ನು ಪ್ರಾರಂಭಿಸಿದೆ.

ಮೈಸೂರಿನ ಕುವೆಂಪುನಗರದ ಗಗನಚುಂಬಿ ರಸ್ತೆ ಚಿಕ್ಕಮ್ಮನಿಕೇತನ ಸಮುದಾಯ ಭವನ ಹತ್ತಿರ, ಸೆಸ್ಕ್ ಕಚೇರಿ ಪಕ್ಕದಲ್ಲಿ ಟೆನೆಟ್ ಡಯಾಗ್ನೋಸ್ಟಿಕ್ಸ್ ಮೈಸೂರು ಶಾಖೆಯನ್ನು ಶುಕ್ರವಾರದಿಂದ ಪರಿಪೂರ್ಣವಾಗಿ ಆರಂಭಿಸಲಾಗಿದೆ.

ಟೆನೆಟ್ ಡಯಾಗ್ನೋಸ್ಟಿಕ್ಸ್ ದೇಶದ 8 ರಾಜ್ಯಗಳಲ್ಲಿ ಮತ್ತು 30 ವಿವಿಧ ಸ್ಥಳಗಳಲ್ಲಿ ಭಾರತದೆಲ್ಲೆಡೆ ಹೊಂದಿದೆ. ಕರ್ನಾಟಕದಲ್ಲಿ 9 ಕಡೆ ತನ್ನ ಕೇಂದ್ರವನ್ನು ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಜಯನಗರ, ಸದಾಶಿವನಗರ, ಇಂದಿರಾನಗರ, ಮಾರತಹಳ್ಳಿ, ಫ್ರೆಜರ್ ಟೌನ್ ಮತ್ತು ವೈಟ್ ಫೀಲ್ಡ್, ಮಂಗಳೂರಿನಲ್ಲಿ 1 ಶಾಖೆ ತೆರೆಯಲಾಗಿದೆ. ರಾಜ್ಯದಲ್ಲಿ 9ನೇ ಶಾಖೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ.

ಎನ್ಎಬಿಎಲ್-1 ಮಾನ್ಯತೆ:

ಟೆನೆಟ್ ಸಿಇಒ ಹಾಗೂ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಎಚ್.ಕೆ. ಆನಂದ್ ಮಾತನಾಡಿ, ರೋಗನಿರ್ಣಯ ಮತ್ತು ಆರೋಗ್ಯ ರಕ್ಷಣೆಯ ವ್ಯವಸ್ಥೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ವೈದ್ಯರು ಮತ್ತು ತಂತ್ರಜ್ಞರನ್ನು ಸೇರಿದಂತೆ 1000 ಹೆಚ್ಚು ನುರಿತ ಮಾನವ ಸಂಪನ್ಮೂಲಗಳನ್ನು ವಿಸ್ತರಿಸುವ ಮತ್ತು ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 2500 ಹೆಚ್ಚಾಗಿಸುವ ಗುರಿಯನ್ನು ಹೊಂದಿದ್ದಾರೆ. ಎನ್ಎಬಿಎಲ್-1 ಮಾನ್ಯತೆ ಪಡೆದ ಭಾರತದ ಹಾಗೂ ಕರ್ನಾಟಕ ಪ್ರಪ್ರಥಮ ರೇಡಿಯೋಲೋಜಿ ಸಂಸ್ಥೆಯಾಗಿದೆ ಎಂದರು.

3000 ಹೆಚ್ಚು ಪ್ರಯೋಗಾಲಯ ಪರೀಕ್ಷೆಗಳನ್ನೊಳಗೊಂಡ, ಅತ್ಯಂತ ಹೆಚ್ಚಿನ ಪರೀಕ್ಷಾ ಪಟ್ಟಿಯನ್ನು ಹೊಂದಿದ ಎನ್ಎಬಿಎಲ್ ಪ್ರಮಾಣೀಕೃತ ಪ್ರಯೋಗಾಲಯವಾಗಿದೆ. ತಂತ್ರಜ್ಞಾನವನ್ನು ಮತ್ತು ಸ್ಕ್ಯಾನ್ ಮಾಡಿರುವ ದತ್ತಾಂಶವನ್ನು ಇಟ್ಟುಕೊಂಡು ರೋಗಿಗಳಿಗೆ ಕಡಿಮೆ ಸಮಯದಲ್ಲಿ ಸ್ಕ್ಯಾನಿಂಗ್ ಮತ್ತು ನಿಖರ ಫಲಿತಾಂಶಗಳನ್ನು ನೀಡಲು ಒಹಾಯೋ ವಿಶ್ವವಿದ್ಯಾಲಯ, ಯುನೈಟೆಡ್ ಹೆಲ್ತ್ ಕೇರ್ ಮತ್ತು ಸೀಮನ್ಸ್ ಹೆಲ್ತ್ ಕೇರ್ ನೊಂದಿಗೆ ಒಪ್ಪಂದ ಹೊಂದಿದೆ ಎಂದರು.

ಮೈಸೂರಿನಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ರೋಗನಿರ್ಣಯದ ಮೂಲಸೌಕರ್ಯವನ್ನು, ಪ್ರಯೋಗಾಲಯ ಸೇವೆ ಮತ್ತು ಅರೋಗ್ಯ ರಕ್ಷಣೆ ದಿಕ್ಕಿನಲ್ಲಿ ಜನರಿಗೆ ಸೌಲಭ್ಯವು ಸುಲಭವಾಗಿ ದಕ್ಕುವಂತೆ ಮಾಡಿದೆ. ಈ ಸಂಯೋಜಿತ ಸೌಲಭ್ಯದಲ್ಲಿ ಎಂಆರ್ ಐ, ಸಿಟಿ, ಪ್ರಯೋಗಾಲಯ ಸೇವೆಗಳು, ಕಲರ್ ಡಾಪ್ಲರ್ ನೊಂದಿಗಿನ ಅಲ್ಟ್ರಾಸೌಂಡ್, ಬಿಎಂಡಿ, ಡೆಕ್ಸಾ, ಕ್ಷ- ಕಿರಣ, 2ಡಿ ಎಕೋ, ಟಿಎಂಟಿ, ಪಿಎಫ್ಟಿ, ಮ್ಯಾಮೋಗ್ರಫಿ, ಈಸಿಜಿ, ಈಈಜಿ, ಈಎನ್ಎಂಜಿ ಆಡಿಯೊಮೆಟ್ರಿ, ಓಪಿಜಿ, ವಿವಿಧ ಔದ್ಯೋಗಿಕ ಸಂಸ್ಥೆಗಳಲ್ಲಿ ನಡೆಸುವ ಕಾರ್ಪೊರೇಟ್ ಸ್ಕ್ರೀನಿಂಗ್, ಆಸ್ಪತ್ರೆ ಪ್ರಯೋಗಾಲಯ ನಿರ್ವಹಣೆ ಮತ್ತು ಆರೋಗ್ಯ ತಪಾಸಣಾ ಪ್ಯಾಕೇಜ್ ಗಳನ್ನು ಹೊಂದಿದೆ ಎಂದು ಅವರು ವಿವರಿಸಿದರು.

ಟೆನೆಟ್ ಡಯಾಗ್ನೋಸ್ಟಿಕ್ಸ್ ತನ್ನಲ್ಲಿರುವ 200 ಹೆಚ್ಚಿನ ವೈದ್ಯರು ಮತ್ತು 1200 ಮಿಗಿಲಾದ ತಂತ್ರಜ್ಞರ ಜೊತೆಗೆ ಇನ್ನೂ 1000 ಕೌಶಲ್ಯಭರಿತ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಇದರಿಂದ ತನ್ನ ಒಟ್ಟು ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸಮುದಾಯದ ಆರೋಗ್ಯ ಅಗತ್ಯತೆ ಪೂರೈಸುವ ಒಟ್ಟು 2500 ಸಮರ್ಪಿತ ಸಿಬ್ಬಂದಿ ವರ್ಗವನ್ನು ತನ್ನ ಉದ್ಯೋಗಿ ವಲಯಕ್ಕೆ ಸೇರಿಸಿಕೊಳ್ಳಲಿದೆ. ಪ್ರಸ್ತುತ ಮೈಸೂರು ಶಾಕೆಯಲ್ಲಿ 50 ವೈದ್ಯರು, ತಂತ್ರಜ್ಞರು ಮತ್ತು ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ ಎಂದರು.

ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು, ಟೆನೆಟ್ ಡಯಾಗ್ನೋಸ್ಟಿಕ್ಸ್ ಕಾರ್ಯನಿರ್ವಾಹಕ ನಿರ್ದೇಶಕ ದೇವಿನೇನಿ ಶ್ರೀಚರಣ್, ಸೇಲ್ಸ್ ಅಂಡ್ ಮಾರ್ಕೆಟಿಂಗ್ ಅಧ್ಯಕ್ಷ ಎಚ್.ಎನ್. ವಿಶ್ವನಾಥ್, ಚೀಫ್ ಪ್ಯಾಥಾಲಜಿಸ್ಟ್ ಡಾ.ಎಂ.ಜಿ. ಸತೀಶ್, ಲೀಡ್ ರೇಡಿಯಾಲಜಿಸ್ಟ್ ಡಾ.ಡಿ.ಕೆ. ಶ್ವೇತಾ, ಕನ್ಸಲ್ಟೆಂಟ್ ಪ್ಯಾಥಾಲಜಿಸ್ಟ್ ಡಾ.ಎ.ಎನ್. ಧನ್ಯಾ ಇದ್ದರು.ಟೆನೆಟ್ ಡಯಾಗ್ನೋಸ್ಟಿಕ್ಸ್ ಮೈಸೂರು ಶಾಖೆಯಲ್ಲಿ 3 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ ಆಂಬ್ಯುಲೆನ್ಸ್ ಸೌಲಭ್ಯ, ಮನೆಗಳಿಂದ ಮಾದರಿ ಸಂಗ್ರಹ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.

- ಎಚ್.ಎನ್. ವಿಶ್ವನಾಥ್, ಸೇಲ್ಸ್ ಅಂಡ್ ಮಾರ್ಕೆಟಿಂಗ್ ಅಧ್ಯಕ್ಷರು, ಟೆನೆಟ್ ಡಯಾಗ್ನೋಸ್ಟಿಕ್ಸ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!