- ಸುಂಕದಕಟ್ಟೆಯಲ್ಲಿ ರೈತರು, ಗ್ರಾಮಸ್ಥರೊಂದಿಗೆ ಚರ್ಚಿಸಿ ರೇಣುಕಾಚಾರ್ಯ ಆಗ್ರಹ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯ ಸರ್ಕಾರ ಕೂಡಲೇ ವಕ್ಫ್ ಮಂಡಳಿ ಸಂಬಂಧ ರೈತರಿಗೆ ನೋಟಿಸ್ ನೀಡುವ ಕ್ರಮ ಹಿಂಪಡೆಯಬೇಕು. ವಕ್ಫ್ ಮಂಡಳಿಯನ್ನು ರಾಜ್ಯ ಮತ್ತು ದೇಶದಲ್ಲಿಯೇ ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.ತಾಲೂಕಿನ ಸುಂಕದಕಟ್ಟೆ ಗ್ರಾಮದ ಸರ್ವೆ ನಂಬರ್ 22ರಲ್ಲಿ 8 ಎಕರೆ 11 ಗುಂಟೆ ಜಮೀನು ಕೂಡ ವಕ್ಪ್ ಮಂಡಳಿ ಹೆಸರಿಗೆ ಮಂದೂರಾಗಿದ್ದು, ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿನ ರೈತರು ಹಾಗೂ ಗ್ರಾಮಸ್ಥರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಗಿರುವಂತೆ ದಾವಣಗೆರೆ ಜಿಲ್ಲೆ ಸೇರಿದಂತೆ ಹೊನ್ನಾಳಿ ತಾಲೂಕಿನಲ್ಲಿ ಕೂಡ ಕೋಟಿ ಕೋಟಿ ರು. ಬೆಲೆ ಬಾಳುವ ಸುಮಾರು 70 ಎಕರೆ ಜಮೀನುಗಳು ಕೂಡ ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿದೆ. ಈ ಹಿಂದೆ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಅಲ್ಪಸಂಖ್ಯಾತ ಅಧಿಕಾರಿಗಳ ಹುನ್ನಾರದಿಂದ ಅವಳಿ ತಾಲೂಕುಗಳಲ್ಲಿನ ಹಲವಾರು ಜಮೀನುಗಳು ವಕ್ಫ್ ಬೋರ್ಡ್ ಹೆಸರಿಗೆ ಆಗಿವೆ ಎಂದು ದೂರಿದರು.ಜಮೀನನ್ನು ಮಸೀದಿ ನಿರ್ಮಿಸಲು ವಶಕ್ಕೆ ಪಡೆಯಲು ಪೊಲೀಸ್ ಮತ್ತು ಸರ್ವೆಯರನ್ನು ಕರೆತಂದಿದ್ದರು. ಆಗ ಗ್ರಾಮಸ್ಥರಿಂದ ವಿಷಯ ತಿಳಿದು ಅಧಿಕಾರಿಗಳಿಗೆ ಹಿಂದಿರುಗುವಂತೆ ತಾನು ಸೂಚನೆ ನೀಡಿ, ಈ ಪ್ರದೇಶ ಆಕ್ರಮಿಸಿಕೊಳ್ಳದಂತೆ ತಡೆಹಿಡಿಯುವ ಕೆಲಸ ಮಾಡಿದ್ದೆ. ಇದೇ ರೀತಿ ತುಂಗಭದ್ರಾ ನದಿ ಸಮೀಪದಲ್ಲಿ ಕೂಡ 13 ಎಕರೆ ಹಾಗೂ ರಾಘವೇಂದ್ರ ಸ್ವಾಮಿ ಮಠದ ಸಮೀಪ 12 ಎಕರೆ ಭೂಮಿಯನ್ನು ಯಾರ ಗಮನಕ್ಕೂ ತಾರದೇ ವಕ್ಫ್ ಸಮಿತಿ ಹೆಸರಿಗೆ ಮಾಡಲಾಗಿದೆ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಜೆ.ಕೆ.ಸುರೇಶ್, ರೈತ ಸಂಘದ ಸುಂಕದಕಟ್ಟೆ ಕರಿಬಸಪ್ಪ, ಗ್ರಾ.ಪಂ., ಅಧ್ಯಕ್ಷ ಶ್ರೀನಾಥ್, ಸದಸ್ಯಎಸ್.ಆರ್.ಮಂಜಪ್ಪ, ಎಸ್.ಎಚ್. ಮಂಜುನಾಥ್, ಎಸ್.ಕೆ. ಕರಿಬಸಪ್ಪ, ಬೂತ್ ಅಧ್ಯಕ್ಷ ಎಸ್.ಜಿ.ಮಂಜುನಾಥ್, ಎ.ಕೆ. ರುದ್ರಪ್ಪ, ಗ್ರಾಮಸ್ಥರು ಇದ್ದರು.- - -
ಟಾಪ್ ಕೋಟ್ ಸಚಿವ ಜಮೀರ್ ಅಹಮದ್ ಸದಾ ಸಿಎಂ ಜೊತೆಗೆ ಇದ್ದುಕೊಂಡು ರಾಜ್ಯದಲ್ಲಿ ಅನೇಕ ರೈತರ ಸಾವಿರಾರು ಎಕರೆ ಭೂಮಿಯನ್ನು ವಕ್ಫ್ ಮಂಡಳಿಗೆ ಮಂಜೂರು ಮಾಡಿ, ಅದರ ಹೆಸರಿಗೆ ಮಾಡುವ ಮೂಲಕ ಸಚಿವ ಸ್ಥಾನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ವಕ್ಫ್ ಬೋರ್ಡನ್ನು ರದ್ದುಪಡಿಸಹಬೇಕು- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
- - --29ಎಚ್.ಎಲ್.ಐ2:
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುಂಕದಕಟ್ಟೆ ರೈತರು, ಗ್ರಾಮಸ್ಥರೊಂದಿಗೆ ಚರ್ಚಿಸಿದರು.