ಕನ್ನಡ ಪುಸ್ತಕ ಓದಿನ ಹವ್ಯಾಸ ಹೆಚ್ಚಿಸುವುದೇ ಉದ್ದೇಶ: ರವಿ ದಳವಾಯಿ

KannadaprabhaNewsNetwork |  
Published : Aug 07, 2025, 12:45 AM IST
ಲಕ್ಕವಳ್ಳಿಯಲ್ಲಿ ಶ್ರಾವಣ ಸಾಹಿತ್ಯ  ಸಂಭ್ರಮ ಕಾರ್ಯಕ್ರಮ   | Kannada Prabha

ಸಾರಾಂಶ

ತರೀಕೆರೆ, ಕನ್ನಡ ಪುಸ್ತಕಗಳ ಓದಿನ ಅರಿವಿನ ಹವ್ಯಾಸ ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದ್ದಾರೆ.

- ಲಕ್ಕವಳ್ಳಿಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ಪುಸ್ತಕಗಳ ಓದಿನ ಅರಿವಿನ ಹವ್ಯಾಸ ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮೀಪದ ಲಕ್ಕವಳ್ಳಿ ಗ್ರಾಮ ಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರಾವಣ ಮಾಸ ಅತ್ಯಂತ ಶ್ರೇಷ್ಠ ಮಾಸವಾಗಿದೆ. ಈ ಸಂದರ್ಭ ದಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮದ ಒಂದು ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಭಾಷೆ ಮೂಲಕ ವಿವಿಧ ವಿಚಾರ ತಿಳಿದುಕೊಳ್ಳಬಹುದಾಗಿದೆ. ಸಾಹಿತ್ಯದ ತಿಳುವಳಿಕೆ ಹಲವರ ಜೀವನ ಚರಿತ್ರೆ ಗಳ್ಳನ್ನೊದಿಕೊಂಡರೆ ಗಟ್ಟತನದ ಧ್ವನಿಯಾಗಿ, ಮಾನವೀಯತೆ ಸಹಕಾರ ಮೂರ್ತಿಯಾಗಿ ಜನಗಳೊಂದಿಗೆ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಬಹುದು ಇಂತಹ ವ್ಯಕ್ತಿತ್ವವನ್ನು ಸಾಹಿತ್ಯ, ಕಲೆ, ರಂಗಭೂಮಿ, ಜನಪದ, ತತ್ವಪದ, ಭಜನೆ ಹಾಗೂ ಸಾಂಸ್ಕೃತಿಕ ಚಿಂತನೆ ಮಾನವೀಯ ಮನುಷ್ಯನನ್ನಾಗಿ ರೂಪಿಸುವುದು ಎಂದು ಹೇಳಿದರು.

ಕನ್ನಡವನ್ನು ಬಳಸಿ, ಬೆಳೆಸಿ, ಉಳಿಸ ಬೇಕಿದೆ. ಸಾಹಿತ್ಯವನ್ನು ಮನನ ಮಾಡಿ ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ಲಕ್ಕವಳ್ಳಿ ಗ್ರಾಮಜ್ರೋತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ನಾಗೇಶ್ವರರಾವ್ ಜಾದವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ದಿನನಿತ್ಯದ ಜೀವನದಲ್ಲಿ ಜನಪದ ಸಾಹಿತ್ಯ ಹಾಸುಹೊಕ್ಕಾಗಿದೆ. ಮುಂದಿನ ಪೀಳಿಗೆಗೆ ಇದರ ಬಗ್ಗೆ ತಿಳಿಸುವಂತ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಶಿಕ್ಷಕರು ನಾಗೇಶ್ ಕೆ. ಮಾತನಾಡಿ ಜಾನಪದ ಕಲೆಗಳ ತವರೂರು ನಮ್ಮ ಕರ್ನಾಟಕ, ನಮ್ಮ ಹಿಂದಿನ ಹಳ್ಳಿಯ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಹಾಡುಗಳನ್ನು ಹಾಡುತ್ತಾ ನಂತರ ಅದು ಸಾಹಿತ್ಯವಾಗಿ ರೂಪಗೊಂಡಿತು, ಜನಪದ ಸಾಹಿತ್ಯ ಮತ್ತು ಕ್ರೀಡೆಗಳು ಹಬ್ಬ ಹರಿದಿನಗಳ ವಿಶೇಷತೆ ತಿಳಿಸುವ ಮೂಲಕ ಜನಪದ ಹಾಡು ಹಾಡಿದರು.ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಮಾತನಾಡಿ ಕನ್ನಡ ಭಾಷೆ ಸುಲಲಿತ ಭಾಷೆ, ವಿಶೇಷ ಸ್ಥಾನಮಾನ ಹೊಂದಿದೆ. ನಮ್ಮ ಮಾತೃಭಾಷೆ, ಹೀಗಾಗಿ ಕನ್ನಡಾಂಬೆಗೆ ಗೌರವ ಕೊಡಬೇಕು. ವಿದ್ಯಾರ್ಥಿಗಳಿಗೆ ಭವಿಷ್ಯ ವನ್ನು ರೂಪಿಸುವಲ್ಲಿ ಶಿಕ್ಷಕರ ಹಾಗೂ ಶಾಲೆಯ ಪಾತ್ರ ಬಹಳ ಮುಖ್ಯ, ಜೀವನದಲ್ಲಿ ಯಾವುದೇ ಹುದ್ದೆ ಪಡೆದರು ವಿಧೇಯತೆ, ವಿನಮ್ರತೆ ನಾವು ಹೊಂದಬೇಕು ಎಂದು ಹೇಳಿದರು. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಮಾತನಾಡಿ ಜನಪದ ಸಾಹಿತ್ಯದ ಮಹತ್ವ ಹಾಗೂ ಸಾಹಿತ್ಯ ಸಂಭ್ರಮದ ಬಗ್ಗೆ ತಿಳಿಸಿದರು. ಕವಿ ಸುರೇಶ್ ರಾವ್ ಜಾದವ್ ಸ್ವರಚಿತ ಕವಿತೆ ವಾಚಿಸಿದರು

ಈ ಸಂಸ್ಥೆಯ ಉಪಾಧ್ಯಕ್ಷ ಲಕ್ಕವಳ್ಳಿ ರಮೇಶ್, ಹತ್ತಿ ರಾಮಚಂದ್ರಪ್ಪ, ನಟರಾಜ್, ಎನ್. ಆರ್. ವಿಜಯ, ದೈಹಿಕ ಶಿಕ್ಷಕ ಧರಣೇಶ್, ಅನಿಲ್ ಕುಮಾರ್ ಜಿ.ಡಿ. ಜಯಲಕ್ಷ್ಮಿ,ಸಹ ಶಿಕ್ಷಕ ಜಗದೀಶ್ ಎಂ.ಜಿ., ನಿಶ್ಚಿತ ಮತ್ತಿತರರು ಭಾಗವಹಿಸಿದ್ದರು.-

6ಕೆಟಿಆರ್.ಕೆ.1ಃ

ತರೀಕೆರೆಯ ಲಕ್ಕವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ರವಿದಳವಾಯಿ, ತಾ.ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರೀ ಶ್ರೀನಿವಾಸ್ ಲಕ್ಕವಳ್ಳಿ ಗ್ರಾಮ ಜ್ಯೋತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ನಾಗೇಶ್ವರರಾವ್ ಜಾದವ್, ಶಿಕ್ಷಕರು ನಾಗೇಶ್ ಕೆ. ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಮತ್ತಿತರರು ಇದ್ದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್