ಜೀವನ ಸಾಧನೆ ಬದುಕಿನ ವಿಧಾನದಲ್ಲಿದೆ: ಮಹಾರಾಜ್‌

KannadaprabhaNewsNetwork |  
Published : May 17, 2024, 12:30 AM IST
ಕ್ಯಾಪ್ಷನಃ15ಕೆಡಿವಿಜಿ37ಃದಾವಣಗೆರೆ ತಾ.ಶಾಸ್ತ್ರಿಹಳ್ಳಿಯಲ್ಲಿ ನಡೆದ ಶ್ರೀ ಶಿವದೇವಾನಂದಗಿರಿ ಸ್ವಾಮಿಗಳ 24ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸ್ವಾಮಿ ಶ್ರೀ ತ್ಯಾಗೀಶ್ವರಾನಂದಜಿ  ಮಾತನಾಡಿದರು. | Kannada Prabha

ಸಾರಾಂಶ

ವಾಸ್ತವಿಕ ಸತ್ಯ ಎಂಬುದು ಒಂದೇ. ಆದರೆ ನಾವು ಅಜ್ಞಾನದಿಂದಾಗಿ ಗೊಂದಲದಲ್ಲಿ ಇರುತ್ತೇವೆ. ಮಹಾನ್ ವ್ಯಕ್ತಿಗಳ ಜೀವನಗಾಥೆಯ ಅಧ್ಯಯನದಿಂದ ಈ ಗೊಂದಲಕ್ಕೆ ಪರಿಹಾರ ಲಭ್ಯ ಎಂದು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಶ್ರೀ ತ್ಯಾಗೀಶ್ವರಾನಂದಜಿ ಮಹಾರಾಜ್ ಅಭಿಪ್ರಾಯಪಟ್ಟಿದ್ದಾರೆ.

- ಶಾಸ್ತ್ರಿಹಳ್ಳಿ ಅಭಯಾಶ್ರಮದಲ್ಲಿ ಶಿವದೇವಾನಂದಗಿರಿ ಶ್ರೀ ಪುಣ್ಯಾರಾಧನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ವಾಸ್ತವಿಕ ಸತ್ಯ ಎಂಬುದು ಒಂದೇ. ಆದರೆ ನಾವು ಅಜ್ಞಾನದಿಂದಾಗಿ ಗೊಂದಲದಲ್ಲಿ ಇರುತ್ತೇವೆ. ಮಹಾನ್ ವ್ಯಕ್ತಿಗಳ ಜೀವನಗಾಥೆಯ ಅಧ್ಯಯನದಿಂದ ಈ ಗೊಂದಲಕ್ಕೆ ಪರಿಹಾರ ಲಭ್ಯ ಎಂದು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಶ್ರೀ ತ್ಯಾಗೀಶ್ವರಾನಂದಜಿ ಮಹಾರಾಜ್ ಅಭಿಪ್ರಾಯಪಟ್ಟರು.

ಬುಧವಾರ ಶಾಸ್ತ್ರಿಹಳ್ಳಿಯ ಅಭಯಾಶ್ರಮದಲ್ಲಿ ಶ್ರೀ ಶಿವದೇವಾನಂದಗಿರಿ ಸ್ವಾಮಿಗಳ 24ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದ ಸಾಧನೆ ಬದುಕಿನ ವಿಧಾನದಲ್ಲಿದೆ. ಚಂಚಲ ಚಿತ್ತವು ಏಕಾಗ್ರಗೊಂಡಾಗ ಬ್ರಹ್ಮಜ್ಞಾನ ಪ್ರಾಪ್ತಿ ಮಾರ್ಗ ಸುಲಭ ಎಂದರು.

ಹಿರಿಯ ವ್ಯಂಗ್ಯಚಿತ್ರಕಾರ ಡಾ. ಎಚ್.ಬಿ.ಮಂಜುನಾಥ್ ''''''''ಶ್ರೀರಾಮ ರಾಮ ನಾಮ ಮಹಿಮೆ''''''''ಯ ಕುರಿತು ಮಾತನಾಡಿ, ''''''''ರಾಮ'''''''' ಎಂಬ ಎರಡಕ್ಷರದಲ್ಲಿ ''''''''ರಾ'''''''' ಎಂದಾಗ ದೇಹದ ಪಾಪವೆಲ್ಲವೂ ವಾಯುವಿನ ರೂಪದಲ್ಲಿ ಬಾಯಿಂದ ಹೊರಹೋಗುತ್ತದೆ, ''''''''ಮ'''''''' ಎಂದಾಗ ಪಾಪಗಳು ಒಳಹೋಗದಂತೆ ಬಾಯಿ ಮುಚ್ಚಿಕೊಳ್ಳುತ್ತದೆ. ರಾಮ ಎಂಬ ಎರಡಕ್ಷರವು ವಿಷ್ಣುವಿನ ಸಾವಿರ ಹೆಸರುಗಳಿಗೆ ಸಮತೂಕವುಳ್ಳದ್ದೆಂದು ಪರಮೇಶ್ವರರೇ ಪಾರ್ವತಿಗೆ ಹೇಳಿರುವುದು ಮಹಾಭಾರತದ ಅನುಶಾಸನ ಪರ್ವದ ವಿಷ್ಣು ಸಹಸ್ರನಾಮ ಪಠಣದಲ್ಲಿ ಗೊತ್ತಾಗುತ್ತದೆ ಎಂದರು.

''''''''ಈ ದೇಹವೇ ನಾನು'''''''' ಎಂಬ ''''''''ಅಹಂಕಾರ ಭಾವ'''''''' ಹಾಗೂ ''''''''ನನ್ನ ಕುಟುಂಬ ಸದಸ್ಯರು ಮಾತ್ರ ನನ್ನವರು'''''''' ಎಂಬ ''''''''ಮಮಕಾರ ಭಾವ'''''''' ದೂರ ಮಾಡಿಕೊಂಡು ವಿಶಾಲಭಾವ ಬೆಳೆಸಿಕೊಳ್ಳದೇ ಹೋದರೆ ಭಯಶೋಕಮೋಹಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಿಲ್ಲ. ಭಯಶೋಕಮೋಹಗಳು ದೂರವಾಗದೇ ಆನಂದ ಸ್ಥಿತಿ ಪ್ರಾಪ್ತವಾಗುವುದಿಲ್ಲ. ಆನಂದ ಸ್ಥಿತಿಯನ್ನು ಜಾಗೃತಾವಸ್ಥೆಯಲ್ಲೂ ಸಾಧ್ಯವಾಗಿಸಿಕೊಂಡವರೇ ನಿಜವಾದ ಮಹಾಪುರುಷರು. ಬ್ರಹ್ಮೀಭೂತ ಶ್ರೀ ಶಿವದೇವಾನಂದಗಿರಿ ಅವರು ಇದನ್ನು ಸಾಧಿಸಿಕೊಂಡವರು ಎಂದರು.

ಶ್ರೀ ಶಿವ ಶಿವದೇವಾನಂದಗಿರಿ ಅವರ ಪೂರ್ವಾಶ್ರಮದ ಮಾತೃಶ್ರೀ ಸರಸ್ವತಮ್ಮ ಮತ್ತು ಕುಟುಂಬ ವರ್ಗದವರು, ಸತ್ಯನಾರಾಯಣ ಮೂರ್ತಿ, ತುಂಬಿಗೆರೆ ಗೌಡ್ರು, ಭಕ್ತರು ಭಾಗವಹಿಸಿದ್ದರು.

ಅಭಯಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷ ರಾಜನಹಳ್ಳಿ ರಮೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ತ್ರಿವೇಣಿ ಪ್ರಾರ್ಥಿಸಿದರು. ಮಂಜಪ್ಪ ಮೇಸ್ಟ್ರು ಸ್ವಾಗತಿಸಿದರು. ಗಣೇಶ ಡಾ.ಕರಿಬಸಪ್ಪ ವಂದಿಸಿದರು.

- - - -15ಕೆಡಿವಿಜಿ37ಃ:

ದಾವಣಗೆರೆ ತಾಲೂಕಿನ ಶಾಸ್ತ್ರಿಹಳ್ಳಿಯಲ್ಲಿ ಶ್ರೀ ಶಿವದೇವಾನಂದಗಿರಿ ಸ್ವಾಮೀಜಿ 24ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸ್ವಾಮಿ ಶ್ರೀ ತ್ಯಾಗೀಶ್ವರಾನಂದಜಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ