ಗಣೇಶ ದೇಗುಲಕ್ಕೆ ಕಲ್ಲೆಸೆದ ಆರೋಪಿಗಳ ಮಂಪರು ಪರೀಕ್ಷೆ ಮಾಡಿ

KannadaprabhaNewsNetwork |  
Published : Oct 09, 2024, 01:32 AM IST
ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ: ಶಾಸಕ ಯತ್ನಾಳ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಗಣಪತಿ ಚೌಕ್‌ದಲ್ಲಿನ ಗಣೇಶ ದೇವಸ್ಥಾನದ ಗಾಜಿಗೆ ಕಲ್ಲೆಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಈ ಮೂಲಕ ಕೃತ್ಯದ ಹಿಂದಿರುವ ಶಕ್ತಿಗಳನ್ನು ಬಯಲಿಗೆ ಎಳೆಯಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಗಣಪತಿ ಚೌಕ್‌ದಲ್ಲಿನ ಗಣೇಶ ದೇವಸ್ಥಾನದ ಗಾಜಿಗೆ ಕಲ್ಲೆಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಈ ಮೂಲಕ ಕೃತ್ಯದ ಹಿಂದಿರುವ ಶಕ್ತಿಗಳನ್ನು ಬಯಲಿಗೆ ಎಳೆಯಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಂತವಾಗಿರುವ ವಿಜಯಪುರ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಲೆಂದೆ ನಗರದ ಗಣಪತಿ ಚೌಕ್‌ದಲ್ಲಿನ ಹಿಂದೂಗಳ ಆರಾಧ್ಯದೈವ ಗಣೇಶ ದೇವಸ್ಥಾನಕ್ಕೆ ಕಲ್ಲೆಸೆದು, ಗಾಜು ಒಡೆದು ಹಾಕಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದು ಖಂಡನೀಯ.

ದೇವಸ್ಥಾನಕ್ಕೆ ಕಲ್ಲೆಸೆದ ಆರೋಪಿಗಳು ಅಪ್ರಾಪ್ತರಾಗಿದ್ದರೆ, ಇವರ ಹಿಂದಿರುವ ಶಕ್ತಿಗಳು ಯಾವುವು? ರಾಜಕೀಯ ವ್ಯಕ್ತಿಗಳ ಕೈವಾಡವಿದೆಯೇ? ಗಲಭೆ ಸೃಷ್ಟಿಸುವ ಸಂಘಟನೆಗಳ ಕುಮ್ಮಕ್ಕು ಇದೆಯೇ? ಎಂಬ ಸತ್ಯ ಹೊರ ಬರಬೇಕೆಂದರೆ, ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇವರ ಹಾಗೂ ಸಂಬಂಧಿಗಳು, ಗೆಳೆಯರು ಮತ್ತು ಟಕ್ಕೆಯಲ್ಲಿ ಯಾರ ಯಾರ ಜೊತೆ ಸಂಪರ್ಕ ಹೊಂದಿದ್ದಾರೋ ಎಲ್ಲರ ಮೊಬೈಲ್ ಕಾಲ್ ತಪಾಸಣೆ ನಡೆಸಬೇಕು. ಯಾರಾದರೂ ನಗರ ತೊರೆದಿದ್ದಾರೆಯೇ? ಎಲ್ಲರನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಈ ಕೃತ್ಯದಿಂದ ನಿಷೇಧಿತ ದೇಶದ್ರೋಹಿ ಸಂಘಟನೆಗಳು, ಬಾಂಗ್ಲಾ ನುಸುಳುಕೋರರು, ಸಿಮಿ ಸಂಘಟನೆಗಳು ವಿಜಯಪುರ ನಗರದಲ್ಲಿ ಸಕ್ರಿಯವಾಗುತ್ತಿವೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಬೇಕು. ಆರೋಪಿಗಳು ಗಾಂಜಾ, ಅಫೀಮ್‌ ಮತ್ತಿನಲ್ಲಿದ್ದರೆ ಅಥವಾ ಕುಡಿದ ಅಮಲಿನಲ್ಲಿದ್ದರೆ, ಅಪ್ರಾಪ್ತರು ಅವ್ಯಹತವಾಗಿ ಕುಡಿತದ ಚಟಕ್ಕೆ ಬಿದ್ದಿರುವುದು ಸಂಶಯ ಮೂಡುತ್ತಿದೆ.

ವಿಜಯಪುರ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಂಭವನೀಯ ಅನಾಹುತ ತಪ್ಪಿಸಲು ಗಣೇಶ ದೇವಸ್ಥಾನಕ್ಕೆ ಕಲ್ಲೆಸೆದು ಗಾಜು ಒಡೆದು ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

-------------

ಕೋಟ್‌

ದೇವಸ್ಥಾನಕ್ಕೆ ಕಲ್ಲೆಸೆದ ಆರೋಪಿಗಳು ಅಪ್ರಾಪ್ತರಾಗಿದ್ದರೆ, ಇವರ ಹಿಂದಿರುವ ಶಕ್ತಿಗಳು ಯಾವವು?. ರಾಜಕೀಯ ವ್ಯಕ್ತಿಗಳ ಕೈವಾಡವಿದೆಯೇ? ಗಲಭೆ ಸೃಷ್ಟಿಸುವ ಸಂಘಟನೆಗಳ ಕುಮ್ಮಕ್ಕು ಇದೆಯೇ? ಎಂಬ ಸತ್ಯ ಹೊರ ಬರಬೇಕೆಂದರೆ, ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆ ನಡೆಸಬೇಕು.

ನಿಷೇಧಿತ ದೇಶದ್ರೋಹಿ ಸಂಘಟನೆಗಳು, ಬಾಂಗ್ಲಾ ನುಸುಳುಕೋರರು, ಸಿಮಿ ಸಂಘಟನೆಗಳು ವಿಜಯಪುರ ನಗರದಲ್ಲಿ ಸಕ್ರಿಯವಾಗುತ್ತಿವೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಬೇಕು.

- ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕ

------------------

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ