ಇಮ್ಮಡಿ ಪುಲಕೇಶಿ ಮಹಾರಾಜರ ಸಾಧನೆ ಸಮಸ್ತ ಕನ್ನಡಿಗರಿಗೆ ಪ್ರೇರಣಾದಾಯಕ

KannadaprabhaNewsNetwork |  
Published : Apr 05, 2026, 02:15 AM IST
ರಾಣಿಬೆನ್ನೂರು ನಗರದ ಬಿಎಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ಕನ್ನಡಿಗರ ವಿಜಯ ದಿನವನ್ನು ಆಚರಿಸಲಾಯಿತು.  | Kannada Prabha

ಸಾರಾಂಶ

ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನ್ನು ಸೋಲಿಸಿ ಅಜೇಯನಾಗಿ ಹೊರಹೊಮ್ಮಿದ ಇಮ್ಮಡಿ ಪುಲಕೇಶಿ ಮಹಾರಾಜರ ಸಾಧನೆಯು ಸಮಸ್ತ ಕನ್ನಡಿಗರಿಗೆ ಪ್ರೇರಣಾದಾಯಕವಾಗಿದೆ ಎಂದು ಪ್ರೊ.ಎ. ಶಂಕರನಾಯ್ಕ ಹೇಳಿದರು.

ರಾಣಿಬೆನ್ನೂರು: ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನ್ನು ಸೋಲಿಸಿ ಅಜೇಯನಾಗಿ ಹೊರಹೊಮ್ಮಿದ ಇಮ್ಮಡಿ ಪುಲಕೇಶಿ ಮಹಾರಾಜರ ಸಾಧನೆಯು ಸಮಸ್ತ ಕನ್ನಡಿಗರಿಗೆ ಪ್ರೇರಣಾದಾಯಕವಾಗಿದೆ ಎಂದು ಪ್ರೊ.ಎ. ಶಂಕರನಾಯ್ಕ ಹೇಳಿದರು. ನಗರದ ಬಿಎಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ಉತ್ತರದ ಹರ್ಷವರ್ಧನನು ದಕ್ಷಿಣದಲ್ಲಿ ಸಾಮ್ರಾಜ್ಯ ವಿಸ್ತರಿಸಲು ಯತ್ನಿಸಿದಾಗ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿಯು ನರ್ಮದಾ ನದಿ ತೀರದಲ್ಲಿ ಅವನನ್ನು ಸೋಲಿಸಿ ದಕ್ಷಿಣ ಪಥೇಶ್ವರ ಎಂಬ ಬಿರುದು ಪಡೆದ ದಿನದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕನ್ನಡಿಗರ ವಿಜಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರೊ.ಪರಶುರಾಮ ಪವಾರ, ಪ್ರೊ. ಶಿವಕುಮಾರ ಬಿಸಲಳ್ಳಿ , ಡಾ. ರಾಜೀವ ಕೆ.ಎಂ, ಪ್ರೊ. ಅಶೋಕ ಬಣಕಾರ, ಮುತ್ತುರಾಜ ಸಿದ್ದಣ್ಣನವರ, ನಿಕೇತನ ಕಮ್ಮಾರ, ಲಕ್ಷ್ಮಿ ಹಣಚಿಕ್ಕಿ, ನಂದೀಶ ಕೊಪ್ಪದ, ಮುತ್ತು ನಾಯಕ, ಯುವರಾಜ, ಸುನೀಲ ತಳವಾರ, ಪವನಕುಮಾರ ಲಮಾಣಿ, ದೇವಿಕಾ ಚೌಟಗಿ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಿ ತಲಗೇರಿಯಲ್ಲಿ ಅಕ್ರಮ ಗೋಸಾಗಾಟಕ್ಕೆ ಗ್ರಾಮಸ್ಥರ ತಡೆ
ದೇಶದ ಅಭಿವೃದ್ಧಿಯಲ್ಲಿ ಶಿಕ್ಷರ ಪಾತ್ರ ಮಹತ್ವದ್ದು: ಸಚಿವ ಮಂಕಾಳ ವೈದ್ಯ