ಕನ್ನಡಪ್ರಭ ವಾರ್ತೆ ರಾವಂದೂರು
ಗ್ರಾಮದಲ್ಲಿ ಬಸವ ಬಳಗದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಮತ್ತು ಸಾಹಿತ್ಯವಾಗಿ ಈ ಎಲ್ಲಾ ರಂಗಕ್ಕೂ ಬೆಳಕನ್ನು ನೀಡಿದ ಬಸವಾದಿ ಶರಣರ ಕಾಲವೇ 12ನೇ ಶತಮಾನವಾಗಿದೆ, ಬಸವಣ್ಣನವರ ಬದುಕಿನ ಕಾಲವೇ ಒಂದು ಅದ್ಭುತ ಕಾಲವಾಗಿದೆ, ಇಂದಿನ ಜನಸಾಮಾನ್ಯರಿಗೆ ಬಸವಣ್ಣನವರ ತತ್ವ ಆದರ್ಶಗಳನ್ನು ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಅದನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.
ಬಸಣ್ಣನವರ ತತ್ವ ಆದರ್ಶಗಳನ್ನ ಈಗಿನಿಂದಲೂ ಪ್ರೋತ್ಸಾಹಿಸಿ ಬೆಳೆಸುವುದರಲ್ಲಿ ನಮ್ಮ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸುವುದೇ ತಾಯಿಂದಿರಾಗಿರುತ್ತಾರೆ, ಆದ್ದರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಹಾಗೂ ಶರಣರ ತತ್ವ ಆದರ್ಶಗಳನ್ನು ಬೆಳೆಸುವಲ್ಲಿ ಶಿವಶರಣೆಯರ ಕೊಡುಗೆ ಬಹಳ ಮುಖ್ಯ ಹಾಗೂ ಪ್ರಸ್ತುತ ಪ್ರಪಂಚದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಬಸವಣ್ಣನವರ ತತ್ವ ಆದರ್ಶಗಳೇ ಬಹಳ ಮುಖ್ಯ ಎಂದು ಇಡೀ ವಿಶ್ವವೇ ಇವರನ್ನು ಕೊಂಡಾಡುತ್ತಿದೆ ಎಂದರು.ಪಾಂಡವಪುರದ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬೇರೆ ದೇಶದ ಜನರನ್ನು ನಾವು ಮಂಗನಿಂದ ಮಾನವ ಎಂದು ಕರೆಯುತ್ತೇವೆ. ಆದರೆ ಭಾರತೀಯರನ್ನು ಋಷಿಮುನಿಗಳು ದೇವತೆಗಳ ಸಾಧು ಸಂತರು ಹಾಗೂ ಶಿವಶರಣರು ಅನುಯಾಯಿಗಳು ಆಗಿ ನಾವಿದ್ದೇವೆ, ಅವರ ಸಂತತಿಯೇ ನಾವುಗಳಾಗಿದ್ದೇವೆ, ಆದ್ದರಿಂದಲೇ ಭಾರತವನ್ನು ಸ್ವರ್ಗದ ನಾಡು ಎಂದು 12ನೇ ಶತಮಾನದ ಶಿವಶರಣರು ಬಣ್ಣಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾವಂದೂರು ಮುರುಘಮಠದ ಮೋಕ್ಷ ಪತಿ ಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯವನ್ನು ಇವತ್ತು ಶ್ರೀಮಂತ ಗೊಳಿಸಿದೆ ಎಂದರೆ ಅದಕ್ಕೆ ಮೂಲ ಕಾರಣವೇ ಬಸವಣ್ಣನವರು, 12ನೇ ಶತಮಾನದ ಶಿವಶರಣರ ವಚನಗಳೇ ಮೂಲ ಕಾರಣವಾಗಿದೆ, ಇಡೀ ವಿಶ್ವಕ್ಕೆ ಮೊದಲ ಸಂಸತ್ತನ್ನ ನೀಡಿದ್ದೆ 12ನೇ ಶತಮಾನದ ಬಸವಣ್ಣನವರು ಆದುದರಿಂದ ಇವರ ತತ್ವ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಪಾಲಿಸುವುದರ ಜೊತೆಗೆ ಉತ್ತಮ ಬದುಕಿಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.
ಕೆಂಪೇಗೌಡ ಪ್ರಶಸ್ತಿ ವಿಜೇತ ಪತ್ರಕರ್ತ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಶ್ರಮಿಸಿದ ದಾನಿಗಳು ಮತ್ತು ಯುವಕರನ್ನು ಅಭಿನಂದಿಸಿದರು.