ಗಮನ ಸೆಳೆದ 100 ಮೀ. ಉದ್ದದ ತ್ರಿವರ್ಣ ಧ್ವಜ

KannadaprabhaNewsNetwork |  
Published : May 27, 2025, 01:46 AM ISTUpdated : May 27, 2025, 01:47 AM IST
 ಫೋಟೋ: 26ಜಿಎಲ್‌ಡಿ1- ಗುಳೇದಗುಡ್ಡದಲ್ಲಿ ಸೋಮವಾರ ಜರುಗಿದ ತಿರಂಗಾ ಯಾತ್ರೆಯ ಮೆರವಣಿಗೆಯಲ್ಲಿ 100 ಮೀ. ರಾಷ್ಟ್ರ ಧ್ವಜ ದಾರಿಯುದ್ದಕ್ಕೂ ನೋಡುಗರ ಗಮನ ಸೆಳೆಯಿತು. | Kannada Prabha

ಸಾರಾಂಶ

ಪಾಕಿಸ್ತಾನದ ಉಗ್ರರ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಚರಣೆ ಯಶಸ್ವಿಯಾದ ಹಿನ್ನೆಲೆ ಸೋಮವಾರ ಪಟ್ಟಣದಲ್ಲಿ ಸುಧಾರಣೆ ಸಮಿತಿ ವತಿಯಿಂದ ತಿರಂಗಾ ಯಾತ್ರೆ ಜರುಗಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಾಕಿಸ್ತಾನದ ಉಗ್ರರ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಚರಣೆ ಯಶಸ್ವಿಯಾದ ಹಿನ್ನೆಲೆ ಸೋಮವಾರ ಪಟ್ಟಣದಲ್ಲಿ ಸುಧಾರಣೆ ಸಮಿತಿ ವತಿಯಿಂದ ತಿರಂಗಾ ಯಾತ್ರೆ ಜರುಗಿತು.

ಮೆರವಣಿಗೆಯು ಪಟ್ಟಣದ ಭಂಡಾರಿ ಕಾಲೇಜ್‌ ಸರ್ಕಲ್ ದಿಂದ ಪ್ರಾರಂಭವಾಗಿ ಪವಾರ ಕ್ರಾಸ್, ಝಳಕಿ ಗಂಟಿ, ಪುರಸಭೆ, ಸರಾಫ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ್‌, ಅರಳಿಕಟ್ಟಿ ಮುಖಾಂತರ ಹಾಯ್ದು ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆ ಹತ್ತಿರ ಬಂದು ವೇದಿಕೆ ಕಾರ್ಯಕ್ರಮ ನಡೆಯಿತು.

ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀಗಳು, ಕಮತಗಿ-ಕೋಟೆಕಲ್ ಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಶ್ರೀಗಳು, ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು, ಮುರುಘಾಮಠದ ಕಾಶೀನಾಥ ಶ್ರೀಗಳು, ನಗರ ಸುಧಾರಣಾ ಸಮಿತಿ ಅಧ್ಯಕ್ಷ ರಂಗಪ್ಪ ಶೇಬಿನಕಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ರಾಜಶೇಖರ ಶೀಲವಂತ, ಅಶೋಕ ಹೆಗಡಿ, ಕಮಲಕಿಶೋರ ಮಾಲಪಾಣಿ, ಈಶ್ವರಿ ಬ್ರಹ್ಮಕುಮಾರಿ ಅಶ್ರಮದ ಶಾಂತಕ್ಕ, ಡಾ.ಬಂಟನೂರ, ಡಾ.ನೀಲವಾಣಿ, ಡಾ.ಮಠ, ಡಾ.ಸೋನಿ, ಭಾಗ್ಯಾ ಉದ್ನೂರ, ಪ್ರಶಾಂತ ಜವಳಿ, ರವೀಂದ್ರ ಪಟ್ಟಣಶೆಟ್ಟಿ, ಶಿವಾನಂದ ಎಣ್ಣಿ, ಕ್ರೈಸ್ತ ಧರ್ಮಗುರು ಕೆ.ಆರ್. ರಾಯಚೂರ, ಟಿ.ಎಸ್. ಬೆನಕಟ್ಟಿ, ಹಿಂದೂ, ಮುಸ್ಲಿಂ , ಕ್ರೈಸ್ತ ಧರ್ಮ ಗುರುಗಳು, ವೈದ್ಯರು, ವಕೀಲರು, ಮಹಿಳೆಯರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಎನ್.ಸಿ.ಸಿ. ಕೆಡೆಟ್ ಗಳು, ಭುವನೇಶ ಪೂಜಾರಿ, ಸ್ಥಳೀಯ ಲಕ್ಷ್ಮೀ ಬ್ಯಾಂಕ್ ಸಿಬ್ಬಂದಿ, ಎಬಿವಿಪಿ ಕಾರ್ಯಕರ್ತರು, ಸಾರ್ವಜನಿಕರು ಭಾಗಿಯಾಗಿದ್ದರು.

ಪ್ರತಿಯೊಬ್ಬರ ಕೈಯಲ್ಲಿ ರಾಷ್ಟಧ್ವಜಗಳು, ಪ್ರತಿಯೊಬ್ಬರ ದೇಶ ಪ್ರೇಮದ ಘೋಷಣೆಗಳು, ಸೈನಿಕರಿಗೆ ಜೈಕಾರ, ನೋಡುಗರಲ್ಲಿ ದೇಶಭಕ್ತಿ ತುಂಬಿದವು. ಮೆರವಣಿಗೆಯಲ್ಲಿ ನೂರು ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಶಿಸ್ತುಬದ್ಧವಾಗಿ ಜನರು ದಾರಿಯುದ್ದಕ್ಕೂ ಹಿಡಿದುಕೊಂಡು ಬಂದರು. ಈ ದೃಶ್ಯ ನೋಡುಗರ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ