ಉಗ್ರರ ಅಡಗುತಾಣ ದ್ವಂಸ : ಕನ್ನಡಸೇನೆ ಸಂಭ್ರಮಾಚರಣೆ

KannadaprabhaNewsNetwork |  
Published : May 09, 2025, 12:31 AM IST
ಉಗ್ರರ ಅಡಗತಾಣಗಳನ್ನು ದ್ವಂಸಗೊಳಿಸಿ ನಾರಿಯರ ಸಿಂದೂರಕ್ಕೆ ಪ್ರತಿ ಕಾರ ತೀರಿಸಿಕೊಂಡ ವೀರ ಯೋಧರ ಸೇವಾ ಕಾರ್ಯ ಶ್ಲಾಘಿಸಿ ಗುರುವಾರ ಜಿಲ್ಲಾ ಕನ್ನಡಸೇನೆ ಕಾರ್ಯ ಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಿಹಿಹಂಚಿ ಸಂಭ್ರಮಾಚರಣೆ ನಡೆಸಿದರು | Kannada Prabha

ಸಾರಾಂಶ

ಚಿಕ್ಕಮಗಳೂರು: ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿ ನಾರಿಯರ ಸಿಂದೂರಕ್ಕೆ ಪ್ರತಿಕಾರ ತೀರಿಸಿಕೊಂಡ ವೀರ ಯೋಧರ ಸೇವಾ ಕಾರ್ಯ ಶ್ಲಾಘಿಸಿ ಗುರುವಾರ ಜಿಲ್ಲಾ ಕನ್ನಡಸೇನೆ ಕಾರ್ಯ ಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಿಹಿಹಂಚಿ ಸಂಭ್ರಮಾಚರಣೆ ನಡೆಸಿದರು.

ಚಿಕ್ಕಮಗಳೂರು: ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿ ನಾರಿಯರ ಸಿಂದೂರಕ್ಕೆ ಪ್ರತಿಕಾರ ತೀರಿಸಿಕೊಂಡ ವೀರ ಯೋಧರ ಸೇವಾ ಕಾರ್ಯ ಶ್ಲಾಘಿಸಿ ಗುರುವಾರ ಜಿಲ್ಲಾ ಕನ್ನಡಸೇನೆ ಕಾರ್ಯ ಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಿಹಿಹಂಚಿ ಸಂಭ್ರಮಾಚರಣೆ ನಡೆಸಿದರು.ಈ ವೇಳೆ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಜೀವನದ ಸಂತೋಷವನ್ನು ಕಳೆಯಲು ಆಗಮಿಸಿದ ಪ್ರವಾಸಿಗರ ಮೇಲೆ ಹೀನಕೃತ್ಯ ಮೆರೆದ ಉಗ್ರಗ್ರಾಮಿಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರದ ದಿಟ್ಟನಿರ್ಧಾರಕ್ಕೆ ಕೈ ಜೋಡಿಸಿದ ಸೈನಿಕರು ಉಗ್ರತಾಣಗಳನ್ನು ಪುಡಿಪುಡಿಗೊಳಿಸಿ ತಕ್ಕಉತ್ತರ ನೀ ಡಿರುವುದು ಹೆಮ್ಮೆಯ ಸಂಗತಿ ಎಂದರು.ಪ್ರತಿ ಬಾರಿ ಭಾರತದ ಮೇಲೆ ಸುಳ್ಳು ಆರೋಪ, ಏಕಾಏಕಿ ದಾಳಿ ನಡೆಸುವ ಪಾಕಿಸ್ತಾನಕ್ಕೆ ಭಾರತೀ ಯರು ಯೋಧರು ಆಪರೇಷನ್ ಸಿಂದೂರದ ಮೂಲಕ ಪಾಠಕಲಿಸಿ, ನೊಂದವರಿಗೆ ನ್ಯಾಯ ಒದಗಿಸಿದ್ದಾರೆ. ಭಾರತೀಯರು ಶಾಂತಿಪ್ರಿಯರು, ಕೆಣಕಿದರೆ ಸಿಡಿದೇಳಲಿದ್ದೇವೆ ಎಂಬುವುದನ್ನು ಈ ಯುದ್ಧದಲ್ಲಿ ಸಾಬೀತುಪಡಿಸಿದೆ ಎಂದರು. ಪ್ರಪಂಚದ ಬಲಾಡ್ಯ ರಾಷ್ಟ್ರಗಳು ಭಾರತ ಕೈಗೊಂಡ ಆಪರೇಷನ್ ಸಿಂದೂರ್ ಯುದ್ಧದಿಂದ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೇ ಭಾರತದ ಪರವಾಗಿ ನಿಂತುಕೊಳ್ಳಲು ಪ್ರಧಾನಿಗಳ ಶಕ್ತಿಯೇ ಮೂಲ ಎಂದ ಅವರು ಅಮಾಯಕರನ್ನು ಕೊಲ್ಲುವ ಸಂಸ್ಕೃತಿ ಬೆಳೆಸಿಕೊಂಡಿರುವ ಪಾಪಿ ಪಾಕಿಸ್ತಾನ ಉಗ್ರ ನೆಲೆಗಳನ್ನು ಹುಡುಕಿ ಧ್ವಂಸ ಮಾಡಿರುವ ಯೋಧರಿಗೆ ದೊಡ್ಡದೊಂದು ನಮನ ಎಂದು ತಿಳಿಸಿದರು.ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕನ್ನಡಸೇನೆ ಕಾರ್ಯಕರ್ತರು ಶತೃದೇಶದ ವಿರುದ್ಧ ಎದೆಗುಂದದೇ ಭಾರತಾಂಬೆ ರಕ್ಷಣೆಗೆ ಸದಾ ಸಿದ್ಧರಾಗಿದ್ದೇವೆ. ಭಾರತೀಯರಿಗೆ ನೆಮ್ಮದಿ ಬದುಕು ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯಾವುದೇ ಕ್ಷಣದಲ್ಲೂ ಹೋರಾಟಕ್ಕೆ ಕಾರ್ಯಕರ್ತರು ಮುಂದಾಗುತ್ತೇವೆ ಎಂದು ಹೇಳಿದರು.ಕನ್ನಡಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ ಆಪರೇಷನ್ ಸಿಂದೂರ್ ಯುದ್ಧದಲ್ಲಿ ಕೇಂದ್ರ ಸರ್ಕಾರ ಸ್ತ್ರೀಯರ ನೇತೃತ್ವದಲ್ಲಿ ಭಾರತೀಯ ನಾರಿಯರಿಗೆ ನ್ಯಾಯ ಒದಗಿಸಿರುವುದು ಹೆಮ್ಮೆಯ ವಿಚಾರ ಇನ್ನೂ ಮುಂದೆ ಪಾಕಿಸ್ತಾನ ಭಾರತದ ತಂಟೆಗೆ ಬಂದರೆ ಭೂಪಟದಲ್ಲಿ ಆ ದೇಶದ ನಕ್ಷೆಯೇ ಮರೆಯಾಗಲಿದೆ ಎಂಬುದು ಯುದ್ಧದಲ್ಲಿ ನೈಜವಾಗಿ ತಿಳಿಸಿದೆ ಎಂದರು.ಈ ಸಂದರ್ಭದಲ್ಲಿ ಕನ್ನಡಸೇನೆ ಮುಖಂಡರಾದ ಅನ್ವರ್, ಜಯಪ್ರಕಾಶ್, ಶಂಕರೇಗೌಡ, ಪಾ ಲಾಕ್ಷಿ, ಜೀವನ್, ನವೀನ್‌ ಕುಮಾರ್, ಅನಿಲ್‌ಆನಂದ್, ಮೋಹನ್, ಟೋನಿ, ಭಾರತಿ, ದೇವರಾಜ್, ನಿಲೇಶ್ ಮತ್ತಿ ತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ