ಕನ್ನಡಪ್ರಭ ವಾರ್ತೆ ಕನಕಗಿರಿ
ಪ್ರಧಾನಿ ಮೋದಿಯವರಿಗೆ ಕಪಾಳಕ್ಕೆ ಹೊಡೀರಿ ಎಂದು ಹೇಳಿರುವ ಸಚಿವ ಶಿವರಾಜ ತಂಗಡಗಿಗೆ ತಮ್ಮದೇ ಪಕ್ಷದ ಎಚ್.ಆರ್. ಶ್ರೀನಾಥರು ಕಪಾಳಕ್ಕೆ ಬಾರಿಸುವ ಮುನ್ಸೂಚನೆ ನೀಡಿದ್ದಾರೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ತಿರುಗೇಟು ಕೊಟ್ಟಿದ್ದಾರೆ.ಭಾನುವಾರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರ ರೋಡ್ ಶೋ ನಡೆಸಿ ಮಾತನಾಡಿದರು.
ಕಳೆದ ವಾರದ ಹಿಂದೆ ಗಂಗಾವತಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡುವಾಗ ಸಚಿವ ತಂಗಡಗಿ ಹಾಗೂ ಮಾಜಿ ವಿಪ ಸದಸ್ಯ ಎಚ್.ಆರ್. ಶ್ರೀನಾಥ ನಡುವೆ ಜಗಳವಾಗಿದೆ. ಇದು ಸಿದ್ದರಾಮಯ್ಯನವರ ಮುಂದೆ ನಡೆದಿದ್ದು, ನಂತರ ಮುಖ್ಯಮಂತ್ರಿ ಶ್ರೀನಾಥಗೆ ಮತನಾಡಲು ಅವಕಾಶ ನೀಡಿರುವ ವಿಡಿಯೋ ವೈರಲ್ ಆಗಿದೆ. ಶ್ರೀನಾಥ ವೇದಿಕೆಯ ಮೇಲೆ ತಂಗಡಗಿಗೆ ಕಪಾಳಕ್ಕೆ ಹೊಡೆಯುವಷ್ಟು ರೊಚ್ಚಿಗೆದ್ದಿದ್ದನ್ನು ನಾನು ವಿಡಿಯೋದಲ್ಲಿ ಕಂಡಿದ್ದೇನೆ ಎಂದರು.ಮೋದಿ ಪ್ರಧಾನಿಯಾಗುವುದು ನಿಶ್ಚಿತ. ಜಾಗತೀಕರಣದಲ್ಲಿ ಮೋದಿಯವರು ಹ್ಯಾಟ್ರಿಕ್ ಪ್ರಧಾನಿಯಾಗಿ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಹಾಗೂ ಭಾರತ ವಿಶ್ವಗುರು ಆಗುವುದರಲ್ಲಿ ಸಂಶಯವಿಲ್ಲ. ಕೊರೋನಾ ಲಸಿಕೆಯಿಂದ ಕೇಂದ್ರ ಸರ್ಕಾರ ದೇಶದ ಜನತೆಯ ಜೀವ ಉಳಿಸಿದೆ. ಲಸಿಕೆಯ ವಿಷಯದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ ಕಿಡಿಕಾರಿದರು.
ಮಾಜಿ ಶಾಸಕ ಬಸವರಾಜ ದಡೇಸೂಗುರು, ಮುಖಂಡರಾದ ನಾಗರಾಜ ಬಿಲ್ಗಾರ, ನಾಗಭೂಷಣ ಜನಾದ್ರಿ, ಡಿ.ಎಂ. ಅರವಟಗಿಮಠ, ಜಡಿಯಪ್ಪ ಮುಕ್ಕುಂದಿ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ಹನುಮಂತರೆಡ್ಡಿ, ಬಸವರಾಜ ಕೋರಿ, ಹರೀಶ ಪೂಜಾರ, ರಂಗಪ್ಪ ಕೊರಗಟಗಿ ಸೇರಿದಂತೆ ಇತರರು ಇದ್ದರು.ಬಾಕ್ಸ್ಕನಕಗಿರಿ ಕ್ಷೇತ್ರಕ್ಕೆ ಬಂದಿದ್ದೀನಿ ಬಾರಪ್ಪ ತಂಗಡಗಿ
ಮೋದಿಯವರ ಕಪಾಳಕ್ಕೆ ಹೊಡಿಬೇಕು ಎಂದಿರುವ ಲಾಟರಿ ಮಂತ್ರಿ ತಂಗಡಗಿ ಬಾರಪ್ಪ ಕನಕಗಿರಿಗೆ ಬಂದಿದ್ದೀನಿ ಬಾರಪ್ಪ ಕಪಾಳಕ್ಕೆ ಹೊಡಿ. ದಮ್ಮಿದ್ರೆ ಕಪಾಳಕ್ಕೆ ಹೊಡಿ ಬಾ ನೋಡೋಣ. ಜನಾರ್ದನರೆಡ್ಡಿ ತೀರ್ಮಾನ ಮಾಡಿದ್ರೆ ಒಂದು ಕ್ಷಣ ಇಲ್ಲ, ನಿನ್ನ ಕಪಾಳಕ್ಕೆ ಹೊಡೆಯೋದಕ್ಕೆ. ನಾನು ಸುಸಂಸ್ಕೃತನಾಗಿದ್ದರಿಂದ ತಂಗಡಗಿಗೆ ಕಪಾಳಕ್ಕೆ ಹೊಡೆಯೋದಕ್ಕೆ ಹೋಗಿಲ್ಲ. ಮೇ 7ರಂದು ಮತಗಟ್ಟೆಯಲ್ಲಿ ಡಾ. ಬಸವರಾಜಗೆ ಮತದಾನ ಮಾಡುವ ಮೂಲಕ ತಂಗಡಗಿ ಕಪಾಳಕ್ಕೆ ಹೊಡೀರಿ ಎಂದು ಮತದಾರರಿಗೆ ಮನವಿ ಮಾಡಿದ ರೆಡ್ಡಿ ಸಚಿವ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು. 5ಕೆಎನ್ಕೆ-2ಕನಕಗಿರಿ ಪಟ್ಟಣದಲ್ಲಿ ಶಾಸಕ ಜನಾರ್ಧನರೆಡ್ಡಿ ರೋಡ್ ಶೋ ನಡೆಸಿ, ಬಿಜೆಪಿ ಪರ ಮತಯಾಚಿಸಿದರು.