ಕನ್ನಡಪ್ರಭ ವಾರ್ತೆ ಇಂಡಿ
ವಿಜಯಪುರ ಜಿಲ್ಲೆಯಿಂದ ಇಂಡಿಯನ್ನು ಪ್ರತ್ಯೇಕಿಸಿ, ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಇಂಡಿ ಉಪವಿಭಾಗವನ್ನು ಸಂವಿಧಾನದ 371(ಜೆ) ವಿಧಿಗೆ ಸೇರ್ಪಡೆ ಮಾಡಬೇಕು ಎಂದು ಪುರಸಭೆಯ 23 ಸದಸ್ಯರು ಪಕ್ಷಬೇಧ ಮರೆತು ಗುರುವಾರ ಪುರಸಭೆಯಲ್ಲಿ ಠರಾವು ಪಾಸ್ ಮಾಡುವುದರ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.ನಂತರ ಮಾತನಾಡಿದ ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಮುಸ್ತಾಕ ಇಂಡಿಕರ, ಸುಧೀರ ಕರಕಟ್ಟಿ, ಸತೀಶ ಕುಂಬಾರ, ಬುದ್ದುಗೌಡ ಪಾಟೀಲ, ಇಂಡಿ ಗಡಿಭಾಗದಲ್ಲಿ ಇದ್ದು, ಶಿಕ್ಷಣ, ಸಾರಿಗೆ, ಉದ್ಯೋಗ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ರಾಜ್ಯದ ಕೊನೆಯ ತಾಲೂಕು ಆಗಿರುವುದರಿಂದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಇಂಡಿ ಶಾಖಾ ಕಾಲುವೆ ಮೂಲಕ ಹರಿಯುವ ನೀರು, ಟೆಲ್ ಎಂಡ್ ಇರುವುದರಿಂದ ತಾಲೂಕಿನ ಕೊನೆಯ ಭಾಗಕ್ಕೆ ತಲುಪುತ್ತಿಲ್ಲ. ಹೀಗಾಗಿ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಮಾಡುವುದು ರೈತರಿಗೆ ತೊಂದರೆಯಾಗಿದೆ. ಮಹಾರಾಷ್ಟ್ರದ ಪ್ರಭಾವ ಸಹಿಸಿಕೊಂಡು, ಕನ್ನಡವನ್ನು ಪ್ರೀತಿಸಿ, ಮೆರೆಸುತ್ತಿರುವ ಇಂಡಿ ತಾಲೂಕಿನ ಜನರು ಎಲ್ಲ ರಂಗದಲ್ಲಿ ಅಭಿವೃದ್ಧಿ ಸಾಧಿಸಲು ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೊಷಿಸಬೇಕು ಎಂದು ಅವರು ಸರ್ಕಾರಕ್ಕೆ ಠರಾವು ಪಾಸ್ ಮಾಡುವುದರ ಮೂಲಕ ಎಸಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಇಂಡಿ ಜಿಲ್ಲಾ ಕೇಂದ್ರವಾಗಲು ಸರ್ವ ಸದಸ್ಯರು ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು. ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಪೂಜಾರಿ ಹಾಗೂ ಪುರಸಭೆ ಸದಸ್ಯರಾದ ಭೀಮನಗೌಡ ಪಾಟೀಲ, ರೇಖಾ ಭೀಮಾಶಂಖರ ಮೂರಮನ, ಅನಸುಬಾಯಿ ಮಲ್ಲಿಕಾರ್ಜುನ ಕಾಲೇಬಾಗ, ಬನ್ನೆಮ್ಮ ಯಲ್ಲಪ್ಪ ಹದರಿ, ರೇಣುಕಾ ತಿಪ್ಪಣ್ಣ ಹದರಿ, ಶೈಲಜಾ ಶ್ರೀಶೈಲ ಪೂಜಾರಿ, ಸೈಪನ ಪವಾರ, ಸುಜಾತಾ ಬುದ್ದುಗೌಡ ಪಾಟೀಲ, ಜಹಾಂಗೀರ ಸೌದಾಗರ, ಭಾಗೀರಥಿ ನಾಗಪ್ಪ ಕುಂಬಾರ, ಇಸ್ಮಾಯಿಲ ಅರಬ, ಸಂಗೀತಾ ಸುಧೀರ ಕರಕಟ್ಟಿ, ಅನೀಲಗೌಡ ಬಿರಾದಾರ, ಮುಸ್ತಾಕ ಇಂಡಿಕರ, ಶಬ್ಬಿರ ಖಾಜಿ, ಅಸ್ಲಂ ಕಡಣಿ, ಅಯ್ಯುಬ ಬಾಗವಾನ, ಸಾಯಬಣ್ಣ ಮೂರಮನ, ಉಮೇಶ ದೇಗಿನಾಳ, ಲಿಂಬಾಜಿ ರಾಠೋಡ, ಜ್ಯೋತಿ ಪ್ರಕಾಶ ರಾಠೋಡ, ಕವಿತಾ ಜಯಚಂದ್ರ ರಾಠೋಡ, ದೇವೇಂದ್ರ ಕುಂಬಾರ, ಬುದ್ದುಗೌಡ ಪಾಟೀಲ, ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.--
ಕೋಟ್ಇಂಡಿ ತಾಲೂಕು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಯಾವುದೇ ಇದ್ದರೂ ಬರದ ಛಾಯೆಯಿಂದ ಮುಕ್ತಿ ಹೊಂದಿರುವುದಿಲ್ಲ. ಮಳೆ ಇಲ್ಲದೇ ಬೆಳೆಗಳು ಸಂಪೂರ್ಣ ಹಾಳಾಗುತ್ತಲೇ ಇವೆ. ಈ ಭಾಗದ ರೈತರ ಕಷ್ಟ ಹೇಳತೀರದು. ಹೀಗಾಗಿ ಈ ಎಲ್ಲ ಸಮಸ್ಯೆಗಳು ಪರಿಹಾರವಾಗಲು ಇಂಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು.
-ಅನಿಲಗೌಡ ಬಿರಾದಾರ, ಪುರಸಭೆ ಸದಸ್ಯ