ಭಯೋತ್ಪಾದಕರು, ನುಸುಳುಕೋರರ ಗುರುತು ಮಾಡಲಾಗುತ್ತಿದೆ: ಅರವಿಂದ ಲಿಂಬಾವಳಿ

KannadaprabhaNewsNetwork |  
Published : May 02, 2025, 11:45 PM IST
45 | Kannada Prabha

ಸಾರಾಂಶ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆಯಾಗಿರುವುದು ಖಂಡನೀಯ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಇಡೀ ರಾಜ್ಯದ ಜನತೆ ಸುಹಾಸ್ ಶೆಟ್ಟಿ ಕುಟುಂಬ ಜೊತೆ ಇದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಕೊಲೆಯಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆ ಆಗಬೇಕು

ಕನ್ನಡಪ್ರಭ ವಾರ್ತೆ ಮೈಸೂರುಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿರುವವರು ಮತ್ತು ಬಾಂಗ್ಲಾದೇಶದಿಂದ ನುಸುಳಿರುವ ನುಸುಳುಕೋರರ ಗುರುತು ಮಾಡುವ ಕೆಲಸ ಆಗಿದೆ. ಅವರನ್ನ ಪತ್ತೆ ಹಚ್ಚುವ ಕೆಲಸ ಆಗಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ನಗರದ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಪೆಹಲ್ಗಾಮ್ ನಲ್ಲಿ ಧರ್ಮ ಗುರುತಿಸಿ ಹಿಂದೂಗಳನ್ನು ಕೊಂದಿದ್ದಾರೆ. ಈ ಘಟನೆ ನಮಗೆ ದುಃಖಕರವಾದದ್ದು. ಪಾಕಿಸ್ತಾನ, ಬಾಂಗ್ಲಾ ವಲಸಿಗರು ದೇಶದ ಅಲ್ಲಲ್ಲಿ ಇದ್ದಾರೆ. ಈಗಾಗಲೇ ನಮ್ಮ ವಾರ್ ರೂಮ್ ಪ್ರಾರಂಭಿಸಿದ್ದೇವೆ. 400 ಕ್ಕಿಂತ ಹೆಚ್ಚು ಕರೆಗಳು ಬರುತ್ತಿವೆ. ಹಲವು ಮಾಹಿತಿ ರವಾನೆ ಆಗುತ್ತಿದೆ. ಬೋಗಸ್ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ವಾಸಿಸುತ್ತಿದ್ದಾರೆ. ಯಾರಾದರೂ ವಲಸಿಗರು ಇದ್ದರೆ ನಮ್ಮ ವಾರ್‌ರೂಂ ನಂಬರ್‌ ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.ಕರ್ನಾಟಕದಲ್ಲಿಯೂ ಹಲವರು ಇರುವ ಮಾಹಿತಿ ಇದ್ದು, ಯಾರದರೂ ಕಂಡುಬಂದಲ್ಲಿ ಮೊ. 90356 75734, 82176 86764 ನಂಬರ್ ಗೆ ಮಾಹಿತಿ ನೀಡಿ ಎಂದರು.ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆಯಾಗಿರುವುದು ಖಂಡನೀಯ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಇಡೀ ರಾಜ್ಯದ ಜನತೆ ಸುಹಾಸ್ ಶೆಟ್ಟಿ ಕುಟುಂಬ ಜೊತೆ ಇದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಕೊಲೆಯಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆ ಆಗಬೇಕು ಎಂದು ಅವರು ಹೇಳಿದರು.ರಮೇಶ್‌ ಜಾರಕಿಹೊಳಿಗೆ ಉತ್ತಮ ದಿನಗಳು ಬರಲಿ: ಇಂದು ರಮೇಶ್ ಜಾರಕಿ ಹೊಳಿ ಅವರ ಜನ್ಮದಿನ. ಈಗಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ದರ್ಶನ ಮಾಡಿದ್ದೇವೆ. ರಮೇಶ್ ಜಾರಕಿಹೊಳಿ ಅವರಿಗೆ ದೇವರ ಶಕ್ತಿ ನೀಡಲಿ. ಮುಂದಿನ ದಿನಗಳಲ್ಲಿ ಉತ್ತಮ ದಿನಗಳು ಬರಲಿ ಎಂದು ಕೇಳಿಕೊಂಡಿದ್ದೇನೆ. ತಾಯಿ ಆಶೀರ್ವಾದದಿಂದ ದುಷ್ಟ ಶಕ್ತಿಗಳು ನಿರ್ನಾಮ ಆಗಲಿ ಎಂದು ಪ್ರಾರ್ಥಿಸಿರುವುದಾಗಿ ಅರವಿಂದ ಲಿಂಬಾವಳಿ ಹೇಳಿದರು. ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಸಂಬಂಧ ಯತ್ನಾಳ್ ರನ್ನೇ ಕೇಳಿ. ನಾವು ಯತ್ನಾಳ್ ಜೊತೆ ಈ ವಿಚಾರ ಮಾತಾಡುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ